23.5 C
Karnataka
April 4, 2025
ಪ್ರಕಟಣೆ

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ 8 ರಿಂದ 10 ನೇ ತರಗತಿಗೆ ನೇರ ಪ್ರವೇಶ. : ತುಳು ಕನ್ನಡಿಗರಿಗೆ ಸದಾವಕಾಶ



ತುಳು ಕನ್ನಡಿಗರಿಗೆ ಸದಾವಕಾಶ

ಮುಂಬೈ ಪೋರ್ಟ್ ಪರಿಸರದಲ್ಲಿ ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ವಿದ್ಯಾದಾಯಿನಿ ಸಭಾ ಮುಂಬಯಿ. ಇದರ ಸಂಚಾಲಕತ್ವದಲ್ಲಿರುವ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ ಎಂಟರಿಂದ ಹತ್ತನೇ ತರಗತಿಗೆ (ಕನ್ನಡ ಮಾಧ್ಯಮ) ನೇರ ಪ್ರವೇಶ ಆರಂಭವಾಗಿದೆ.

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ ಐದು ಯಾ ಆರನೇ ತರಗತಿಯಲ್ಲಿ ಶಾಲೆಯನ್ನು ಬಿಟ್ಟ ವಿದ್ಯಾರ್ಥಿಗಳಿಗೆ ಸರಕಾರದ ಆದೇಶಾನುಸಾರ ನೇರವಾಗಿ ಎಂಟನೇ ತರಗತಿಗೆ ಸೇರ್ಪಡೆಗೊಳಿಸಲಾಗುವುದು. ನುರಿತ, ಅನುಭವಿ,ತಜ್ಞ ಶಿಕ್ಷಕರಿಂದ ಬೋಧನೆ,ಇಂಗ್ಲಿಷ್ ಹಾಗೂ ಗಣಿತ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ, ಹಿಂದಿ ಹಾಗೂ ಮರಾಠಿ ಭಾಷೆಯ ಕುರಿತು ಹೆಚ್ಚಿನ ಗಮನವನ್ನು ನೀಡಲಾಗುವುದು. ಸುಸಜ್ಜಿತವಾದ ಪ್ರಯೋಗಶಾಲೆ ಹಾಗೂ ಗ್ರಂಥಾಲಯ ಸೌಲಭ್ಯ . ಅಂತರ ಶಾಲಾ ಪ್ರತಿಭಾ ಸ್ಪರ್ಧೆಗಳಲ್ಲಿ ಭಾಗವಹಿಸಲು ತರಬೇತಿ ನೀಡಲಾಗುವುದು.

ಶಾಲೆಯಲ್ಲಿ ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವದ ಆಚರಣೆ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಲಾಗುತ್ತದೆ . ಎಲ್ಲ ರೀತಿಯ ದಿನಾಚರಣೆ ಹಾಗೂ ಹಬ್ಬ ಹರಿದಿನಗಳನ್ನು ಆಚರಿಸುವ ಕೋಟೆ ಪರಿಸರದ ಕನ್ನಡ ಮಾಧ್ಯಮದ ರಾತ್ರಿ ಶಾಲೆ ಇದಾಗಿದೆ.

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕ 98 ವರ್ಷಗಳನ್ನು ಪೂರೈಸಿ 2026 ರಲ್ಲಿ ಶತಮಾನೋತ್ಸವವನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ಮುನ್ನುಗ್ಗುತ್ತಿರುವ ಮುಂಬೈ ಕೋಟೆ ಪರಿಸರದ ಸರಕಾರಿ ಅನುದಾನಿತ ರಾತ್ರಿ ಶಾಲೆಯಾಗಿದೆ.

ವಿದ್ಯಾರ್ಥಿನಿಯರಿಗೆ ರಾತ್ರಿ ಶಾಲೆಯಲ್ಲಿ ಕಲಿಯುವ ಅವಕಾಶವನ್ನು ನೀಡಲಾಗುತ್ತಿದೆ ಹಾಗೂ ಪ್ರತಿದಿನ ಸಂಜೆ ಎಲ್ಲಾ ವಿದ್ಯಾರ್ಥಿಗಳಿಗೆ ಉಪಹಾರದ ಸೌಲಭ್ಯವಿದೆ.

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ ಎಲ್ಲಾ ಕನ್ನಡಿಗರಿಗೆ ಉಚಿತ ಪ್ರವೇಶವಿದ್ದು ಉಚಿತ ನೋಟ್ಸ್ ,ಪುಸ್ತಕ ಉಚಿತ ಪಠ್ಯ ಪುಸ್ತಕ ,ಉಚಿತ ರೈಲ್ವೆ ಪಾಸ್, ಉಚಿತ ಬಸ್ ಪಾಸ್ ,ಉಚಿತ ಫುಟ್ಬಾಲ್ ಕೋಚಿಂಗ್, ಉಚಿತ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಉಚಿತ ಕಂಪ್ಯೂಟರ್ ಶಿಕ್ಷಣ ದೊಂದಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ
ಎಸ್. ಎಸ್ .ಸಿ ಪರೀಕ್ಷೆಯಲ್ಲಿ ಸತತ 11 ವರ್ಷಗಳಿಂದ ಶೇಕಡ 100 ಫಲಿತಾಂಶ ಪಡೆದಿದ್ದು ಎಸ್ .ಎಸ್ .ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಮುಂದಿನ ಕಾಲೇಜಿನ ಶಿಕ್ಷಣಕ್ಕೆ ಸಂಪೂರ್ಣವಾದ ನೆರವು ನೀಡಲಾಗುತ್ತದೆ.

