
ಮುಂಬಯಿ : ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರ ಉಪಸ್ಥಿತಿಯಲ್ಲಿ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಯವರ ನೇತೃತ್ವದಲ್ಲಿ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಜೂನ್ 17, ರಂದು ನಡೆಸಲಾಯಿತು. ಸಮಿತಿಯ ಸಲಹೆಗಾರರಾದ ಶೈಲಜಾ ಶೆಟ್ಟಿಯವರು ಅರಣ್ಯಾಧಿಕಾರಿಯವರಿಂದ ಅನುಮತಿ ಪಡೆದು, ಗಿಡಗಳನ್ನು ನೆಡಲು ಸ್ಥಳ ಮಂಜೂರು ಮಾಡಿದರು. 25 ಕ್ಕೂ ಅಧಿಕ ಸಸಿಗಳನ್ನು ಯಶಸ್ವಿಯಾಗಿ ನೆಡಲಾಯಿತು.




ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಮ್ಮ ತಂಡವು ಭವಿಷ್ಯದ ಪೀಳಿಗೆಗಾಗಿ ಇಂತಹ ಕೊಡುಗೆಯನ್ನು ನೀಡಿದ್ದು, ಇನ್ನೆರಡು ತಿಂಗಳಲ್ಲಿ ನಾವು ನಮ್ಮ ಗಿಡಗಳನ್ನು ಅದರ ಬೆಳವಣಿಗೆಯೊಂದಿಗೆ ನೋಡಲಿದ್ದೇವೆ ಎಂದರು.
ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಗಿಡ ನೆಟ್ಟು ಪರಿಸರವನ್ನು ಉತ್ತಮಗೊಳಿಸುವಲ್ಲಿ ಮಹಿಳಾ ವಿಭಾಗದ ಸರಿತಾ ಶೆಟ್ಟಿ , ಶುಭಾಂಗಿ ಶೆಟ್ಟಿ, ಯೋಗಿನಿ ಶೆಟ್ಟಿ ,ಪ್ರಭಾವತಿ ಶೆಟ್ಟಿ ಯವರೊಂದಿಗೆ ಇತರ ಎಲ್ಲಾ ಸದಸ್ಯರು ಸಹಕರಿಸಿದರು.