
ಹಿರಿಯ ಸಾಹಿತಿ, ಲೇಖಕಿ ಡಾ. ಕಮಲ ಹಂಪನಾ (89) ಅವರು ಇಂದು (ಜೂನ್ 22) ಹೃದಯಘಾತದಿಂದ ಮೃತ ಪಟ್ಟಿದ್ದಾರೆ.
ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತಿದ್ದ ಅವರಿಗೆ ಶುಕ್ರವಾರ ರಾತ್ರಿ 10 ಗಂಟೆಗೆ ಹೃದಯಘಾತವಾಗಿತ್ತು, ಬಳಿಕ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜಾಜಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಅವರ ಇಚ್ಛೆಯಂತ್ತೆ ರಾಮಯ್ಯ ಮೆಡಿಕಲ್ ಕಾಲೇಜ್ ಗೆ ದೇಹದಾನ ಮಾಡಲಾಗುವುದು.ಅವರು ಪತಿ ಸಾಹಿತಿ, ಸಂಶೋಧಕ ಹಂಪ ನಾಗರಾಜಯ್ಯ , ಇಬ್ಬರು ಪುತ್ರಿ, ಒಬ್ಬ ಪುತ್ರನನ್ನು ಅಗಲಿರುವರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪಿಎಚ್ ಡಿ ಪದವಿ ಪಡೆದ ಅವರು, ತಮ್ಮ ಅಧ್ಯಯನ, ಅಧ್ಯಾಪನ ಲೇಖನ,ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವರು. ಕಮಲ ಹಂಪನಾ ಅವರು ಸಮಕಾಲಿನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ.
ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ 9 ಬ್ರಹತ್ ಸಂಪುಟಗಳು ಹೊರಬಂದಿವೆ,ಸಂಶೋಧನೆ ಅವರ ಮೊದಲ ಆಯ್ಕೆಯಾಗಿತ್ತು. ಅವರು ಬೆಂಗಳೂರಿನ ಮಹಾರಾಣಿ ಕಾಲೇಜ್ ನಲ್ಲಿ ಪ್ರಿನ್ಸಿಪಾಲ ಆಗಿ ಕರ್ತವ್ಯ ನಿರ್ವಹಸಿ ನಿವೃತ್ತರಾಗಿದ್ದರು.
ಮೂಡುಬಿದ್ರಿಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
ಅವರಿಗೆ ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿದರೆ, ದಾನ ಚಿಂತಮಣಿ ಅತಿಮಬ್ಬೆ ಪ್ರಶಸ್ತಿಯನ್ನು ಅವರು ಪಡೆದಿದ್ದರು.