ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಡೊಂಬಿವಲಿ ಮತ್ತು ಕಲ್ಯಾಣ ಪರಿಸರದ ಸಂಘದ ಸದಸ್ಯರ ಮಕ್ಕಳಿಗಾಗಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಜು. 7 ರಂದು ರವಿವಾರ ಮುಂಜಾನೆ 9.30 ಗಂಟೆಗೆ ಮೊಗವೀರ ವ್ಯವಸ್ಥಾಪಕ ಮಂಡಳಿ, ವೇದ ಬ್ರಹ್ಮ ಬಿಲ್ಡಿಂಗ್, 2ನೇ ಮಾಳಿಗೆ, ಲಿಜ್ಜತ್ ಪಾಪಡ್‌ನ ಮೇಲೆ, ಎಂ ಜಿ ರೋಡ್, ಡೊಂಬಿವಲಿ ಪಶ್ಚಿಮ ಇಲ್ಲಿ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿ ಪತ್ರ (ಫಾರ್ಮ್) ಅನ್ನು ತುಂಬಿಸಿ ಆಧಾರ್‌ಕಾರ್ಡ್ ಮತ್ತು ಮಾರ್ಕ್‌ಕಾರ್ಡನ್ನು (ಕೈರಾಕ್ಸ್) ಅರ್ಜಿ ಪತ್ರದ ಜೊತೆಗೆ ಲಗತ್ತೀಕರಿಸಿ ಸಂಘದ ಕಚೇರಿಗೆ ಜೂ.30 ರ ಒಳಗೆ ತಲುಪಿಸಬೇಕಾಗಿ ವಿನಂತಿಸಲಾಗಿದೆ. ದನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಮೊಗವೀರ ಮಹಾಜನ ಸೇವಾ ಸಂಘದ ಸದಸ್ಯತ್ವವನ್ನು ಪಡೆಯುವ ಸದಸ್ಯರಾಗಿ ಸಹಕರಿಸಬೇಕಾಗಿ ಕೂಡ ವಿನಂತಿಸಲಾಗಿದೆ.
ಸಂಘದ ಕಚೇರಿಯು ಜೂ. 24 ರಿಂದ ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8.30 ಗಂಟೆಯವರೆಗೆ ಹಾಗೂ ಜೂ. 23 ಮತ್ತು ಜೂ.30 ರ ರವಿವಾರ ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರ್ಜಿ ಸ್ವೀಕರಿಸಲು ತೆರೆದಿಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂತೋಷ ಪುತ್ರನ್ – 9930023998, ರಾಜು ಮೊಗವೀರ ತಗ್ಗರ್ಸೆ – 9594299593, ಆನಂದ್ ಹೆಮ್ಮಾಡಿ 7400202963 ಮತ್ತು ನಿಶಾ ಮಂಡನ್ – 9967371724 ಕ್ಕೆ ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.