ಮುಂಬಯಿ ಜೂ 29. ಮೆಂಡನ್ ಮೂಲಸ್ಥಾನದ ಮುಂಬಯಿ ಶಾಖೆಯ 92ನೇ ವಾರ್ಷಿಕ ಮಹಾಸಭೆ ಜೂ.30 ಆದಿತ್ಯವಾರ ಬೆಳಿಗ್ಗೆ 9:30 ಕ್ಕೆ ಸರಿಯಾಗಿ ಮುಂಬೈ ಶಾಖೆಯ ಅಧ್ಯಕ್ಷರಾದ ಜಯ ಬಿ. ಮೆಂಡನ್‌ರವರ ಅಧ್ಯಕ್ಷತೆ ಯಲ್ಲಿ ಮೊಗವೀರ ಭವನ (ಎಮ್.ವಿ.ಎಮ್. ಸ್ಕೂಲ್), ಎಂ.ವಿ.ಎಂ. ಎಜ್ಯುಕೇಶನಲ್ ಕ್ಯಾಂಪಸ್ ರೋಡ್, ವೀರ ದೇಸಾಯಿ ಮಾರ್ಗ, ಅಂಧೇರಿ (ಪ), ಮುಂಬಯಿ ಇಲ್ಲಿ ಕರೆಯಲಾಗಿದೆ. ,
ಕಾರ್ಯಕ್ರಮಗಳು
ಅಧ್ಯಕ್ಷರಿಂದ ಸ್ವಾಗತ ಭಾಷಣ. ವರದಿ ವರ್ಷದಲ್ಲಿ ಗತಿಸಿದ ಸದಸ್ಯರುಗಳ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಣೆ,
ಗತ ಮಹಾಸಭೆಯ (91) ಟಿಪ್ಪಣಿ ಮಂಜೂರಾತಿ. 2023 -2024 ನೇ ವರ್ಷದ ವಾರ್ಷಿಕ ವರದಿಯ ಮಂಡನೆ. 2023-2024 ನೇ ವರ್ಷದ ಲೆಕ್ಕಪಟ್ಟಿಯ ಮಂಡನೆ ಮತ್ತು ಮಂಜೂರಾತಿ. ಪತ್ರ ವ್ಯವಹಾರ, ಮೆಂಡನ್ ಮೂಲಸ್ಥಾನಕ್ಕೆ ಸುಧೀರ್ಗ ಸೇವೆ ಸಲ್ಲಿಸಿದವರಿಗೆ ಸನ್ಮಾನ ನಡೆಯಲಿದೆ ಎಲ್ಲಾ ಮೆಂಡನ್ ಕುಟುಂಬಸ್ಥರು ಸಮಯಕ್ಕೆ ಸರಿಯಾಗಿ ಬಂದು ಸಭೆಯಲ್ಲಿ ಭಾಗವಹಿಸಬೇಕೆಂದು ಗೌರವ ಕಾರ್ಯದರ್ಶಿ ಜಯರಾಮ ಎನ್. ಮೆಂಡನ್ ವಿನಂತಿಸಿಕೊಂಡಿದ್ದಾರೆ.(98926 70743)