Masoom ಈ ಸರಕಾರೇತರ ಸಂಸ್ಥೆಯ ಮುಖಾಂತರ ವಿವಿಧ ರೀತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ.

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು CST ರೈಲ್ವೆ ಸ್ಟೇಷನ್ ಹಾಗೂ Churchgate ರೈಲ್ವೆ ಸ್ಟೇಷನ್ ನಿಂದ ಕೇವಲ ಐದು ನಿಮಿಷಗಳ ಕಾಲ್ನಡುಗೆಯ ಅಂತರದಲ್ಲಿದೆ.

ಶಾಲಾ ಸಮಯ ಸಂಜೆ 6:30 ರಿಂದ 9:30ವರೆಗೆ

ಶಾಲಾ ವಿಳಾಸ
ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆ. 31 ರಘುನಾಥ ದಾದಾಜಿ ಸ್ಟ್ರೀಟ್ ಫೋರ್ಟ್ ಮುಂಬೈ 400001.
Phone. 022- 22625642
(9768644210)

ತುಳು ಕನ್ನಡಿಗ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿ ಹಾಗೂ ಇನ್ನೆರಡು ವರ್ಷದಲ್ಲಿ ಆಚರಿಸಲಿರುವ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಎಲ್ಲರೂ ಈಗಿನಿಂದಲೇ ಪಾಲ್ಗೊಳ್ಳಿರಿ ಎಂದು ಮುಂಬೈಯ ಎಲ್ಲಾ ಕನ್ನಡಿಗರಲ್ಲಿ ವಿನಮ್ರವಾಗಿ ವಿನಂತಿಸುತ್ತಿದ್ದೇವೆ.

ವಿದ್ಯಾದಾಯಿನಿ ಸಭಾ, ಮುಂಬಯಿ ಇದರ ಪರವಾಗಿ

ಗೌರವ ಅಧ್ಯಕ್ಷರು :
J M ಕೋಟ್ಯಾನ್ 9819454766

ಅಧ್ಯಕ್ಷರು: ಪುರುಷೋತ್ತಮ ಕೋಟ್ಯಾನ್
9819800685

ಗೌರವ ಕಾರ್ಯದರ್ಶಿ
ಚಿತ್ರಾಪು ಕೆಎಂ ಕೋಟ್ಯಾನ್
9820187411

ಆರ್ ಕೆ ಕೋಟ್ಯಾ ನ್
9820887508

ಶಾಲಾಧಿಕಾರಿ
ಡಾ. ಪ್ರಕಾಶ್ ಮೂಡುಬಿದ್ರೆ
9869249797

ಕಾರ್ಯಾಧ್ಯಕ್ಷರಾದ
ಜಿ ಸಿ ಸಾಲಿಯನ್
9870314464

ಚಿತ್ರಲೇಖ ಟೀಚರ್ 8779005427

ದಿನೇಶ್ ಪೂಜಾರಿ 9920568467

ಎಚ್ಎಸ್ ಪೂಜಾರಿ
9920997907

ವಿಜಯ ಪೂಜಾರಿ
9082944687

ಮುಖ್ಯೋಪಾಧ್ಯಾಯರು ಪ್ರಕಾಶ್ಚಂದ್ರ ಎಂ ಆರ್ ಬಂಗೇರ 7021931365

ಇವರು ಈ ಪತ್ರಿಕಾ ಪ್ರಕಟಣೆಯ ಮುಖಾಂತರ ಮುಂಬೈಯ ಎಲ್ಲಾ ಕನ್ನಡಿಗರಲ್ಲಿ ವಿನಂತಿಸಿಕೊಂಡಿದ್ದಾರೆ

Related posts

ನವೆಂಬರ್ 24. ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ : 36ನೇ ವಾರ್ಷಿಕ ಮಹಾಪೂಜೆ ಮತ್ತು ಭಜನಾ ಮಂಗಳೋತ್ಸವ

Mumbai News Desk

ಡಿ. 24ರಂದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜೋಡು ಜೀಟಿಗೆ ನಾಟಕ : ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಕಾರ್ಯಕ್ರಮ

Mumbai News Desk

 ನ 29,30 ಮತ್ತು ಡಿ 1 ಸತತ ಮೂರು ದಿವಸ  ಮಕ್ಕಳ ಕಲರವದಲ್ಲಿ ನಾಟಕೋತ್ಸವ, ಯಕ್ಷಗಾನೋತ್ಸವ, ವಾರ್ಷಿಕೋತ್ಸವಗಳ ವಿಜೃಂಭಣೆಯ ಮಹಾಮೇಳ.

Mumbai News Desk

ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರ, ಕಾಸರಗೋಡು, ಮುಂಬೈ ಘಟಕ ಡಿ 21.ಬ್ರಹ್ಮಕಲಶೋತ್ಸವದ ವಿಶೇಷ ಸಭೆ.

Mumbai News Desk

ಆ. 25. ಬಾಂಬೆ ಬಂಟ್ಸ್ ಅಸೋಷಿಯೇಶನ್ ವತಿಯಿಂದ ವಾರ್ಷಿಕ ಶೈಕ್ಷಣಿಕ ಸಹಾಯ ವಿತರಣಾ,ಯಕ್ಷಗಾನ,ಸಾಧಕರಿಗೆ ಸನ್ಮಾನ

Mumbai News Desk