
ಹೊನ್ನಾವರದ ಮರಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ 20 ವರ್ಷಗಳಿಂದ ನೋಟ್ ಬುಕ್ ಗಳನ್ನು ಉಚಿತವಾಗಿ ಮುಂಬಯಿ ಉದ್ಯಮಿ ಮಹಾದೇವ ಪೂಜಾರಿ ಕೊಡೇರಿ ಯವರು ನೀಡುತ್ತಾ ಬಂದಿದ್ದು ಈ ವರ್ಷವು ಕೂಡ ಉಚಿತ ಪುಸ್ತಕ ನೀಡಿರುವುದನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿತರಿಸಿದರು.

ಮಹಾದೇವ ಪೂಜಾರಿ ಯವರು ಪ್ರತಿ ವರ್ಷ ಈ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡುವುದಲ್ಲದೆ ಐದು, ಆರು ಮತ್ತು ಏಳನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿರುತ್ತಾರೆ.
ಶಾಲಾ ಮುಖ್ಯೋಪಾಧ್ಯಾಯರಾದ ನಾಗಪ್ಪ ನಾಯ್ಕ ಅವರ ಅಧ್ಯಕ್ಷತೆ ಹಾಗೂ ಸಹ ಶಿಕ್ಷಕರ ಉಪಸ್ಥಿತಿಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಸರ್ವ ವಿದ್ಯಾರ್ಥಿಗಳಿಗೂ ಪುಸ್ತಕ ವಿತರಿಸುವುದರೊಂದಿಗೆ ಕಳೆದ ಸಾಲಿನ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.