
ಭಜನೆ ಯುವ ಸಮುದಾಯವನ್ನು ಜಾಗೃತಗೊಳಿಸಿದೆ,,: ಡಿ. ಐ. ಮೂಲ್ಯ,
ಡೊಂಬಿವಲಿ,: ತುಳುವೆಲ್‌ಫೇರ್ ಎಸೋಸಿಯೇಶನ್ ಡೊಂಬಿವಲಿ ಇದರ ವತಿಯಿಂದ ದಾಸರ ಭಜನಾ ಸ್ಪರ್ಧೆಯು ಅಜ್ಜೆಪಾಡ ಶ್ರೀ ಅಯಪ್ಪ ಮಂದಿರ, ಸುಧರ್ಮ ಸಭಾಗೃಹದಲ್ಲಿ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರವಿ ಸನಿಲ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕ್ ಡೊಂಬಿವಲಿ ಶಾಖೆಯ ಪ್ರಬಂಧಕರಾದ ರಮೇಶ್ ಜಿ. ಸುವರ್ಣ ಮತ್ತು ಕುಲಾಲ ಸಂಘ ಮುಂಬಯಯ ಉಪಾಧ್ಯಕ್ಷರಾದ ಡಿ. ಐ. ಮೂಲ್ಯ, . ತುಳುವೆಲ್‌ಫೇರ್ ಎಸೋಸಿಯೇಶನ್ ಉಪಾಧ್ಯಕ್ಷರಾದ ವಸಂತ ಸುವರ್ಣ, ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ತುಳುಶ್ರೀ ಕೋ. ಆಪ್. ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷೆ ಪ್ರತಿಭಾ ಡಿ. ಕರ್ಕೇರ, ಕೋಶಾಧಿಕಾರಿ ಪ್ರಕಾಶ್ ಅಮೀನ್, ತುಳುವೆಲ್‌ಫೇರ್ ಎಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಪುತ್ರನ್, ಗೌ. ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ, ತೀರ್ಪುಗಾರರಾದ ಸುರೇಶ್ ಶೆಟ್ಟಿ ಶಿಬರೂರು, ಮಮತಾ ಶೆಟ್ಟಿ ಮತ್ತು ಜಯಲಕ್ಷ್ಮೀ ಪಾರ್ವತೀಕರ್ ವೇದಿಕೆಯಲ್ಲಿದ್ದರು.

ಗೌ. ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು, ಪದಾಧಿಕಾರಿಗಳನ್ನು ಉಪಸ್ಥಿತರಿದ್ದ ಎಲ್ಲಾ ಸಭಿಕರನ್ನು ಸ್ವಾಗತಿಸಿದರು.
ವಸಂತ ಸುವರ್ಣ ಪ್ರಸ್ತಾವಿಕ ಭಾಷಣವನ್ನಾಡಿದರು.
ಮುಖ್ಯ ಅತಿಥಿ ರಮೇಶ್ ಸುವರ್ಣರ ಪರಿಚಯವನ್ನು ವಸಂತ ಸುವರ್ಣರವರು ಮಾಡಿದರು. ರವಿ ಸನಿಲ್ ಮತ್ತು ವಸಂತ ಸುವರ್ಣ ಅವರಿಗೆ ಹೂ ಗುಚ್ಛ, ಶಾಲು ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಸತ್ಕರಿಸಿದರು.
ಅತಿಥಿ ಡಿ. ಐ. ಮೂಲ್ಯ ಅವರ ಪರಿಚಯವನ್ನು ಕುಶಲ ಜಿ. ಬಂಗೇರವರು ಮಾಡಿದರು. ಕುಮಾರ ಕಾಂಚನ್ ಮತ್ತು ಗಂಗಾಧರ ಶೆಟ್ಟಿಗಾರ್ ಅವರಿಗೆ ಹೂ ಗುಚ್ಛ, ಶಾಲು ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಸತ್ಕರಿಸಿದರು.
