
ಸಮಾಜದಲ್ಲಿ ಶೈಕ್ಷಣಿಕ ಅಭಿವೃದ್ದಿ ಬಂಟರ ಸಂಘದ ಮುಖ್ಯ ಉದ್ದೇಶ – ಪ್ರವೀಣ್ ಬೋಜ ಶೆಟ್ಟ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ : ಬಂಟರ ಸಂಘ ಮುಂಬಯಿ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ಪ್ರಾರಂಭದಿಂದಲೇ ಸಂಘವು ವಿದ್ಯೆಗೆ ಒತ್ತು ನೀಡುತ್ತಾ ಬಂದಿದೆ. ಸಮಾಜದಲ್ಲಿ ಶೈಕ್ಷಣಿಕ ಅಭಿವೃದ್ದಿ ಬಂಟರ ಸಂಘದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ವಿವಿಧ ರೀತಿಯ ಶಿಕ್ಷಣಕ್ಕೆ ಅವಕಾಶವಿದ್ದು ನಮ್ಮ ಮಕ್ಕಳಿಗೆ ಮಾತ್ರವಲ್ಲ ಇತರ ಸಮಾಜದ ತುಳು ಕನ್ನಡಿಗ ಮಕ್ಕಳಿಗೂ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ರಿಯಾಯಿತಿ ಇದ್ದು ಸಮಾಜದ ಮಕ್ಕಳಿಗೆ ದೊರೆಯುವ ಈ ವಿಶೇಷ ರಿಯಾಯಿತಿಯ ಸದುಪಯೋಗ ಪಡೆಯಬೇಕು, ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ನುಡಿದರು.
ಬಂಟರ ಸಂಘ ಮುಂಬಯಿ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಯಿಂದ ಜೂ. 16 ರಂದು ನಲಾಸೊಫಾರ ಪಶ್ಚಿಮದ ಹೋಟೆಲ್ ಗ್ಯಾಲಕ್ಸಿ ಸಭಾಗೃಹದಲ್ಲಿ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ ಹಾಗೂ ವಿಕಲ ಚೇತನರಿಗೆ 2024ರ ಆರ್ಥಿಕ ಸಹಾಯವನ್ನು ವಿತರಿಸಲಾಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಮಾಜ ಸೇವೆಯಲ್ಲಿ ಬಂಟರ ಸಂಘ ಮಾಡದ ಕೆಲಸವೇ ಇಲ್ಲ ಎಂದು ಅಭಿಮಾನದಿಂದ ಹೇಳಬಹುದು, ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆ ಗೆ ಇದೀಗ 26ನೇ ವರ್ಷ. ಸಂಘಕ್ಕೆ ದೊಡ್ಡ ಮೊತ್ತದ ಆದಾಯವನ್ನು ನೀಡುತ್ತಿದ್ದು ಎಸ್ ಎಂ ಶೆಟ್ಟಿ ಯವರು ನಮ್ಮ ಬಂಟರ ಸಂಘದ ಕಿರೀಟದ ವಜ್ರದಂತೆ. ಆ ನಂತರ ಬಂಟರ ಸಂಘದ ಎದುರೇ ಇರುವ ಉಮಾ ಕೃಷ್ಣ ಶೆಟ್ಟಿ ಮೇನೇಜ್ಮೆಂಟ್ ಕಾಲೇಜು ಇದೆ. ರಮಾನಾಥ್ ಪಯ್ಯಡೆ ಕ್ಯಾಟರಿಂಗ್ ಕಾಲೇಜು ಇದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಾವು ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡುತ್ತೇವೆ. ಇದಲ್ಲದೆ ಪ್ರತೀ ವರ್ಷ ಸುಮಾರು ಹತ್ತು ಕೋಟಿ ರೂಪಾಯಿ ನಮ್ಮವರಿಗೆ ನಾವು ಖರ್ಚು ಮಾಡುತ್ತೇವೆ. ಇಂದು ನಮ್ಮ ಮಕ್ಕಳಿಗೆ ಸಂಘದಿಂದ ಸಿಗುವ ಸೌಲಭ್ಯಗಳು ಮೊದಲು ನಮ್ಮ ಕಾಲದಲ್ಲಿ ಸಿಗುತ್ತಿರಲಿಲ್ಲ. ಡಿಗ್ರಿಯಾಗಿ ಉನ್ನತ ಮಟ್ಟದ ಶಿಕ್ಷಣ ಮಾಡುತ್ತಿರುವವರಿಗೆ ಪ್ರತಿ ವರ್ಷ ಬಡ್ಡಿ ರಹಿತ ರೂ. 