
ಎಲ್ಲರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಧನಂಜಯ್ ಸರ್ಜಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಆರಂಭವಾದ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ ತನಕ ನಡೆಯಿತು.

ಮತ ಏಣಿಕೆಯ ಆರಂಭದ ಸುತ್ತಿನಿಂದಲೇ ಧನಂಜಯ ಸರ್ಜಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಗೆ ಡಾ. ಸರ್ಜಿ ಅವರು ಕಾಂಗ್ರೇಸ್ ನ ಆಯನೂರು ಮಂಜುನಾಥ್ ಅವರನ್ನು 24,112 ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ಮೇಲ್ಮನೆ ಪ್ರವೇಶಿಸಿದರು. ಈ ಮೂಲಕ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿದ್ದ ಬಿ. ಜೆ. ಪಿ – ಜೆ. ಡಿ. ಎಸ್ ಕೂಟ ಮೂರು ಕ್ಷೇತಗಳಲ್ಲಿ ಗೆಲುವು ಸಾಧಿಸಿದೆ.
ಬಿ. ಜೆ. ಪಿ ಯಿಂದ ಬಂಡಾಯ ಸ್ಪರ್ಧೆ ಮಾಡಿದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಸೋತು ಮುಖಭಂಗವಾಗಿದೆ.
ಡಾ. ಧನಂಜಯ ಸರ್ಜಿ ಅವರಿಗೆ 37,627, ಕಾಂಗ್ರೇಸ್ ನ ಆಯನೂರು ಮಂಜುನಾಥ್ ಗೆ 13,516, ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಗೆ 7039, ಹಾಗೂ ಎಸ್. ಪಿ. ದಿನೇಶ್ 2518 ಮತಗಳನ್ನು ಪಡೆದರು.
ಚುನಾವಣೆಯಲ್ಲಿ ಸೋತಿರುವ ರಘುಪತಿ ಭಟ್ ಅವರನ್ನು ಪಕ್ಷ ಉಚ್ಚಾಟಿಸಿದ್ದು, ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎದುರಾಗಿದೆ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿ ಜೆ ಪಿ ಗೆ ಮರಳುವೆ ಎಂದು ಭಟ್ ಚುನಾವಣೆಗೂ ಮುನ್ನ ತಿಳಿಸಿದ್ದು, ಇದೀಗ ಬಿ. ಜೆ. ಪಿ. ಹೈಕಮಾಂಡ್ ಯಾವ ನಿರ್ದಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.