
ಮುಂಬಯಿ : ಮುಲುಂಡ್‌ನ ಪ್ರಕೃತಿ ಚಿಕಿತ್ಸಕಿ ವೈದ್ಯೆ ಡಾ. ರಾಶ್ಮಾ ಎಂ. ಶೆಟ್ಟಿ ಅವರು ಮೇ 19, ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರ ವಿಶೇಷ ರೀತಿಯ ಪ್ರದರ್ಶನವು ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ಸ್ಥಾನವನ್ನು ಪಡೆದುಕೊಂಡಿತು.

ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸೌಂಶಿಮಠ ಅವರು ಡಿಕೆ ಮಿಸೆಸ್ ಇಂಡಿಯಾ ಕರ್ನಾಟಕದ ಪಾಥ್‌ವೇ ಎಂಟರ್‌ಪ್ರೈಸ್‌ನ ನಿರ್ದೇಶಕ ದೀಪಕ್ ಗಂಗೂಲಿ ಮತ್ತು ಮರ್ಸಿ ಬ್ಯೂಟಿ ಅಕಾಡೆಮಿ ಆಂಡ್ ಬ್ಯೂಟಿ ಸಲೂನ್‌ನ ವೀಣಾ ಡಿ’ಸೋಜಾ ಆಯೋಜಿಸಿದ್ದರು.
ನರಿಯಗುತ್ತು ರಘುನಾಥ ಶೆಟ್ಟಿ ಮತ್ತು ಅಂಬ್ತೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಸುಪುತ್ರಿ, ಡಾ.ರಾಶ್ಮಾ ಎಂ.ಶೆಟ್ಟಿ ಯವರು ಮೋಹಿತ್ ಶೆಟ್ಟಿಯವರ ಪತ್ನಿ ಇವರಿಗೆ 5 ವರ್ಷದ ಮಗಳು ನೇಸರ. ಇವರು ಐನಾಕ್ ಮನೋಹರ್ ಶೆಟ್ಟಿ ಮತ್ತು ದಿ. ಮಮತಾ ಶೆಟ್ಟಿ (ಮಾಜಿ ಅಧ್ಯಕ್ಷೆ ಮುಲುಂಡ್ ಬಂಟ್ಸ್ ಮಹಿಳಾ ವಿಭಾಗ) ಅವರ ಸೊಸೆ. ಪುತ್ತೂರಿನಲ್ಲಿ ಬೆಳೆದ ಇವರು ಪ್ರಸ್ತುತ ಮುಂಬೈನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವರು.
ಇವರು ವೈದ್ಯಕೀಯ ಸೇವೆಯೊಂದಿಗೆ, ಗೃಹಿಣಿಯಾಗಿ ಜೊತೆಗೆ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಮುಲುಂಡ್ ಹಿಲ್ಸ್ ಇನ್ನರ್ ವೀಲ್ ಕ್ಲಬ್‌ನ ಸಮಿತಿಯ ಸದಸ್ಯರಾಗಿ, ಮಹಿಳೆಯರ ಆರೋಗ್ಯ ಮತ್ತು ಜೀವನಶೈಲಿಯ ಅಸ್ವಸ್ಥತೆಗಳ ಕುರಿತು ಅನೇಕ ಲೈವ್ ಸೆಮಿನಾರ್‌ಗಳನ್ನು ನಡೆಸಿದ್ದಾರೆ. ಡಾ. ಡಿವೈ ಪಾಟೀಲ್ ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಸಂದರ್ಶಕ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಡಾ.ರಾಶ್ಮಾ ರಾಜ್ಯಮಟ್ಟದ ಥ್ರೋಬಾಲ್ ಆಟಗಾರ್ತಿಯೂ ಆಗಿದ್ದು, ಕಟೀಲೇಶ್ವರಿ ತಂಡದ ಸದಸ್ಯೆಯಾಗಿ ಭಾಗವಹಿಸುತ್ತಿದ್ದಾರೆ. ಮುಲುಂಡ್ ಬಂಟ್ಸ್‌ನಲ್ಲಿ ಸಕ್ರಿಯರಾಗಿರುವ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.