
ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯಗಳು ಯಶಸ್ವಿ : ಮೋಹನ್ ಜಿ ಬಂಗೇರ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಜೂ11. : ಮಲಾಡ್ ಪೂರ್ವ ಗೊರೆಗಾಂವ್ ಫ್ಲೈ ಓವರ್ ಸಮೀಪ ದಲ್ಲಿರುವ. ಇರಾನಿ ಕಾಲೋನಿ ಯಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಆಡಳಿತದಲ್ಲಿರುವ ಶ್ರೀ ಶನಿಮಂದಿರದಲ್ಲಿಜೂ 6 ರಂದು ವೈಶಾಖ ಅಮಾವಾಸ್ಯೆ ದಿನಾಚರಣೆ,ಯು ಅಂಗವಾಗಿ ದಿನಪೂರ್ತಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಗೋವಿಂದ ಭಟ್ ಅವರ ಪುರೋಹಿತ್ಯದಲ್ಲಿ ನಡೆಯಿತು




ಅಂದು ಬೆಳಿಗ್ಗೆ ಗಣ ಹೋಮ , ಅನಂತರ ಶನೀಶ್ವರ ದೇವರಿಗೆ ಭಕ್ತರಿಂದ ಸಂಗ್ರಹಿಸಿದ ದೇನಿಗೆಯಿದ ಸುಮಾರು 40ಲಕ್ಷ ರೂಪಾಯಿ ವೆಚ್ಚದ ನೂತನ ಚಿನ್ನದ ಪತಾಕೆಯನ್ನು ಸಮರ್ಪಿಸಲಾಯಿತು,
ಅನಂತರ ಸಾಮೂಹಿಕ ಶನಿ ಶಾಂತಿ ಪಂಚಾಮೃತ ಅಭಿಷೇಕ, ನವಕ ಕಲಶ ಅಭಿಷೇಕ, . ಮಧ್ಯಾಹ್ನ ಮಹಾಪೂಜೆ ಯನಂತರ ಅನ್ನ ಸಂತರ್ಪಣೆ, ನಡೆಯಿತು, ಮಧ್ಯಾಹ್ನ ಕಲಶ ಮುಹೂರ್ತ, ಸಂಜೆ ಶ್ರೀ ಶನಿ ಗ್ರಂಥ ಪಾರಾಯಣ , ಸಮಿತಿಯ ವತಿಯಿಂದ ಭಜನೆ, ರಾತ್ರಿ ಮಹಾಪೂಜೆಯನ್ನು ದೇವಸ್ಥಾನದ ಅರ್ಚಕ ಸುಧಾಕರ್ ಶೆಟ್ಟಿ ನಡೆಸಿದರು,
ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ಭವ್ಯ ರಂಗಮಂಟಪದಲ್ಲಿ ಅಭಿನಯ ಮಂಟಪದ ಕಲಾವಿದರಿಂದ. ಕರುಣಾಕರ್ ಕಾಪು ನಿರ್ದೇಶನದ, ಕಲ್ಕುಡ ಕಲ್ಲುರ್ಟಿ” ತುಳು ನಾಟಕ ಪ್ರದರ್ಶನಗೊಂಡಿದ್ದು
ನಾಟಕದ ಕೊನೆಯಲ್ಲಿ ಅಭಿನಯ ಮಂಟಪದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ನಿರ್ದೇಶಕ ಕರುಣಾಕರ್ ಕಾಪು ಅವರನ್ನು ಗೌರವಿಸಿದ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಅಧ್ಯಕ್ಷ ಮೋಹನ್ ಜಿ ಬಂಗೇರವರು ಈ ಕ್ಷೇತ್ರವು ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಪುಣ್ಯ ಕ್ಷೇತ್ರವಾಗಿ ಬೆಳಗುತ್ತಿದೆ, ಮುಂಬೈ ನಗರ ಹಾಗೂ ವಿವಿಧ ಉಪನಗರ ಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ವಿವಿಧ ರೀತಿಗಳ ಸೇವೆಗಳನ್ನು ನಡೆಸಿ ದ್ದಾರೆ, ಭಕ್ತರೆಲ್ಲರ ಸಹಕಾರದಿಂದ ದೇವಸ್ಥಾನದ ಎಲ್ಲಾ ಸೇವಾ ಕಾರ್ಯಗಳು ಸುಸಂಗವಾಗಿ ನಡೆಯುತ್ತದೆ ಎಂದು ನುಡಿದರು
ಈ ಸಂದರ್ಭದಲ್ಲಿ ಸಮಿತಿಯ ಗೌರವ ಕಾರ್ಯದರ್ಶಿಗಳು ಎಚ್.ಎಸ್.ಕರ್ಕೇರ, ಎಂ.ಎನ್.ಸುವರ್ಣ, ಗೌರವ ಕೋಶಧಿಕಾರಿಗಳಾದ ಕೆ ಎಂ ಸಾಲಿಯಾನ್ , ಅತುಲ್ ಎಂ. ಓಜಾ, ಭುವಾಜಿ ಕೆ.ಎನ್.ಸಿ. ಸಾಲಿಯಾನ್ ಇತರರು ಪಾಲ್ಗೊಂಡಿದ್ದರು
. ದಿನಪೂರ್ತಿ ನಡೆದ ಪೂಜಾ ಕಾರ್ಯದಲ್ಲಿ ನಗರ ಹಾಗೂ ಉಪನಗರಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು ರಾತ್ರಿ ನಡೆದ ನಾಟಕದಲ್ಲೂ ಕೂಡ ಕಲಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು