
ಮುಂಬಯಿ ಮೇ 15.ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾಪನಾ ದಿನ ಹಾಗೂ ಶ್ರೀ ಶಂಕರ ಜಯಂತಿಯನ್ನು ರವಿವಾರ ದಿನಾಂಕ 12.5.2024 ರಂದು ವಿಜೃಂಭಣೆಯಿಂದ ಆಚರಿಸಿತು.
ಪ್ರತಿಷ್ಠಾ ದಿನದ ಅಂಗವಾಗಿ ಪ್ರಾತಃಕಾಲ ದೇವಾಲಯ ಸಭಾಗೃಹದಲ್ಲಿ, ಗೌ. ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಸಹನಾ ಪೋತಿ ದಂಪತಿ ಯಜಮಾನತ್ವದಲ್ಲಿ, ವೇದಮೂರ್ತಿಗಳಾದ ದರೆಗುಡ್ಡೆ ಶ್ರೀನಿವಾಸ್ ಭಟ್, ಶ್ರೀಪತಿ ಭಟ್ , ರವರ ಪ್ರಧಾನ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆ, ನವಕ, ಪ್ರಧಾನ ಹೋಮದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ, ವೇದಮೂರ್ತಿಗಳಾದ ದರೆಗುಡ್ಡೆ ಶ್ರೀನಿವಾಸ್ ಭಟ್ ಮತ್ತು ಗಣೇಶ್ ಭಟ್ ರವರು ಇತರ ಪುರೋಹಿತ ವರ್ಗದವರೊಂದಿಗೆ ಶ್ರೀ ದೇವರ ಕಲಶಾಭಿಷೇಕವನ್ನು ನೆರವೇರಿಸಿದರು. ನಂತರ ಶ್ರೀ ದೇವರ ಪುಷ್ಪಾಲಂಕಾರ, ವಿಷ್ಣು ಸಹಸ್ರನಾಮ ಪಠನೆ, ಮಹಾಪೂಜೆಯು ವೈಭವದಿಂದ ಜರಗಿತು. ಗೋಕುಲ ಭಜನಾ ಮಂಡಳಿ ಭಜನಾ ಕಾರ್ಯಕ್ರಮ ನೆರವೇರಿತು.




ಇದೇ ದಿನ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಅಂಗವಾಗಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಬಿ. ಎಸ್ ಕೆ.ಬಿ. ಎಸೋಸಿಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಯೋಗದೊಂದಿಗೆ ಗೋಕುಲದ ಪ್ರಥಮ ಮಹಡಿಯಲ್ಲಿ ಶ್ರೀ ಶಂಕರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿತು.
ವೇದಮೂರ್ತಿಗಳಾದ ದುರ್ಗಾಪ್ರಸಾದ್ ಭಟ್ ಮತ್ತು ಸುಬ್ರಹ್ಮಣ್ಯ ಐತಾಳ್ ರವರ ಪ್ರಧಾನ ಪೌರೋಹಿತ್ಯದಲ್ಲಿ, ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಪಂಚಗವ್ಯ, ಗಣಹೋಮದೊಂದಿಗೆ ಪ್ರಾರಂಭವಾಗಿ, ಶ್ರೀ ರಾಮನಾಮ ತಾರಕ ಮಂತ್ರ ಹೋಮ, ರುದ್ರಾಭಿಷೇಕ, ಶ್ರೀ ಶಂಕರಾಚಾರ್ಯ ನಾಮಾರ್ಚನೆ, ಪೂಜೆ, ಅಷ್ಟಾವಧಾನ, ಧಾರ್ಮಿಕ ಪ್ರವಚನ ಮುಂತಾದ ವಿಧಿಗಳು, ರಮೇಶ್ ಎಂ ರಾವ್, ವನಿತಾ ರಾವ್ ದಂಪತಿ, ಸದಾಶಿವ ರಾವ್, ಮಮತಾ ರಾವ್ ದಂಪತಿ, ಅಮಿತ್ ರಾವ್, ಅಮಿತಾ ರಾವ್ ದಂಪತಿ ಮತ್ತು ಶ್ಯಾಮ್ ಭಾರದ್ವಾಜ್, ಪ್ರಿಯಾಂಕಾ ದಂಪತಿಯವರ ಯಜಮಾನತ್ವ, ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳಾದ ಸುಭಾಶ್ಚಂದ್ರ ರಾವ್, ಪಿ.ಉಮೇಶ್ ರಾವ್, ಶಿವರಾಯ ರಾವ್, ಕೆ.ಉಮೇಶ್ ರಾವ್, ಮತ್ತು ಕಾರ್ಯಕಾರಿ ಸಮಿತಿಯವ ನೇತೃತ್ವದಲ್ಲಿ ವಿಧಿವತ್ತಾಗಿ ನೆರವೇರಿತು. ಗೋಕುಲ ಭಜನಾ ಮಂಡಳಿಯಿಂದ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಪಠನೆ ಮತ್ತು ಭಜನಾ ಸೇವೆ ನೆರವೇರಿತು.
ಅಪರಾಹ್ನ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಸ್ವತಿ ಸಭಾಗೃಹದಲ್ಲಿ ಆಚಾರ್ಯ ರತ್ನ ಮುಂಬಯಿ ಶಂಕರನಾರಾಯಣನ್ ಬಳಗದವರಿಂದ ತಾಳ ವಾದ್ಯ ಕಚೇರಿ, ಆನಂದ ಸಚಿದಾನಂದನ್ ರವರಿಂದ ಭರತನಾಟ್ಯ ಸೇವೆಯು ಜರಗಿತು.
ಸಂಜೆ ನಿತ್ಯ ಪೂಜೆಯಾದ ನಂತರ ದೀಪೋತ್ಸವದೊಂದಿಗೆ ರಂಗ ಪೂಜೆ, ಪಲ್ಲಕ್ಕಿ ಉತ್ಸವ, ತೊಟ್ಟಿಲು ಪೂಜೆ, ವಸಂತ ಪೂಜೆ, ಅಷ್ಟಾವಧಾನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಂಘದ ಅಧ್ಯಕ್ಷ ಡಾ. ಸುರೇಶ್ ಎಸ್ ರಾವ್, ಉಪಾಧ್ಯಕ್ಷ ವಾಮನ್ ಹೊಳ್ಳ, ಗೌ.ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಜತೆ ಕೋಶಾಧಿಕಾರಿ ಗಣೇಶ್ ಭಟ್, ಕಾರ್ಯಕಾರಿ ಸಮಿತಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಧಾರ್ಮಿಕ ಸಮಿತಿ ಸದಸ್ಯರುಗಳ ಸಹಿತ ನೂರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ವೈಭವದಿಂದ ಜರಗಿತು.