
ಚಿತ್ರ ವರದಿ ದಿನೇಶ್ ಕುಲಾಲ್
ಮಲಾಡ್ ಪೂರ್ವ ಕುರಾರ್ ವಿಲೇಜ್‌ನ ಜಾನ್ ಕಂಪೌಂಡ್‌ನಲ್ಲಿರುವ ಶ್ರೀದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಎಂ,13 ರಂದು ಶನಿವಾರ ವಾರ್ಷಿಕ ಮಹೋತ್ಸವ ಅಂಗವಾಗಿ ಬೆಳಿಗ್ಗೆನಿಂದ ರಾತ್ರಿವರೆಗೆ ವಿಶೇಷ ಪೂಜೆಗಳುಮತ್ತು ಪಾಲ್ಕಿ ಉತ್ಸವ,ಮಹಾಪೂಜೆ ದೇವಸ್ಥಾದ ಧರ್ಮದರ್ಶಿ ರವಿ ಸ್ವಾಮೀಜಿ ನಡೆಸಿದರು,

ಅಂದು ಬೆಳಿಗ್ಗೆ ಗಣಹೋಮ, ನವಕ ಪ್ರಧಾನ ಹೋಮ ಪಂಚಾಮೃತ ಅಭಿಷೇಕ ನವ ಕಳಸ ಅಭಿಷೇಕ ಅಲಂಕಾರ ಪೂಜೆ ಮಧ್ಯಾಹ್ನ ಮಹಾಪೂಜೆ ಮಹಾಮಂಗಳಾರತಿ ದೇವಿ ಆವೇಶ ಆ ಬಳಿಕ ತೀರ್ಥ ಪ್ರಸಾದ ನಡೆಯಿತು,
, ಸಂಜೆ ಕುಂಕುಮಾರ್ಚನೆ ಸೇವೆ ಆ ಬಳಿಕ ಬಲಿ ಮೂರ್ತಿಯೊಂದಿಗೆ ಪಾಲ್ಕಿ ಮೆರವಣಿಗೆ ದಿನೇಶ್ ಕೋಟ್ಯಾನ್ ಬಳಗದ ಕೊಂಬು ವಾದ್ಯ ಗಳು ,ಯಕ್ಷಗಾನದ ವೇಷ ಭೂಷಣಗಳೊಂದಿಗೆ ಕುರಾರ್ ವಿಲೇಜ್ ಸುತ್ತ ಮೆರವಣಿಗೆ ಸಾಗಿ ಬಂತು , ರಾತ್ರಿ ಮಹಾ ಮಂಗಳಾರತಿ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಪೂಜಾ ಕಾರ್ಯ ಸುಸಂಗವಾಗಿ ನಡೆಯಲು ಮಹಮ್ಮಾಯಿ ಸೇವಾ ಸಮಿತಿಯ ಗೌ.ಅಧ್ಯಕ್ಷ ಸಂತೋಷ್ ಕೆ. ಪೂಜಾರಿ, , ಉಪಾಧ್ಯಕ್ಷೆ ಆಶಾ ಪೂಜಾರಿ, ಗೌ.ಪ್ರ. ಕಾರ್ಯದರ್ಶಿ ಶೇಖರ್ ಡಿ. ಅಮೀನ್ , ಜೊತೆ ಕಾರ್ಯದರ್ಶಿ ಉದಯ ಬಿ. ಸಾಲ್ಯಾನ್, ಕೋಶಾಧಿಕಾರಿ ರಾಜು ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀಧರ್ ಪಾಟ್ಕರ್ , ಸಲಗರದ ಸುರೇಂದ್ರ ಶೆಟ್ಟಿ ಹೊಸ್ಮರು , ಚಂದ್ರಶೇಖರ್ ಶೆಟ್ಟಿ. ಕೊಕ್ಕರಣೆ, ಮಹಿಳಾ ವಿಭಾಗದ ಸದಸ್ಯರು ಕಾರ್ಯಕಾರಿ ಸಮಿತಿಯ ಸದಸ್ಯರು ಪೂಜಾ ಸಮಿತಿಯ ಸದಸ್ಯರು ಹಾಗೂ ಸರ್ವ ಸದಸ್ಯರು ಸಹಕರಿಸಿದರು,
ಪೂಜೆಯಲ್ಲಿ ಮಲಾಡಿನ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು , ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು