
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರಕವಾಗಿ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ.ಮೂ. ಕೆ ಶ್ರೀನಿವಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಕಳೆದ ಏ. 9ರಂದು ಸಾನಿಧ್ಯ ವೃದ್ಧಿಗಾಗಿ ನಡೆಸಲಾಗಿದ್ದ ಭೂಕರ್ಷನ ಖನನ, ಹರಣ, ದಾಹ, ಪೂರಣ ಮತ್ತು ನವಧಾನ್ಯಗಳಿಂದ ಬೀಜ ವಪನ ಇತ್ಯಾ ಅನುಷ್ಠಾನಗಳ ಮುಂದುವರಿದ ಭಾಗವಾಗಿ ಗರ್ಭಗುಡಿಯಲ್ಲಿ ಮೊಳಕೆಯೋಡೆದ ನವಧಾನ್ಯಗಳ ಪೈರನ್ನು ಗೋವುಗಳನ್ನು ಮೇಯಲು ಬಿಡುವ ಕಾರ್ಯಕ್ರಮ ಗೋನಿವಾಸ ಮಂಗಳವಾರ ಸಂಪನ್ನಗೊAಡಿತು.

ಬೆಳಿಗ್ಗೆ ಮಾರಿಯಮ್ಮನ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ 9 ಗೋವುಗಳನ್ನು ಪೂಜಿಸಿ ಶ್ರೀಕೃಷ್ಣನ ಕೊಳಲಿನ ವಾದನ ದೊಂದಿಗೆ ಗರ್ಭಗುಡಿಯವರೆಗೆ ಕರೆದುಕೊಂಡು ಹೋಗಿ ವಿವಿಧ ಅನುಷ್ಠಾನಗಳೊಂದಿಗೆ ಮೇವಿಗೆ ಬಿಡಲಾಯಿತು. ಇಧೇ ಸಂದರ್ಭದಲ್ಲಿ ಗೋವುಗಳ ಮಾಲಕರನ್ನು ಗೌರವಿಸಲಾಯಿತು.
ಬಳಿಕ ನಡೆದ ಸರಳ ಸಮಾರಂಭದಲ್ಲಿ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿಗಳು ಮಾತನಾಡಿ, ಅತ್ಯಂತ ದಿವ್ಯವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಮಾರಿಯಮ್ಮನ ಸಾನಿಧ್ಯ ವೃದ್ಧಿಗಾಗಿ ದೇಗುಲ ನಿರ್ಮಾಣದ ಪ್ರಾಚೀನ ವಿಧಿವಿಧಾನಗಳನ್ನು ಅನುಸರಿಸಲಾಗುತ್ತಿದೆ. ಸಕಲ ಜೀವರಾಶಿಗಳಲ್ಲಿ ಅತ್ಯಂತ ಪವಿತ್ರವೂ 14 ಲೋಕಗಳ ಅಂಶವನ್ನು ತನ್ನಲ್ಲಿ ಹೊಂದಿರುವ ಗೋವುಗಳನ್ನು ಗರ್ಭಗುಡಿಯೊಳಗೆ ನಿವಾಸಕ್ಕೆ ಬಿಡುವ ಮೂಲಕ ಕ್ಷೇತ್ರ ದೈವಿಕ ಕಳೆಯೊಂದಿಗೆ ಸಾನಿಧ್ಯ ಸಂಮೃದ್ಧಿ ಉಂಟಾಗಲಿದೆ ಎಂದರು.

ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಜೀರ್ಣೋದ್ಧರ ಕಾರ್ಯದಲ್ಲಿ ಕಿಂಚಿತ್ ಕೈಜೋಡಿಸಲು ಮುಂದೆ ಬರುವ ಭಕ್ತಾಧಿಗಳು ಅಮ್ಮನ ಸಾನಿಧ್ಯಕ್ಕೆ ಬಂದಾಗ ಮನಪರಿವರ್ತನೆಯಾಗಿ ದೊಡ್ಡಮಟ್ಟಿನ ಸೇವೆ ನೀಡಲು ಮುಂದಾಗುತ್ತಿರುವುದು ನಡೆಯುತ್ತಿದೆ. ಕ್ಷೇತ್ರದಲ್ಲಿ ಇರುವ ಅಮ್ಮನ ಸಾನಿಧ್ಯ ಶಕ್ತಿಯು ಎಲ್ಲರ ಅರಿವಿಗೂ ಬರುತ್ತಿದೆ ಎಂದರು. ಪುಣೆ ಉದ್ಯಮಿ ಸದಾನಂದದ ಶೆಟ್ಡಿ ಮಾತನಾಡಿ ಶುಭಹಾರೈಸಿದರು.
ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕೋಶಾಧಿಕಾರಿ ರವಿಕಿರಣ್, ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ಶ್ರೀ ಲಕ್ಷಿö್ಮÃಜನಾರ್ದನ ದೇವಳದ ತಂತ್ರಿ ಕೆ., ಜ್ಯೋತಿಷ್ಯ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ ಮಡುಂಬು, ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಸ್ವರ್ಣಗದ್ದುಗೆ ಸಮರ್ಪಣಾ ಸಮಿತಿಯ ಅಧ್ಯಕ್ಷ ಉದಯ ಸುಂದರ ಶೆಟ್ಟಿ, ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ ಉಪಾಧ್ಯಕ್ಷರುಗಳಾದ ಮನೋಹರ್ ಎಸ್. ಶೆಟ್ಟಿ, ಮಾಧವ ಆರ್ ಪಾಲನ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ದಿವಾಕರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಪ್ರಮುಖರಾದ ಮಾಧವ ಶೆಟ್ಟಿ ಪಾದೂರು, ದಿನೇಶ್ ಶೆಟ್ಟಿ ಕಳತ್ತೂರು, ಉದಯ್ ಶೆಟ್ಟಿ ಕಳತ್ತೂರು, ರಮೇಶ್ ವಿ. ಶೆಟ್ಟಿ ಮುಂಬಯಿ, ಕಿಶೋರ್ ಶೆಟ್ಟಿ ಕುತ್ಯಾರು, ಶ್ರೀಕರ ಶೆಟ್ಟಿ ಕಲ್ಯ , ನಿರ್ಮಲ್ ಕುಮಾರ್ ಹೆಗ್ಡೆ, ರವಿ ಭಟ್, ಪ್ರಪುಲ್ಲ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.