50 ಸಾವಿರ ದಂತೆ ಇಂಜಿನಿಯರಿಂಗ್, ಎಂ ಬಿ ಎ, ಡಾಕ್ಟರ್ ಕಲಿಯುವವರಿಗೆ ಕೊಡುತ್ತಿದ್ದು ಅವರು ಕಲಿತು ಕೆಲಸ ಸಿಕ್ಕಿದ ನಂತರ ಅದನ್ನು ಹಿಂತಿರುಗಿಸುತ್ತಿದ್ದು ಈ ತನಕ ಸುಮಾರು 400 ಮಕ್ಕಳಿಗೆ ನಾಲ್ಕು ಕೋಟಿಗಿಂತಲೂ ಅಧಿಕ ಮೊತ್ತವನ್ನು ನೀಡಿದ್ದೇವೆ. ಅದನ್ನು ಮಕ್ಕಳು ಹಿಂತಿರುಗಿಸಿದ್ದಾರೆ ಅನೇಕರು ಅದಕ್ಕೆ ಹೆಚ್ಚಿನ ಮೊತ್ತವನ್ನು ಸೇರಿಸಿ ಸಂಘಕ್ಕೆ ಹಿಂತಿರುಗಿಸುತ್ತಿದ್ದಾರೆ. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಮತ್ತವರ ತಂಡ ಹಾಗೂ ಇತರ ಪದಾಧಿಕಾರಿಗಳು ಈ ಸಲ ದೊಡ್ಡ ಮಟ್ಟದ ಮೊತ್ತವನ್ನು ಸಂಗ್ರಹಿಸಿದ್ದು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಯಶಸ್ಸಿಗೆ ದಾನಿಗಳ ಕೊಡುಗೆಯೂ ಮುಖ್ಯ ಕಾರಣ ಎಂದರು.




ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಜಯ ಅಶೋಕ್ ಶೆಟ್ಟಿ ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವು ವಿಶ್ವ ಅಪ್ಪಂದಿರ ದಿನವಾಗಿದ್ದು ಮಕ್ಕಳೊಂದಿಗೆ ಆಗಮಿಸಿದ ಅವರ ತಂದೆಯವರು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ವೇದಿಕೆಯಲ್ಲಿ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ, ಶಶಿಧರ ಕೆ. ಶೆಟ್ಟಿ ಇನ್ನಂಜೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ, ಉಪಕಾರ್ಯಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಸಿಎ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಪಶ್ಚಿಮ ವಲಯ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ತಾರನಾಥ ಶೆಟ್ಟಿ, ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಜಯ ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಕು| ವರ್ಷ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ಜಯಂತ್ ಪಕ್ಕಳ, ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಪಲ್ಲಿ, ಸಲಹೆ ಸಮಿತಿಯ ಕಾರ್ಯ ಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ ,ರತೀಶ್ ಶೆಟ್ಟಿ, ಮೋಹನ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ವೀಣಾ ಶೆಟ್ಟಿ,ಉಪಸ್ಥಿತರಿದ್ದರು




ಈ ಕಾರ್ಯಕ್ರಮದಲ್ಲಿ ಸುಮಾರು ಒಟ್ಟು 21 ಲಕ್ಷ ಆರ್ಥಿಕ ಧನಸಾಯ ಚೆಕ್ಕನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ಮತ್ತು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿ ಅವರು ಪ್ರಾದೇಶಿಕ ಸಮಿತಿಗ ಹಸ್ತಾಂತರಿಸಿದರು.
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಗಿದ್ದು ಲೀಲಾವತಿ ಆಳ್ವ ಅವರು ಪ್ರಾರ್ಥನೆ ಮಾಡಿದರು.
