
ಉಡುಪಿಯ ಕ್ಲಿಂಗ್ ಜಾನ್ಸನ್ ನಿರ್ದೇಶನದ ಯಕ್ಷಗಾನದಲ್ಲಿ ಬರುವ ಹೆಣ್ಣು ಪಾತ್ರ ಧಾರಿಯ ಜೀವನ ಅಧರಿಸುವ ‘ದ್ವಮ್ದ್ವ’ ಎಂಬ ಕನ್ನಡ ಚಲನಚಿತ್ರ ಮುಂಬೈಯಲ್ಲಿ ನಡೆಯುವ 15ನೇ ‘ಕಶಿಷ್ ಪ್ರೈಡ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ದಲ್ಲಿ ತೆರೆಕಾಣಲು ಆಯ್ಕೆಯಾಗಿದೆ.
‘ದ್ವಮ್ದ್ವ’ ಚಿತ್ರದ ಉದ್ದೇಶ ಲಿಂಗ ಸಂಬಂಧೀ ವಿಷಯಗಳ ಬಗ್ಗೆ ಜನರಿಗೆ, ಸಮಾಜಕ್ಕೆ ಶಿಕ್ಷಣ ನೀಡುವುದಾಗಿದೆ ಎಂದು ಚಿತ್ರದ ನಿರ್ದೇಶಕ ಕ್ಲಿಂಗ್ ಜಾನ್ಸನ್ ಹೇಳಿದ್ದಾರೆ. ‘ ದ್ವಮ್ದ್ವ’, ’ದೀಪವಿರದ ದಾರಿಯಲ್ಲಿ’ (ಲೇಖಕ: ಸುಶಾಂತ್. ಪ್ರಕಾಶಕ ಶ್ರೀ ವಸುಧೇಂದ್ರ, ಚಂದ ಪುಸ್ತಕ ) ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಯುವ ಯಕ್ಷಗಾನ ಕಲಾವಿದನ ಕಥೆಯ ಮೂಲಕ ಇದು ಲಿಂಗ ಸಂಬಂಧೀ ಸಂಕೀರ್ಣತೆಗಳನ್ನು ತೆರೆದಿಡುತ್ತದೆ. ಸ್ವತಃ ಬರಹಗಾರರೂ ಆಗಿರುವ ಕ್ಲಿಂಗ್ ಜಾನ್ಸನ್ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಅಗ್ನಿಶಾಮಕ ಸುರಕ್ಷತಾ ಅಧಿಕಾರಿಯೂ ಆಗಿದ್ದಾರೆ. ಇದಕ್ಕೆ ಮೊದಲು ಹಲವಾರು ಕಿರುಚಿತ್ರಗಳನ್ನು ನಿರ್ಮಿಸಿದ್ದ ಕ್ಲಿಂಗ್ ಜಾನ್ಸನ್ ಅವರ ಮೊದಲ ಪೂರ್ಣಪ್ರಮಾಣದ ಚಲನಚಿತ್ರ ಇದಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಪ್ರಥಮ ಪ್ರದರ್ಶನಗೊಂಡ ‘ದ್ವಮ್ದ್ವ’ ಚಿತ್ರದ ಎರಡನೇ ಪ್ರದರ್ಶನ 16 ಮೇ 2024 ರಂದು ಲಿಬರ್ಟಿ ಸಿನಿಮಾ ಮರೀನ್ ಡ್ರೈವ್ ನಲ್ಲಿ 12.30 ಗಂಟೆಗೆ ಪ್ರದರ್ಶನವಾಗಲಿದೆ.


ದ್ವಮ್ದ್ವ ಚಿತ್ರದಲ್ಲಿ ಉಡುಪಿಯ ಹೆಸರಾಂತ ಕಲಾವಿದರಾದ ಸಿತೇಶ್ ಸಿ ಗೋವಿಂದ್ (ಸಹ ನಿರ್ದೇಶಕ), ರಾಜೇಂದ್ರ ನಾಯಕ್, ಬೆನ್ಸು ಪೀಟರ್, ಅಭಿಲಾಷ್ ಶೆಟ್ಟಿ, ಪ್ರಭಾಕರ ಕುಂದರ್, ಭಾಸ್ಕರ್ ಮಣಿಪಾಲ್, ಆಡನ್ ಕ್ಲಿಯೋನ , ಗಣೇಶ್, ರಾಧಿಕಾ ಭಟ್, ಭಾರತಿ, ಪ್ರಭಾಕರ್ ಕಲ್ಯಾಣಿ, ಚಂದ್ರಹಾಸ ಉಳ್ಳಾಲ್ , ಚೇತನ್ ರಾಯ್ ಮಾಣಿ, ಸಂದೀಪ್ , ಶಿಲ್ಪ ಜೋಶಿ, ವಿಪಿನ್, ಸಂದೀಪ್ ಚೌಟ , ಪ್ರಕಾಶ್ ನೀನಾಸಂ, ಬಾಲ ಕಾಲವಿಧ ಆಕ್ಷನ್ ಕರ್ಕೇರ ಮುಖ್ಯ ಪಾತ್ರದಲ್ಲಿ ನಟಿಸಿದ್ಧಾರೆ.
ಮುಂಬಯಿಯ ತುಳು-ಕನ್ನಡಿಗರು ಮೇ.16ಕ್ಕೆ, ಮೇರಿನ್ ಡ್ರೈವ್ ನ ಲಿಬರ್ಟಿ ಸಿನಿಮಾ ಮಂದಿರದಲ್ಲಿ “ದ್ವಮ್ದ್ವ” ಚಿತ್ರವನ್ನು ವೀಕ್ಷಿಸುವಂತೆ ನಿರ್ದೇಶಕ ಕ್ಲಿಂಗ್ ಜಾನ್ಸನ್ ವಿನಂತಿಸಿದ್ದಾರೆ.
