
ಮುಲ್ಕಿ ಜೂ 10. ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ,ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರ ಮಾತೃ ರದ ಬೋಳ ನಂದಬೆಟ್ಟು ದಿ. ಸುಂದರ ಶೆಟ್ಟಿ ಅವರ ಧರ್ಮ ಪತ್ನಿ ಕರ್ನಿರೆ ಹೊಸಮನೆ ಗಿರಿಜಾ ಶೆಟ್ಟಿ(94) ಅವರು ಜೂ 9 ರಂದು ಸ್ವರ್ಗಸ್ಥರಾಗಿದ್ದಾರೆ, ಕರ್ನಿರೆ ವಿಶ್ವನಾಥ್ ಶೆಟ್ಟಿ ಸಹಿತ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಗಿರಿಜಾ ಶೆಟ್ಟಿಯವರು ಕೃಷಿಕರಾಗಿದ್ದು. ಗ್ರಾಮದ ಧಾರ್ಮಿಕ ,ಸಾಮಾಜಿಕ ಸೇವೆಗಳಿಗೆ ಸಹಕಾರವನ್ನು ನೀಡುತ್ತಾ ಬಂದವರು, ಕರ್ನಿರೆ ಜಾರಂದಾಯ ದೈವಸ್ಥಾನ ಅಭಿವೃದ್ಧಿಗೆ ಮತ್ತು ಗ್ರಾಮದ ಶಾಲೆಯ ಚಟುವಟಿಕೆಗಳಿಗೆ . ಹಾಗೂ ಬಂಟ ಸಮಾಜದ ಶ್ರೇಯ ಅಭಿವೃದ್ಧಿಗೆ ತಮ್ಮ ಮಕ್ಕಳ ಮೂಲಕ ಬಹಳಷ್ಟು ಸಹಕಾರವನ್ನು ನೀಡುವಲ್ಲಿ ಪ್ರೇರಣೆ ಶಕ್ತಿ ಆದವರು.
ಗಿರಿಜಾ ಶೆಟ್ಟಿ ಅವರ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಮತ್ತು ಪದಾಧಿಕಾರಿಗಳು.ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ. ಮಾತೃ ಭೂಮಿ ಕಾಪರ್ಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಉಲ್ತೂರು ಮೋಹನ್ ದಾಸ್ ಶೆಟ್ಟಿ ಮತ್ತು ಪದಾಧಿಕಾರಿಗಳು. ಹಾಗೂ ಜಿಲ್ಲೆಯ ವಿವಿಧ ಬಂಟರ ಸಂಘದ ಪದಾಧಿಕಾರಿಗಳು. ಬಂಟರ ಸಮಾಜದ ನಾಯಕರು. ರಾಜಕೀಯ ಮುಖಂಡರು ದುಃಖ ಸಂತಾಪ ಸೂಚಿಸಿರುವರು,