
ಮುಂಬಯಿ ಮೆ1. ದಕ್ಷಿಣದ ಗಾಣಗಪುರವೆಂದೆ ಪ್ರಸಿದ್ಧಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳತಾಲೂಕಿನ ಕರೋಪಾಡಿ ಗ್ರಾಮದ. ಪ್ರಕೃತಿಯ ಮಡಿಲಲ್ಲಿರುವ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದ ಶ್ರೀ ಶ್ರೀ ಗುರುದೇವಾನಂದಸ್ವಾಮೀಜಿಯವರ ಆಶೀರ್ವಾದದಲ್ಲಿ ಮಹಾರಾಷ್ಟ್ರದ ಮುಂಬೈ ನಗರದಲ್ಲಿ 25 ವರ್ಷಗಳ ಹಿಂದೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಎಂಬ ಸಂಸ್ಥೆ ಪ್ರಾರಂಭಗೊಂಡಿದ್ದು ಇದೀಗ ಈ ಸಂಸ್ಥೆಗೆ 25 ರ ಸಂಭ್ರಮ,
ಈ ಬಗ್ಗೆ ಮೇ 1ರಂದು”ಹೋಟೆಲ್ ಸರೋಜ್ & ಸ್ವೀಟ್ ಮಾರ್ಟ್,” ಸುಮನ್ ನಗರ, ಚೆಂಬೂರ್, ಇಲ್ಲಿ. ಮಹಾ ರಾಷ್ಟ್ರ ಘಟಕದ ಅಧ್ಯಕ್ಷರಾದ ದಾಮೋದರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು,
ಮಹಾರಾಷ್ಟ್ರ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪೇಟೆ ಮನೆ ಪ್ರಕಾಶ್ ಶೆಟ್ಟಿ ಅವರು ಸ್ವಾಗತಿಸಿ ಘಟಕದ 25ನೇ ಸಂಭ್ರಮಾಚರಣೆಯನ್ನು ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಿ, ಭಕ್ತರಲ್ಲಿ ಜ್ಞಾನ ವೃದ್ಧಿಸುವುದಕ್ಕಾಗಿ ಗ್ರಂಥ ರಚನೆ, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನಿಧಿ ಸಮರ್ಪಣೆ, ಹಾಗೂ ಇತ್ಯಾದಿ ಹಲವು ಧಾರ್ಮಿಕ , ಸಾಮಾಜಿಕ. ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಯಲಿದೆ ಎಂದು ತಿಳಿಸಿದರು,
ಈ ರಜತ ಸಂಭ್ರಮದ ಆಚರಣೆಯ ಕಾರ್ಯಧ್ಯಕ್ಷರಾಗಿ ,ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಸ್ಥಾಪಕ ಅಧ್ಯಕ್ಷ, ಮುಂಬೈಯ ಹೈಕೋರ್ಟ್ ನ ಪ್ರಸಿದ್ಧ ನ್ಯಾಯವಾದಿ , ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಹಾಗೂ, ಉಪ ಕಾರ್ಯ ಧ್ಯಕ್ಷರಾಗಿ ಉದ್ಯಮಿ , ಘಟಕದ ಮಾಜಿ ಉಪ ಅಧ್ಯಕ್ಷ ಬೊಲ್ನಾಡ್ ಗುತ್ತು ಚಂದ್ರಹಾಸ್ ರೈ. ಕಾರ್ಯದರ್ಶಿಯಾಗಿ ಸಂಘಟಕ, ರಂಗ ಕಲಾವಿದ, ನಿರ್ದೇಶಕ ವಿ ಕೆ ಸುವರ್ಣ ನವಿ ಮುಂಬೈ, ಹಾಗೂ ಕೋಶ ಧಿಕಾರಿಯಾಗಿ .ಡಾ. ಅದಿಪ್ ಕೆ. ಶೆಟ್ಟಿ, ಆಯ್ಕೆಗೊಂಡಿರುವ ದನ್ನು ತಿಳಿಸಿದರು.