32 C
Mumbai
March 7, 2026
Mumbai News Kannada
ತುಳುನಾಡು

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಹಾ ಸಂಕಲ್ಪದ 19ನೇ ದಿನ – ಕಾಪು ಶ್ರೀ ಹಳೆ ಮಾರಿಗುಡಿಗೆ ಪ್ರದಕ್ಷಿಣೆ.





ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಹತ್ತೋಂಬತ್ತನೇ ದಿನದ ಪ್ರದಕ್ಷಿಣೆಯ ಸಲುವಾಗಿ ದಿನಾಂಕ 02-07-2024 ಮಂಗಳವಾರ ಕಾಪು ಶ್ರೀ ಹಳೆ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿದರು. ಗುರೂಜಿ ಅವರು ಅರ್ಚಕ ಶ್ರೀನಿವಾಸ್ ಭಟ್, ದೇವಸ್ಥಾನದ ವ್ಯವಸ್ಥಾಪಕರಾದ ಚಂದ್ರಕಾಂತ್ ಕಾಮತ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ಶ್ರೀ ರಾಮ್ ನಾಯಕ್ ,ಕಾಪು ಪುರಸಭಾ ಸದಸ್ಯ ಶ್ರೀ ಅನಿಲ್ ಕುಮಾರ್, ಶ್ರೀಮತಿ ಸಾವಿತ್ರಿ ಗಣೇಶ್ ,ಶ್ರೀಮತಿ ಗೀತಾಂಜಲಿ ಎಮ್.ಸುವರ್ಣ , ಶ್ರೀಮತಿ ವೀಣಾ. ಎಸ್‌. ಶೆಟ್ಟಿ , ಶ್ರೀಮತಿ ಸುಪ್ರೀಯಾ ಶೆಟ್ಟಿ , ಶ್ರೀಮತಿ ಭವಾನಿ , ಶ್ರೀ ಸತೀಶ್ ದೇವಾಡಿಗ, ಶ್ರೀ ಪ್ರದೀಪ್, ಶ್ರೀ ಶಶಾಂಕ್ , ಶ್ರೀ ನಿಲೇಶ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿ,ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

.



Related posts

ಯಕ್ಷಧ್ರುವ ಪಟ್ಲ ಸಂಭ್ರಮ ರಾಷ್ಟ್ರೀಯ ಕಲಾ ಸಮ್ಮೇಳನ

Mumbai News Desk

ಕಲ್ಯಾಣಪುರ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ (ರಿ ), ನಯಂಪಳ್ಳಿ – ಸಂತೆಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆ

Mumbai News Desk

ಉಳ್ಳೂರು: ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ 19ನೇ ವರ್ಧಂತಿ ಮಹೋತ್ಸವ ಸಂಪನ್ನ

Mumbai News Desk

ತುಳುವೆರೆ ‘ತುಡರ ಪರ್ಬ’: ಬಲಿ ಚಕ್ರವರ್ತಿ ಬೊಕ್ಕ ಬೆನ್ನಿ ಸಂಸ್ಕೃತಿದ ಸಂಗಮ

Mumbai News Desk

“ಮಾತೆಯರು ಜಾಗೃತಿಗೊಂಡಾಗ ಸಮಾಜ ಪರಿವರ್ತನೆ ಸಾಧ್ಯ” – ಶ್ರೀ ಒಡಿಯೂರು ಶ್ರೀ

Mumbai News Desk

ಕುಲಶೇಖರ ವೀರನಾರಾಯಣ ದೇವಸ್ಥಾನದ ಮೇಲ್ಛಾವಣಿ  ಲೋಕಾರ್ಪಣೆ

Mumbai News Desk