
ಸಹಕಾರಿ ರಂಗದ ಅಗ್ರಗಣ್ಯ ಬ್ಯಾಂಕ್ ಗಳಲ್ಲಿ ಒಂದಾದ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ಅವರು ಕೋ ಆಪರೇಟಿವ್ ಸಮ್ಮಿತ್ ಕೊಡ ಮಾಡುವ ಅತ್ಯುತ್ತಮ ಬ್ಯಾಂಕ್ ಕಾರ್ಯಧ್ಯಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋ ಆಪರೇಟಿವ್ ಬ್ಯಾಂಕ್ ಸಮ್ಮಿತ್ ಮೇ 22ರಂದು ಮುಂಬಯಿಯ ದಿ ಗ್ರಾಂಡ್ ಲಲಿತ್ ಹೋಟೆಲ್ ನ ಸಭಾಗ್ರಹದಲ್ಲಿ ಆಯೋಜಿಸಿದ ಸಮಾರಂಭದಲ್ಲಿ, ಭಾರತ ಸರಕಾರದ ಮಿನಿಸ್ಟ್ರಿ ಅಪ್ ಕಮ್ಯುನಿಕೇಶನ್ ನ ನಿರ್ದೇಶಕರಾದ ಸುಮ್ನೇಶ್ ಜೋಶಿ ಅವರು ಸೂರ್ಯಕಾಂತ್ ಸುವರ್ಣರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ಜಂಟಿ ಆಡಳಿತ ನಿರ್ದೇಶಕ ದಿನೇಶ್ ಸಾಲ್ಯಾನ್, ಚೀಫ್ ಇನ್ಫಾರ್ಮಶನ್ ಸೆಕ್ಯೂರಿಟಿ ಆಫೀಸರ್ (CISO) ಭಾಸ್ಕರ್ ರಾವ್, ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ರೋಹಿತ್ ಉದ್ಯಾವರ ಉಪಸ್ಥಿತರಿದ್ದರು.
ಸೂರ್ಯಕಾಂತ ಸುವರ್ಣ ಅವರು ಭಾರತ್ ಬ್ಯಾಂಕ್ ನ ಕಾರ್ಯದ್ಯಕ್ಷರಾದ ಬಳಿಕ ಬ್ಯಾಂಕ್ ನ ಅಭಿವೃದ್ಧಿ ಮತ್ತೆ ವೇಗವನ್ನು ಪಡೆದುಕೊಂಡಿದ್ದು ಆಡಳಿತ ಮಂಡಳಿಯ ಸಹಕಾರ, ಹಿರಿಯ – ಕಿರಿಯ ಅಧಿಕಾರಿಗಳ ಕಾರ್ಯ ಕ್ಷಮತೆ, ಸಿಬ್ಬಂದಿ ವರ್ಗದ ನಗುಮೊಗದ ಸೇವೆ, ಈ ಎಲ್ಲಾ ಅಂಶಗಳು ಬ್ಯಾಂಕ್ ನ ಅಭಿವೃದ್ಧಿಗೆ ಪೂರಕವಾಗಿದೆ.
ಭಾರತ್ ಬ್ಯಾಂಕ್ 2023-24ರ ಆರ್ಥಿಕ ವರ್ಷದಲ್ಲಿ ಇಷ್ಟರತನಕ ಇಂಡಿಯನ್ ಬ್ಯಾಂಕ್ಸ್ ಎಸೋಸಿಯೇಶನ್ ನಿಂದ “ಬೆಸ್ಟ್ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಹಾಗೂ “ಬೆಸ್ಟ್ ಸೆಕ್ಯೂರಿಟಿ ಇನಿಶಿಟಿವ್ ಪ್ರಶಸ್ತಿ”, 17ನೇ ಆಲ್ ಇಂಡಿಯ ಕೋ ಆಪರೇಟಿವ್ ಬ್ಯಾಂಕ್ ಸಮ್ಮಿತ್ ನಿಂದ “ಬೆಸ್ಟ್ ಎಚ್ ಆರ್ ಮೆನೇಜಮೆಂಟ್ ಪ್ರಶಸ್ತಿ”, ಬ್ಯಾಂಕೋ ಬ್ಲೂ ರಿಬ್ಬನ್ ನಿಂದ ಐಟಿ ಎಕ್ಸಲೆನ್ಸಿಯಿಂದ “ಐಟಿ ಎಕ್ಸಲೆನ್ಸಿ ಪ್ರಶಸ್ತಿ ” ಪಡೆದಿರುತ್ತದೆ.