
ಮುಂಬಯಿ : ಮುಂಬಯಿಯ ಉದ್ಯಮಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್ ಅವರು ತನ್ನ ಹುಟ್ಟೂರು ಉಪ್ಪಿನಕುದ್ರುವಿನಲ್ಲಿ ತಾನು ಬೆಳೆದ ಗ್ರಾಮದ ಮತ್ತು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ವಿತರಣಾ ಮತ್ತು ಪುಸ್ತಕ ವಿತರಣೆ ಮೇ 26 ರಂದು ಸಂಜೆ 4.30ಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಉಪ್ಪಿನಕುದ್ರು ಇಲ್ಲಿ ಮಾಡಲಿದ್ದಾರೆ.
ಕಳೆದ 18 ವರ್ಷಗಳಿಂದ ಸುರೇಶ್ ಕಾಂಚನ್ ಅವರು ಈ ಕಾರ್ಯಕ್ರಮದ ಮೂಲಕ ತಮ್ಮ ಹುಟ್ಟೂರಿನಲ್ಲಿ ಲಕ್ಷಾಂತರ ರೂಪಾಯಿಗಳ ಆರ್ಥಿಕ ನೆರವನ್ನು ಬಡ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ. ತಮ್ಮ ಉದ್ಯಮದ ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಸಮಾಜ ಸೇವೆಗಾಗಿ ಮುಡಿಪಾಗಿ ಡುತ್ತಾ ಬಂದಿದ್ದು, ನಿರಂತರ ಮುಂಬಯಿ ಹಾಗೂ ತವರೂರಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡ ಕುಟುಂಬದ ವಿವಾಹ ಕಾರ್ಯಗಳಿಗೆ ನೆರವು, ವೈದ್ಯಕೀಯ ನೆರವು, ಕಲೆ ಮತ್ತು ಕಲಾವಿದರಿಗೆ ನೆರವು. ದೈವ ದೇವಸ್ಥಾನದ ಗಳು ಜೀರ್ಣೋದ್ಧಾರಕ್ಕೆ ಹೀಗೆ ವಿವಿಧ ರೀತಿಯ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಬಂದಿದ್ದಾರೆ.
.
ಸುರೇಶ್.ಆರ್.ಕಾಂಚನ್ ಹಾಗೂ ಅವರ ಧರ್ಮಪತ್ನಿ ಯಶೋಧ.ಎಸ್.ಕಾಂಚನ್ ಉಪಸ್ಥಿತಿಯಲ್ಲಿ
ಅವರು 26 ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಉಪ್ಪಿನಕುದ್ರು ಇಲ್ಲಿ 18 ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿವೇತನ. ಕ್ರೀಡಾ ಚಟುವಟಿಕೆ, ವೈದ್ಯಕೀಯ ನೆರವು, 2023-24ನೇ ಸಾಲಿನ ಎಸ್. ಎಸ್. ಎಲ್.ಸಿ ಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ಎಸ್. ಎಸ್. ಎಲ್. ಸಿ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ .1 ರಿಂದ 10ನೇ ತರಗತಿಗಳ ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕ ವಿತರಣೆ ಕಾರ್ಯಕ್ರಮವು ನಡೆಯಲಿದೆ.
ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಖ್ಯಾತ ಉದ್ಯಮಿ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಲಿರುವರು. ಸುರೇಶ್ ಕಾಂಚನ್ ಅಧ್ಯಕ್ಷತೆಯನ್ನು ವಹಿಸಲಿದ್ದು ಬೈಂದೂರಿನ ಶಾಸಕರಾದ ಗುರುರಾಜ ಗಂಟಿಹೊಳೆ, ಕೋಟ ಶ್ರೀನಿವಾಸ ಪೂಜಾರಿ, ಗೋಪಾಲ ಪೂಜಾರಿ, ಗಿರೀಶ್ ಎಸ್ ನಾಯ್ಕ್, ಟಿ. ಬಿ. ಶೆಟ್ಟಿ, ರಾಜೇಶ್ ಕಾರಂತ್, ಸದಾನಂದ ಶೇರುಗಾರ್, ರಮೇಶ್ ಕಾರಂತ್, ಕೆ. ಸಿ. ರಾಜೇಶ್ , ಮಾಲತಿ, ರತ್ನಾಕರ ಶೆಟ್ಟಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ಸಂಜೆ 6:30ಕ್ಕೆ
ಓಂಕಾರ ಕನ್ನುಕೆರೆ, ತೆಕ್ಕಟ್ಟೆ ಕಲಾವಿದರು ಅಭಿನಯಿಸುವ
ಈ ವರ್ಷದ ವಿನೂತನ ಶೈಲಿಯ ಹೊಸ ಕುಂದಗನ್ನಡದ ಹಾಸ್ಯಮಯ ನಗೆ ನಾಟಕ ಭಯಾನಕ ದೃಶ್ಯಗಳೊಂದಿಗೆ ವಿಶಿಷ್ಟ ರಂಗ ಸಜ್ಜಿಕೆಯೊಂದಿಗೆ
“ಅಗೋಚರ “ನಾಟಕ ಪ್ರದರ್ಶನಗೊಳ್ಳಲಿದೆ
ಈ ಕಾರ್ಯಕ್ರಮದಲ್ಲಿ ಪರಿಸರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಯುವಕ ಮಂಡಲ ಉಪ್ಪಿನ ಕುದ್ರು ಇದರ ಅಧ್ಯಕ್ಷರಾದ ಗಿರೀಶ್ ಮೊಗವೀರ, ಉಪಾಧ್ಯಕ್ಷ ಮಂಜುನಾಥ ಶಿವಾಜಿಬೆಟ್ಟು, ಕಾರ್ಯದರ್ಶಿ ಆದರ್ಶ ಶೇರುಗಾರ್ , ಪ್ರಧಾನ ಸಂಚಾಲಕರಾದ ಚಂದ್ರ ಕುಂದರ್ ಮತ್ತು ಗೋಪಾಲ (ಗೋಪಿ) ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.