
ಶೀಮ್ಲಾ ದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಹಿಂದಿ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ರಂಗಸಂಸ್ಥೆ ಉಡುಪಿಯ ನವಸುಮ ರಂಗಮಂಚ ಪ್ರಥಮ ಸ್ಥಾನ ಗಳಿಸಿದೆ.ದೇಶದ ಒಟ್ಟು 30 ತಂಡಗಳು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.
ಬಾಲಕೃಷ್ಣ ಕೊಡವೂರು ರಚಿಸಿ ನಿರ್ದೇಶಿಸಿದ “ದ್ರೌಣಿ” ಮೂಲ ನಾಟಕವನ್ನು ಡಾ.ಮಾಧವಿ ಭಂಡಾರಿ ಹಿಂದಿಗೆ ಅನುವಾದಿಸಿದ್ದು, ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ಉದ್ಘೋಷಕಿ ಅಕ್ಷತಾ ಪೆರ್ಲ ರಂಗ ಪದ್ಯ ರಚಿಸಿದ್ದಾರೆ. ಜಯಶೇಖರ್ ಮಡಪ್ಪಾಡಿ ಬೆಳಕಿನ ವಿನ್ಯಾಸ ಮಾಡಿದರೆ, ರೋಹಿತ್ ಮಲ್ಪೆ ಸಂಗೀತ ನೀಡಿದ್ದರು.
ಖ್ಯಾತ ಜನಪದ ಕಲಾವಿದ ಗುರುಚರಣ್ ಪೊಲಿಪು ಕೃಪಾಚಾರ್ಯನಾಗಿ, ರಕ್ಷಿತ್ ಮೂಡಬೆಟ್ಟು ಕ್ರತವರ್ಮಾ, ಕಾಲಬೈರವನಾಗಿ ವಿನೋದ್, ಸಂಜಯಾನಾಗಿ ಸುಕೇಶ್ ಮಧ್ವನಗರ್, ಕೃಷ್ಣನಾಗಿ ಖುಷಿ ಪೂಜಾರಿ ಹೆರ್ಗ, ಬಲರಾಮನಾಗಿ ಸತೀಶ್ ಕೋಟ್ಯಾನ್ ಕೊಡವೂರು, ಸೇವಕಿಯಾಗಿ ಲಿಪಿಕ ಹೆಗ್ಡೆ ಪಂಜಿಮಾರು, ಮೇಳ ಹಾಗೂ ಸೈನಿಕನಾಗಿ ದಿನೇಶ್ ಕದಿಕೆ, ಚಿರಾಗ್ ಮಧ್ವನಗರ, ಸುಹಾಗ್ ಬೈಲಕೆರೆ, ಪ್ರದೀಪ್ ಕಲ್ಮಾಡಿ, ಮನೀಶ್ ಅಮೀನ್ ಮೂಡಬೆಟ್ಟು ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದರು. ಸಂತೋಷ್ ಪೆರಂಪಳ್ಳಿ ಬೆಳಕಿನಲ್ಲಿ ಸಹಕರಿಸದರು.
ಉಡುಪಿಯ ಹೆಸರಾಂತ ಕಲಾ ಸಂಸ್ಥೆ ನವಸುಮ ರಂಗಮಂಚ ಕೊಡವೂರು, ಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ತಂಡವಾಗಿದ್ದು, ಎರಡನೇ ಬಾರಿ ಪ್ರಥಮ ಸ್ಥಾನ ಪಡೆಯುವ ಮೂಲಕ , ರಾಜ್ಯ, ಜಿಲ್ಲೆಗೆ ಹೆಮ್ಮೆ ತಂದಿದೆ.