ಕಾರ್ಯಕ್ರಮವನ್ನು ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್ ಮತ್ತು ವಿಜಯ ಶೆಟ್ಟಿ ಕುತ್ತೆತ್ತೂರು, ನಿರೂಪಿಸಿದರು , .ಜಗನ್ನಾಥ್ ಶೆಟ್ಟಿ ಪಳ್ಳಿ ಧನ್ಯವಾದ ನೀಡಿದರು



********
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಯವರು ಎಲ್ಲರನ್ನೂ ಸೇರಿಸಿ ಉತ್ತಮ ರೀತಿಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಲ ವಿಧವಾ ವೇತನದ ಮೊತ್ತವನ್ನು ಹೆಚ್ಚು ಮಾಡಿ ನಾವು ಮೊದಲಿಗಿಂತಲೂ ಹೆಚ್ಚು ಮೊತ್ತವನ್ನು ವಿತರಿಸುವಂತಾಗಿದೆ. ಮಕ್ಕಳು ಯಾವುದೇ ಕಾರಣದಿಂದ ಶೈಕ್ಷಣಿಕವಾಗಿ ವಂಚಿತರಾಗಬಾರದು. ಶಿಕ್ಷಣವು ನಮ್ಮ ನಿಜವಾದ ಆಸ್ತಿ. ಅದನ್ನು ಯಾರಿಂದಲೂ ಕಸಿದುಕೊಳ್ಳಲಾಗುದಿಲ್ಲ. ಕಲಿತ ನಂತರ ಅಂತಹ ವಿದ್ಯಾರ್ಥಿಗಳು ಎರಡು ವಿದ್ಯಾರ್ಥಿಗಳನ್ನಾದರೂ ದತ್ತು ಪಡಕೊಂಡಲ್ಲಿ ಸಮಾಜಕ್ಕೆ ಏನಾದರೂ ಹಿಂತಿರುಗಿಸಿದಂತಾಗುವುದು.
ಸಂಘವು ಮಾಡುತ್ತಿರುವ ಇಂತಹ ಸಹಾಯವನ್ನು ಮಕ್ಕಳು ಸದುಪಯೋಗ ಮಾಡಬೇಕು.
ದಿವಾಕರ್ ಶೆಟ್ಟಿ ಇಂದ್ರಾಳಿ
ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರು
===

ವಿದ್ಯಾರ್ಥಿ ವೇತನಕ್ಕಾಗಿ ನಾವು ಮೊದಲು ೪೫೦ ಅರ್ಜಿಯನ್ನು ವಿತರಿಸುತ್ತಿದ್ದೆವು. ಅಗತ್ಯ ಇಲ್ಲದವರೂ ಅರ್ಜಿ ಹಾಕುತ್ತಿದ್ದು ಇನ್ನೂ ಹೆಚ್ಚು ಅರ್ಜಿಯನ್ನು ನಾವು ತರಿಸಬೇಕಾಗುತ್ತಿತ್ತು. ಅರ್ಜಿ ಹಾಕುವ ಮಕ್ಕಳ ಸಂಖ್ಯೆ ಕಡೆಮೆಯಾದಲ್ಲಿ ಕೊಡುವ ಮೊತ್ತವು ಹೆಚ್ಚಾಗುವುದು. ಇದು ನಿಜವಾಗಿ ಅಗತ್ಯವಿದ್ದವರಿಗೆ ತುಂಬಾ ಸಹಕಾರಿಯಾಗುವುದು. ಇಂದು ನಮಗೆ 370 ಅರ್ಜಿ ಸಿಕ್ಕಿದ್ದು ನಮ್ಮವರು ಮೊದಲಿಗಿಂತಲೂ ಉತ್ತಮ ಸ್ಥಿತಿಯಲ್ಲಿದ್ದಂತಾಗಿದೆ. ಇಂದು ವಿದ್ಯಾರ್ಥಿ ವೇತನ ಪಡಕೊಂಡ ಮಕ್ಕಳು ಕೂಡ ಮುಂದೆ ಇಂಥ ವೇದಿಕೆಯಲ್ಲಿ ಕಾಣುವಂತಾಗಬೇಕು ಅಂತ ಸಾಧನೆಯನ್ನು ಅವರು ತಮ್ಮ ಜೀವನದಲ್ಲಿ ಮಾಡುವಂತಾಗಲಿ. ಪ್ರಾದೇಶಿಕ ಸಮಿತಿಯಲ್ಲಿ ದುಡಿದ ಅನೇಕರು ಬಂಟರ ಸಂಘದ ಪದಾಧಿಕಾರಿಗಳಾಗಿದ್ದು ಪ್ರಾದೇಶಿಕ ಸಮಿತಿಗಳ ಕಷ್ಟಗಳ ಬಗ್ಗೆ ಅವರಿಗೆ ಗೊತ್ತಿದ್ದು ಪ್ರಾದೇಶಿಕ ಸಮಿತಿಗಳಿಗೆ ತುಂಬಾ ಪ್ರಾಯೋಜನಕಾರಿಯಾಗಿದೆ. ಮಕ್ಕಳಿಗೆ ಸಂಘದ ಬಗ್ಗೆ ತಿಳಿಯಲು ಅವರ ಹಿರಿಯರು ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಕಾರ್ಯಕ್ರಮಕ್ಕೆ ತರುವುದು ಅತೀ ಅಗತ್ಯ.