ಸುರೇಶ್ ಶೆಟ್ಟಿ ಶಿಬರೂರು ಅವರ ಪರಿಚಯವನ್ನು ವಸಂತ ಸುವರ್ಣರು ಮಾಡಿದರೆ, ರವಿ ಸನಿಲ್ ಮತ್ತು ಭಾಸ್ಕರ ಕೋಟ್ಯಾನ್ ಅವರಿಗೆ ಹೂ ಗುಚ್ಛ, ಶಾಲು ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಸತ್ಕರಿಸಿದರು.
ಜಯಲಕ್ಷ್ಮೀ ಪಾರ್ವತೀಕರ್ ಅವರ ಪರಿಚಯವನ್ನು ಲಕ್ಷ್ಮಣ್ ಸಿ. ಮೂಲ್ಯ ಮಾಡಿದರು. ಶಾಂತ ಅಮೀನ್ ಮತ್ತು ವಿನೋದ ಪುತ್ರನ್ ಅವರಿಗೆ ಹೂ ಗುಚ್ಛ, ಶಾಲು ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಸತ್ಕರಿಸಿದರು.
ಮಮತಾ ಶೆಟ್ಟಿ ಅವರ ಪರಿಚಯವನ್ನು ವಸಂತ ಸುವರ್ಣರು ಮಾಡಿದರು. ರೇಖಾ ಮೂಲ್ಯ ಮತ್ತು ಪ್ರತಿಭಾ ಕರ್ಕೇರ ಅವರಿಗೆ ಹೂ ಗುಚ್ಛ, ಶಾಲು ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಸತ್ಕರಿಸಿದರು.
ಪ್ರತಿಭಾ ಕರ್ಕೇರರವರನ್ನು ಕುಶಲಾ ಜಿ. ಬಂರೇರ ಮತ್ತು ಪ್ರತಿಭಾ ಯು ಕರ್ಕೇರ ಅವರು ಗೂ ಗುಚ್ಛ ನೀಡಿ ಸತ್ಕರಿಸಿದರು.
ಡಿ. ಐ, ಮೂಲ್ಯ ಅವರು ಮಾತನಾಡುತ್ತಾ ದಾಸರ ಭಜನಾ ಕಾರ್ಯಕ್ರಮ ಒಂದು ಉತ್ತಮ ಕಾರ್ಯಕ್ರಮ, ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ಭಜನೆ ಮಾಡುವುದರಿಂದ ನಮ್ಮ ಮನೆಯಲ್ಲಿದ್ದ ಏನಾದರೂ ದೋಷ ಇದ್ದರೆ ಪರಹಾರವಾಗುತ್ತದೆ. ಹರಿದಾಸ ಪರಂಪರೆಯಲ್ಲಿ ಮನೆಮಾತಾಗಿರುವ ಕನಕದಾಸರು ಮತ್ತು ಪುರಂದರ ದಾಸರು ಶ್ರೀ ವ್ಯಾಸತೀರ್ಥರ ಶಿಷ್ಯರು. ಇವರು ಸಂಗೀತದ ಮೂಲಕ ಭಕ್ತಿಯ ಮಾರ್ಗವನ್ನು ಬೋಧಿಸಿದ ಶ್ರೇಷ್ಟ
ಸಾಧಕರು. ಹಾಗೂ ಸಮಾನವಾದಿ ಮತ್ತು ವಿಚಾರವಾದಿಯಾಗಿದ್ದರು. ಜಾತಿ- ಮತ ಭೇದ ಭಾವ ಬಿಟ್ಟು ಮನುಷ್ಯರಂತೆ ಬದುಕಿ ಎಂದು ಜನತೆಗೆ ಭಕ್ತಿ ಕೀರ್ತನೆ ಭಜನೆಯ ಮೂಲಕ ಸಾರಿ ಸಾರಿ ಹೇಳಿದರು. ಭಜನೆಗೆ ಎಷ್ಟು ಶಕ್ತಿ ಇದೆ ಎಂದು ಕನಕನ ಕಿಂಡಿಯ ಕಥೆ ಹೇಳಿದರು.
