
ಥಾಣೆ, ಜೂ.12: ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ,ಅಪಾರ ಜನ ಮೆಚ್ಚುಗೆ ಪಡೆದಿರುವ ಘೋಡ್ ಬಂದರ್ ರೋಡ್ ಕನ್ನಡ ಎಸೋಸಿಯೇಷನ್ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ,ಥಾಣೆ ಘೋಡ್ ಬಂದರ್ ರೋಡ್ ,ವಾಘ್ಬಿಲ್ ಗಾಂವ್ ನಲ್ಲಿರುವ ,ಜೀವನ್ ಸಂವರ್ಧನ ಫೌಂಡೇಶನ್ ,ಅನಾಥ ಮಕ್ಕಳ ನಿರ್ವಹಣಾ ಕೇಂದ್ರಕ್ಕೆ ಭೇಟಿಕೊಟ್ಟು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು. ಸಂಘದ ಸದಸ್ಯರನ್ನು ನಿರ್ವಹಣಾ ಕೇಂದ್ರದ ವಿದ್ಯಾರ್ಥಿಗಳು ಭಜನೆ ಮತ್ತು ಭಕ್ತಿ ಗೀತೆಯೊಂದಿಗೆ ಸ್ವಾಗತಿಸಿದರು. ಸದಸ್ಯ ಬಾಂಧವರು ವಿದ್ಯಾರ್ಥಿಗಳ ಒಟ್ಟಿಗೆ ಬೆರೆತು ಯೋಗಕ್ಷೇಮ ವಿಚಾರಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬಿ ಉತ್ತಮ ವಿದ್ಯಾಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು. ಫೌಂಡೇಶನ್ ನ ಮುಖ್ಯಸ್ಥೆ ಅಂಜಲಿ ತಾಯಿ ನಿರ್ವಹಣ ಕೇಂದ್ರದ ಕಾರ್ಯಚಟುವಟಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಂಘದ ಸದಸ್ಯರಿಗೆ ವಿಸ್ತಾರವಾಗಿ ವಿವರಿಸಿದರು .ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಅವರು ಮಾತನಾಡುತ್ತಾ ದಶಕಗಳ ಹಿಂದೆ ಸ್ಥಾಪನೆಯಾದ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ಸ್ಥಾಪನೆಯ ಮುಖ್ಯ ಉದ್ದೇಶಗಳಲ್ಲಿ ಒಂದು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಉತ್ತೇಜನ ಕೊಡುವುದು. ಈ ನಿಟ್ಟಿನಲ್ಲಿ ಸಂಘ ನಿರಂತರವಾಗಿ ಕೆಲಸ ಮಾಡಿದೆ. ವಿದ್ಯೆ ಎನ್ನುವುದು ಯಾರಿಂದಲೂ ಕದಿಯಲಾಗದ ವಸ್ತು ಆಗಿದ್ದು, ನಮ್ಮ ಬದುಕಿನ ಜೀವನ ಶೈಲಿಯನ್ನು ಬದಲಾಯಿಸುವ ಶಕ್ತಿ ವಿದ್ಯೆಗೆ ಇದೆ ಎಂದರು. ಉತ್ತಮ ಶಿಕ್ಷಣ ಪಡೆದು ದೇಶದ ಸಶಕ್ತ ಪ್ರಜೆ ಆಗಬೇಕು ಎಂದರು. ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ನಿಮಗೆ ಸದಾ ಸಹಕಾರ ನೀಡಲಿದೆ ಎಂದರು .

ಈ ಸಂದರ್ಭದಲ್ಲಿ ವಿದ್ಯಾರ್ಥಿ ದತ್ತು ಸ್ವೀಕಾರದ ಚೆಕ್ಕ್ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ,ಕಾರ್ಯದರ್ಶಿ ವಾಣಿಶ್ರೀ ಶೆಟ್ಟಿ, ಕೋಶಾಧಿಕಾರಿ ಜಯ ಪೂಜಾರಿ,ಜೊತೆ ಕಾರ್ಯದರ್ಶಿ ವಸಂತ ಸಾಲಿಯಾನ್ ,ಜೊತೆ ಕೋಶಾಧಿಕಾರಿ ಜಯಚಂದ್ರ ಮೆಂಡನ್ ಮಹಿಳಾ ವಿಭಾಗದ ಅಧ್ಯಕ್ಷೆ ರೂಪಾ ಪೂಜಾರಿ ,ಸ್ಥಾಪಕ ಸದಸ್ಯ ನಿತ್ಯಾನಂದ ಶೆಟ್ಟಿ ಬೆಳುವಾಯಿ, ಆಡಳಿತ ಮಂಡಳಿಯ ಸದಸ್ಯರಾದ ಸದಾಶಿವ ಮೊಯ್ಲಿ ,ಶ್ರೀನಾಥ್ ಶೆಟ್ಟಿ ,ಆನಂದ ಶೆಟ್ಟಿ ,ವಿಶ್ವನಾಥ್ ಶೆಟ್ಟಿ, ಪ್ರತಿಭಾ ಶೆಟ್ಟಿ ,ಸೀಮಾ ಶೆಟ್ಟಿ, ವಂದನಾ ಶೆಟ್ಟಿ ,ಮೋಹಿನಿ ಕೊಠಾರಿ, ಮಾಲತಿ ಮೆಂಡನ್, ವಾಣಿಶ್ರೀ ಮೆಂಡನ್, ವಿದ್ಯಾ ಶೆಟ್ಟಿ, ಚಂದ್ರಕಲಾ ಬಂಗೇರ ಉಪಸ್ಥಿತರಿದ್ದರು.


ಕಾರ್ಯಕ್ರಮದ ಯಶಸ್ವಿಗೆ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮಣ್ ಮಣಿಯಾಣಿ ,ಹರೀಶ್ ಸಾಲಿಯಾನ್, ವಿಕ್ರಮಾನಂದ ಶೆಟ್ಟಿ,ಪ್ರಶಾಂತ್ ನಾಯಕ್,ರವಿ ಕೋಟ್ಯಾನ್, ಮಾಯಾ ಮನೋಜ್, ಪ್ರೇಮಾ ಶೆಟ್ಟಿ, ಹೇಮಾ ಶೆಟ್ಟಿ, ಬೇಬಿ ಶೆಟ್ಟಿ ,ರೇಖಾ ಉಪಾಧ್ಯ,ಗುಣ ಅಂಚನ್, ಪ್ರಶಿತಾ ಶೆಟ್ಟಿ ,ಹರೀಶ್ ಶೆಟ್ಟಿ ಮನೋರಮಾ ನಗರ,ಯೋಗೇಶ್ ಶೆಟ್ಟಿ, ಸುನಿಲ್ ಶೆಟ್ಟಿ ,ಪ್ರಕಾಶ್ ಶೆಟ್ಟಿ ಸಹಕರಿಸಿದರು