
ವಿದ್ಯಾರ್ಜನೆ ಗೆ ಸಹಾಯ ನೀಡಿದ ದಾನಿಗಳು ದೇವರು ಅನುಗ್ರಹಿಸುತ್ತಾನೆ: ಶೇಖರ್ ಪಿ ಶೆಟ್ಟಿ
ದಹಿಸರ್ ಜೂ11. ದಹಿಸರ್ ಪೂರ್ವದ ಶ್ರೀ ದುರ್ಗಾಪರಮೇಶ್ವರಿ – ಶ್ರೀ ಶನೀಶ್ವರ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಪ್ರತಿ ವರ್ಷದ ದಂತೆ ಹ ಈ ವರ್ಷವೂ ಜೂ 9 ನೇ ರವಿವಾರ ಪರಿಸರದ ಎಲ್ಲಾ ಸಮುದಾಯದ 10 ನೇ ತರಗತಿಯ ವರೆಗಿನ ಮಕ್ಕಳಿಗೆ ಉಚಿತ ಟಿಪ್ಪಣಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಸಮಿತಿಯ ಸದಸ್ಯರು ಸೇರಿ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ಮಾಡಿದ ಬಳಿಕ ಸುಮಾರು 600 ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಪುಸ್ತಕ ವಿತರಣೆಗೆ ಧನ ರೂಪದಲ್ಲಿ ಸಹಕರಿಸಿದ ಎಲ್ಲಾ ಸದಸ್ಯರಿಗೆ ಸವಿತಿಯ ಅಧ್ಯಕ್ಸರಾದ ಶೇಖರ್ ಪಿ ಶೆಟ್ಟಿ ಯವರು ವಿದ್ಯಾರ್ಜನೆ ಗೆ ಸಹಾಯ ನೀಡಿದ ದಾನಿಗಳಿಗೆ ಎಲ್ಲಾ ಸದಸ್ಯರಿಗೆ , ಭಕ್ತರಿಗೆ ಶ್ರೀ ದೇವರು ಒಳಿತು ಮಾಡಲಿ ಎಂದು ನುಡಿದರು.

ಈ ಎಲ್ಲಾ ಕಾರ್ಯಕ್ರಮಕ್ಕೆ ಗೌ. ಪ್ರ. ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಕೋಶಧಿಕಾರಿ ದೀಪಕ್ ಪೂಜಾರಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದು ಎಲ್ಲಾ ರೀತಿಯಲ್ಲಿ ಸಹಕರಿಸಿದರು.