ರಮೇಶ್ ಸುವರ್ಣ ಮಾತನಾಡುತ್ತಾ ಮನೆ ಮನೆಯಲ್ಲಿ ಭಜನೆ ಮಾಡುವ ಕಾಲವೊಂದಿತ್ತು. ನನ್ನ ಮನೆಯಲ್ಲಿ ಇಂದಿಗೂ ಭಜನೆ ಮಾಡುತ್ತಾರೆ. ನಮ್ಮ ಮಕ್ಕಳಿಗೆ ದಿನಾ ಭಜನೆ ಮಾಡುವ ಪರಿ ಪಾಠವನ್ನು ಹಿರಿಯರು ತಿಳಿಸಬೇಕು. ನನಗೆ ಈ ದೇವಸ್ಥಾನದ ಸಭಾಗೃಹದಲ್ಲಿ ಸತ್ಕರಿಸಿದ್ದಕ್ಕೆ ಧನ್ಯವಾದವನ್ನಿತ್ತರು.
ಸುರೇಶ್ ಶೆಟ್ಟಿ ಶಿಬರೂರು ಮಾತನಾಡುತ್ತಾ ಈ ದಾಸ ಸಾಹಿತ್ಯ ಭಜನಾ ಸ್ಪರ್ಧೆ ಮಕ್ಕಳಿಗೋಸ್ಕರ ಆಯೋಜಿಸಿದ್ದಕ್ಕೆ ಪ್ರಶಂಸಿದರು. ಮುಂಬಯಿಯಲ್ಲಿ ಅಲ್ಲಲ್ಲಿ ಭಜನೆ ನಡೆಯುತ್ತಿದೆ. ಇದು ಒಂದು ಭವಿಷ್ಯತ್ತಿಗೆ ಉತ್ತಮ ಸಂಕೇತ. ಮನೆಯಲ್ಲಿ ದಿನಾ ಭಜನೆ ಮಾಡಿ. ಒಳ್ಳೆಯ ಸಾಹಿತ್ಯ ಬರೆಯಿರಿ. ಇವತ್ತಿನ ಮಕ್ಕಳಿಗೆ ಕೊಟ್ಟ ಮೂರು ಮಿನಿಟಿನ ಸಮಯ ಮಕ್ಕಳಿಗೆ ಸಾಕಾಗುವುದಿಲ್ಲ. ಸಮಯವನ್ನು ಹೆಚ್ಚು ಕೊಡಿ. ಮಕ್ಕಳಿಗೆ ಹಾರ್ಮೋನಿಯಂ, ತಬಲಾ, ತಾಳ ಕೊಟ್ಟರೆ ಉತ್ತಮ ರಾಗಬದ್ಧವಾಗಿ ಭಜನೆ ಮಾಡಬಹುದು. ಕೋರಸ್ ಕಲಿಸಿರಿ ಎಂದು ಕಿವಿ ಮಾತು ಹೇಳಿದರು.