ಶಶಿಧರ ಕೆ. ಶೆಟ್ಟಿ ಇನ್ನಂಜೆ
ಜೊತೆ ಕೋಶಾಧಿಕಾರಿ, ಬಂಟರ ಸಂಘ ಮುಂಬಯಿ,
====
ಮುಂದೆ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚು ಮಾಡಿದಲ್ಲಿ ಮಕ್ಕಳಿಗೆ ಅದರಿಂದ ಇನ್ನೂ ಹೆಚ್ಚಿನ ಪ್ರಯೋಜನ ವಾಗುವುದು. ಶಿಕ್ಷಣ ಮತ್ತು ಸಮಾಜ ಕಲ್ಯಾಣಕ್ಕಾಗಿ 1.80 ಕೋಟಿ ಆರ್ಥಿಕ ಸಹಾಯ ನೀಡುವ ಸಂಘಟನೆ ಬಂಟರ ಸಂಘ ಮಾತ್ರ ಎನ್ನಬಹುದು. ಮಕ್ಕಳು ಇದರ ಸದುಪಯೋಗವನ್ನು ಪಡೆದು ಇನ್ನೂ ವಿದ್ಯಾವಂತರಾಗಲಿ.
ಭಾಸ್ಕರ್ ಶೆಟ್ಟಿ ಕಾಂದೇಶ್
ಪಶ್ಚಿಮ ವಲಯ ಸಮನ್ವಯಕರು
====
ನನಗೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲು ಸಂತೋಷವಾಗುತ್ತಿದೆ. ದಿವಾಕರ್ ಶೆಟ್ಟಿ ಇಂದ್ರಾಳಿ ಯವರ ನೇತೃತ್ವದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದು ಅಭಿನಂದನೀಯ. ಯಾಕೆಂದರೆ ಅದು ಅಷ್ಟು ಸುಲಭ ಕೆಲಸವಲ್ಲ. ಸಣ್ಣ ಮೊತ್ತವನ್ನು ಇಂದು ನಮ್ಮ ಮಕ್ಕಳು ಪಡೆದಿದ್ದರೂ ದೊಡ್ಡ ಮೊತ್ತವನ್ನು ಸಂಘಕ್ಕೆ ಹಿಂತಿರುವಿಸುವಂತಾಗಲಿ. ಮುಖ್ಯವಾಗಿ ನಮಗೆ ಸ್ಥಳಾವಕಾಶವನ್ನು ನೀಡಿದ ಶಶಿಧರ ಶೆಟ್ಟಿ, ಸಮಿತಿಯ ಇತರ ಗಣ್ಯರು ಹಾಗೂ ಸಮಿತಿಯ ಎಲ್ಲಾ ಸದಸ್ಯರ ಸಹಕಾರ ಪ್ರೋತ್ಸಾಹವನ್ನು ಮರೆಯುವಂತಿಲ್ಲ. : ಜಯ ಅಶೋಕ್ ಶೆಟ್ಟಿ
ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್
——*–
ಪಾಲಕರು ಮಕ್ಕಳಿಗೆ ಉನ್ನತ ವ್ಯಾಸಂಗ ನೀಡಿ ಬಂಟರ ಸಂಘ ಹಾಗೂ ಸಮಾಜದಾನಿಗಳು ಸದಾ ನಿಮ್ಮೊಂದಿಗೆ ಇರುತ್ತಾರೆ.: ಮಂಜುನಾಥ್ ಶೆಟ್ಟಿ ಕೊಡ್ಲಾಡಿ ,
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಯವರು ಎಲ್ಲರನ್ನು ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ,ಪಾಲಕರು ಮಕ್ಕಳಿಗೆ ಉನ್ನತ ವ್ಯಾಸಂಗ ನೀಡಿ ನೀಡಿ ಬಂಟರ ಸಂಘ ಹಾಗೂ ಸಮಾಜದಾನಿಗಳು ಸದಾ ನಿಮ್ಮೊಂದಿಗೆ ಇರುತ್ತಾರೆ. ವಿದ್ಯೆಯನ್ನು ಯಾರಿಂದಲೂ ಕದಿಯಲಾರದು ಎಂದು ನುಡಿದರು.