
ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ, ಕುರಾರ್ ವಿಲೇಜ್ ನಲ್ಲಿ ಶನಿ ಕಥೆ ಪ್ರವಚನ ಮತ್ತು ಶನಿ ಗ್ರಂಥ ವಾಚನ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜೂ.22 ಶನಿವಾರ, ಸಂಜೆ 6 ಗಂಟೆಗೆ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಹಾಗು ಸಲೆಹೆಗಾರರು ಮತ್ತು ಹಿರಿಯ ಶನಿ ಕಥಾ ಪ್ರವಚನಕಾರರಾದ ನಾರಾಯಣ್ ಶೆಟ್ಟಿ ಅವರ ಮುಖೆನ ಜರಗಲಿದೆ.
ಮುಂಬೈ ಮಹಾನಗರದಲ್ಲಿ ಸಮರ್ಥ ಅರ್ಥ ಹೇಳುವ ಶನಿ ಕಥಾ ಪ್ರವಚನಕಾರರ ಸಮಸ್ಸೆ ಈಗಾಗಲೇ ಎದ್ದು ಕಾಣುತ್ತಿದೆ, ಒಂದು ತಲೆಮಾರು ಕಳೆದ ನಂತರ ಮುಂದೆ ಶನಿ ಕಥೆ ಹೇಳುವ ಯುವ ಪ್ರತಿಭೆ ಈಗಾಗಲೇ ತಯಾರು ಮಾಡಬೇಕಿದೆ ಎನ್ನುವ ಕಾಳಜಿಯನ್ನು ಅರ್ಥೈಸಿಕೊಂಡ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು, ಯುವ ಪೀಳಿಗೆಗೆ ಶನಿ ಕಥೆ ಹೇಳುವ ರೀತಿ, ವಿಷಯ ಸಾಮ್ರಾಜ್ಯ, ಕಥೆಯಲ್ಲಿ ಅಡಕವಾದ ಒಳಅರ್ಥ ಮತ್ತು ಭಾವಾರ್ಥ, ಆದ್ಯಾತ್ಮಿಕ ಚೌಕಟ್ಟು, ಹಾಗು ಭಕ್ತಿ ಮಾರ್ಗ ಪ್ರಚೋದನೆ ಮತ್ತು ಗ್ರಂಥ ಪಠನೆಯ ರೀತಿ, ಪ್ರಾರಂಭ ಹಾಗು ಮುಕ್ತಾಯದ ಚೌಕಟ್ಟು, ಅಧ್ಯಾಯ ಮುಕ್ತಾಯದ ರೀತಿ ನೀತಿ ಯನ್ನು ಪ್ರತೀ ಭಾನುವಾರ ಸಂಜೆ 6 ರಿಂದ 8 ರ ತನಕ ದೇವಸ್ಥಾನದಲ್ಲಿ ಶ್ ಶ್ರೀನಿವಾಸ ಸಾಫಲ್ಯರು ಮತ್ತು ನಾರಾಯಣ್ ಶೆಟ್ಟಿ ಯವರು ಉಚಿತವಾಗಿ ತರಬೇತಿ ನೀಡಲಿದ್ದಾರೆ.
ಆಸಕ್ತಿಯುಳ್ಳ ಮಕ್ಕಳು, ಮಹಿಳೆಯರು ಮತ್ತು ಯುವಕರು, ಮಹನೀಯರು ಈ ತರಬೇತಿ ಯಲ್ಲಿ ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೂಜಾ ಸಮಿತಿಯ ಉಪಾದ್ಯಕ್ಶರಾದ ರಮೇಶ್ ಆಚಾರ್ಯ ಇವರನ್ನು ಸಂಪರ್ಕಿಸಬಹುದು -೯೮೯೨೪೧೩೨೦೪. (9892413204)