ಜಯ ಲಕ್ಷ್ಮೀ ಪಾರ್ವತೀಕರ್ ಮಾತನಾಡುತ್ತಾ ದಾಸರ ಭಜನಾ ಸ್ಪರ್ಧೆ ಇಟ್ಟು ಇಂದು ಶ್ಲಾಘನೀಯ ಕೆಲಸ ಮಾಡಿದ್ದೀರಿ. ಇದು ಕನ್ನಡ ಸಾಹಿತ್ಯದ ಒಂದು ಭಾಗ. ಸನಾತನ ಧರ್ಮ ಉಳಿಯುಂತಾಗುತ್ತದೆ. ಇಂತಹ ಕಾರ್ಯಕ್ರಮವು ಮುಂಬಯಿಯಲ್ಲಿ ತುಂಬಾ ಅಗತ್ಯವಿದೆ. ಮಕ್ಕಳಿಗೆ ಅವರ ತಂದೆ-ತಾಯಿಗಳು ಉತ್ತಮ ರೀತಿಯಲ್ಲಿ ಕಲಿಸಿದ್ದಾರೆ. ತಾಳ, ಸ್ವರ, ರಾಗ, ಲಯ ಎಲ್ಲವೂ ಉತ್ತಮವಾಗಿತ್ತು. ಭಜನೆ ಮಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದರು
ಮಮತಾ ಶೆಟ್ಟಿ ಮಾತನಾಡುತ್ತಾ ಕೇವಲ ದಾಸ ಸಾಹಿತ್ಯ ನನಗೆ ತುಂಬಾ ಇಷ್ಟ. ಅದೊಂದು ಚೌಕಟ್ಟಿನಲ್ಲಿರುವುದರಿಂದ ಸಂಗೀತಕ್ಕೆ ಶ್ರುತಿ, ತಾಳ ಅಗತ್ಯ ಬೇಕು. ಅದರಿಂದ ಹಾಡಿದರೆ ತುಂಬಾ ಚೆನ್ನಾಗಿರುತ್ತದೆ. ಇವತ್ತು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ನಿವೃತ್ತಿ ಹೊಂದುವ ವಸಂತ ಸುವರ್ಣರಿಗೆ ಎಲ್ಲಾ ಗಣ್ಯರು ಸೇರಿ ಹೂ ಗುಚ್ಛ, ಶಾಲು ನೀಡಿ ಸತ್ಕರಿಸಿದರು.
ಕಳೆದ ತಿಂಗಳು ತುಳು ವೆಲ್‌ಫೇರ್ ಎಸೋಸಿಯೇಶನ್ ವತಿಯಿಂದ ನಡೆದ ಲಕ್ಕಿಡಿಪ್ ಟೀಕೆಟ್‌ನ್ನು ಅತೀ ಹೆಚ್ಚು ಮಾರಿದ ವಿನೋದ ಡಿ. ಶೆಟ್ಟಿಯವರನ್ನು ಹೂಗುಚ್ಛ ನೀಡಿ ಅಭಿನಂದಿಸಲಾಯಿತು.
ಸುಮಾರು 49 ಮಕ್ಕಳು ಹಾಗೂ ವಯಸ್ಕರು, ಅಭಿಮಾನಿಗಳು ಈ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸ್ಪರ್ಧಾಳುಗಳ ಯಾದಿಯನ್ನು ದೇವದಾಸ್ ಎಲ್. ಕುಲಾಲ್ ವಾಚಿಸಿದರು. ಲಕ್ಷ್ಮಣ್ ಸಿ. ಮೂಲ್ಯ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಗೆ ಧನ್ಯವಾದವನ್ನು ಅರ್ಪಿಸಿದರು.
—————–
ಭಜನಾ ಸ್ಪರ್ಧೆ ಮೂಲಕ ಭಜನೆಗೆ ಸ್ಪೂರ್ತಿ,: ರವಿ ಸನಿಲ್
ರವಿ ಸನಿಲ್ ತನ್ನ ಅಧ್ಯಕೀಯ ಭಾಷಣದಲ್ಲಿ ದಾಸ ಸಾಹಿತ್ಯ ಲಕ್ಷೇಪ ಲಕ್ಷ ಇದೆ. ಬರೆದದ್ದೂ ಏನೂ ಇಲ್ಲ, ಬಾಯಿಯಿಂದ ಬಾಯಿ ಬಂದದ್ದು. ಸಾಧಾರಣ ಮೂರು ಲಕ್ಷ ದಾಸ ಸಾಹಿತ್ಯ ಇದೆ. ನಮ್ಮ ಸಂಸ್ಥೆಯು ಹಲವು ವರ್ಷದಿಂದ ದಾಸರ ಭಜನಾ ಸ್ಪರ್ಧೆಯನ್ನು ಅಯೋಜಿಸುತ್ತಾ ಬಂದಿದೆ. ಬಹುಮಾನ ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಭಾಗವಹಿಸಿದ ಎಲ್ಲರೂ ವಿಜೇತರೇ. ನಿಮ್ಮಲ್ಲೆರ ಸಹಕಾರ ಈ ಸಂಸ್ಥೆಗೆ ಅಗತ್ಯ. ಎಂದು ನುಡಿದರು.