
ಶ್ರೀ ಸಾಯಿ ಈಶ್ವರ್ ಗುರೂಜಿಯವರ ಯವರ ಸಂಕಲ್ಪದಲ್ಲಿ 2018 ರಂದು ಸ್ಥಾಪನೆಯಾದ ಪ್ರಾಣಿ-ಪಕ್ಷಿ ಮೋಕ್ಷಕಟ್ಟೆ ಬಳಿಕ ಈ ಕಟ್ಟೆಯಲ್ಲಿ ಕಾಲಭೈರವ ಸ್ವಾಮಿ ನೆಲೆಗೊಂಡಿದ್ದಾನೆ. ಹಾಗೂ ಅವನಿಗೆ ಉಜ್ಜಯಿನಿ ಸಂಕಲ್ಪದಲ್ಲಿ ಸೇವೆ ನಡೆಯಬೇಕು ಎಂದು ಗುರು ನೀಡಿದ ಆಜ್ಞೆಯಂತೆ 2024ರ ಡಿಸೆಂಬರ್ ನಲ್ಲಿ ದೇಶದಾದ್ಯಂತ ಶ್ರೀ ಕ್ಷೇತ್ರಕ್ಕೆ ಬಂದ 150ಕ್ಕೂ ಹೆಚ್ಚು ಸಾಧು-ಸಂತರ ಉಪಸ್ಥಿತಿಯಲ್ಲಿ ಶಿಲಾಮಯ್ಯ ಗುಡಿಯಲ್ಲಿ ಕಾಲಭೈರವ ಸ್ವಾಮಿಯ ಪ್ರತಿಷ್ಠೆ ನಡೆದಿತ್ತು. ಅಂದಿನಿಂದ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಪ್ರಾರ್ಥನೆಯನ್ನು ಕಾಲಭೈರವ ಸ್ವಾಮಿಗೆ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಂಡ ಸಾವಿರಾರು ಉದಾಹರಣೆಗಳಿವೆ. ಕಾಲಭೈರವ ಸ್ವಾಮಿಗೆ ಉಜ್ಜಯಿನಿಯ ಸಂಕಲ್ಪದಂತೆ ಪ್ರತಿದಿನ ಸಂಜೆ ಭಕ್ತರು ನೀಡಿದ ಮಧ್ಯವನ್ನು ನೈವೇದ್ಯವಾಗಿ ಸಲ್ಲಿಸಲಾಗುತ್ತದೆ.
2024 ಮೇ 19ರ ಆದಿತ್ಯವಾರ ಸಂಜೆ ನೈವೇದ್ಯ ಸೇವೆಯನ್ನ ಸಮರ್ಪಿಸುವಾಗ ಮಧ್ಯ ಹಾಕಿದ ತಟ್ಟೆ ಯಿಂದ ಮದ್ಯವನ್ನು ಹೀರಿಕೊಳ್ಳುವ ಘಟನೆಯನ್ನು ಆಶ್ಚರ್ಯಚಕಿತರಾಗಿ ಗಮನಿಸಿದ ಭಕ್ತರು ವಿಡಿಯೋ ಚಿತ್ರೀಕರಣ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ ಕಾರಣ ಮತ್ತಷ್ಟು ಭಕ್ತರನ್ನು ಶ್ರೀ ಕ್ಷೇತ್ರಕ್ಕೆಆಕರ್ಷಿಸುತ್ತಿದೆ. ಮಧ್ಯ ನೀಡುವುದರಿಂದ ಭಕ್ತರಿಗೆ ಬರುವ ಅನಾರೋಗ್ಯ, ಸಂಕಷ್ಟ ನೋವುಗಳನ್ನ ತನ್ನಲ್ಲಿಗೆ ಹೀರಿಕೊಳ್ಳುತ್ತಿದ್ದಾನೆ ಎಂಬ ನಂಬಿಕೆ ಭಕ್ತರು..