April 1, 2025
ಕ್ರೀಡೆ

ರಾಷ್ಟ್ರೀಯ ಮಟ್ಟದ ಕರಾಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹರ್ಷಿತಾ ಪೂಜಾರಿ   ಇನ್ನಂಜೆ

ಉಡುಪಿ ಜಿಲ್ಲೆ ಕಾಪು ತಾಲೂಕು ಇನ್ನಂಜೆ ಗ್ರಾಮದ  ವಸಂತ ಪೂಜಾರಿ ಹಾಗೂ  ಸುಗುಣ ಇವರ ಸುಪುತ್ರಿ ಕುಮಾರಿ ಹರ್ಷಿತಾರವರು ತಮ್ಮ ಎಳೆಯ ವಯಸ್ಸಿನಲ್ಲಿಯೇ ಕರಾಟೆ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿರುವ ಇವರು ತಾ 30/01/2006ರಲ್ಲಿ ಜನಿಸಿ ತಮ್ಮ ಪ್ರಾರ್ಥಮಿಕ ಪ್ರೌಡಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ಯಸ್ ವಿ ಯಚ್ ವಿಧ್ಯಾ ಸಂಸ್ಥೆ ಇನ್ನಂಜೆಯಲ್ಲಿ ಪೂರೈಸಿರುತ್ತಾರೆ. ಇವರು ತನ್ನ ಶಿಕ್ಷಣದ ಜೊತೆಗೆ ಎಂಟನೇ ವರ್ಷದಲ್ಲಿ ಕರಾಟೆಯಲ್ಲಿ ತೊಡಗಿಸಿಕೊಂಡು ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.ಇವರು 15ನೇ ವಯಸ್ಸಿನಲ್ಲಿ ಬ್ಲಾಕ್ ಬೆಲ್ಟ್ 1ನೇ ಪದವಿಯನ್ನು ಪಡೆದು ಕೊಂಡಿರುತ್ತಾರೆ. ಕನ್ಯಾಕುಮಾರಿ ,ಶಿವಮೊಗ್ಗ, ಗದಗ, ಬೆಳಗಾವಿ,ಉಪ್ಪಿನಂಗಡಿ,ಮೂಡಬಿದ್ರೆ,ಮಂಗಳೂರು,ಉಡುಪಿ,ಕುಂದಾಪುರ,ಪುತ್ತೂರು,ಮದ್ಯಪ್ರದೇಶ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ನಡೆದ ಕರಾಟೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 37 ಚಿನ್ನ, 13 ಬೆಳ್ಳಿ ,7ಕಂಚಿನ ಪದಕಗಳನ್ನು ಪಡೆದಿರುತ್ತಾರೆ. 2019ರಲ್ಲಿ ಕರ್ನಾಟಕ ಸರಕಾರ ಶಿಕ್ಷಣ ಇಲಾಖೆಯವರು ನಡೆಸಿದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟದಲ್ಲಿ ಪ್ರಥಮ,ಜಿಲ್ಲಾ ಮಟ್ಟದಲ್ಲಿ ಪ್ರಥಮ, ಹಾಗೂ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

2022ರಲ್ಲಿ ಕರ್ನಾಟಕ ಸರಕಾರ  ಶಿಕ್ಷಣ ಇಲಾಖೆ ನಡೆಸಿದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟದಲ್ಲಿ ಪ್ರಥಮ ಜಿಲ್ಲಾಮಟ್ಟದಲ್ಲಿ ಪ್ರಥಮದೊಂದಿಗೆ ರಾಜ್ಯಮಟ್ಟದಲ್ಲಿ ಉಡುಪಿ ಜಿಲ್ಲೆ ಯನ್ನು ಪ್ರತಿನಿಧಿಸಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ನಂತರದ ಶಿಕ್ಷಣವನ್ನು NMAM institute of technology Nitte ವಿಧ್ಯಾ ಸಂಸ್ಥೆಯಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗವನ್ನು ಮಾಡುತ್ತಿದ್ದಾರೆ.ಇವರು ನಿಟ್ಟೆಯಲ್ಲಿ ಮುಂದುವರೆಸುತಿದ್ದ ಶಿಕ್ಷಣದ ಜೊತೆಗೆ ಇತ್ತೀಚಿಗೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ South West Indian inter University karate championshipನಲ್ಲಿ ಭಾಗವಹಸಿ ನಿಟ್ಟೆ ಯೂನಿವರ್ಸಿಟಿಯನ್ನು ಪ್ರತಿನಿಧಿಸಿರುತ್ತಾರೆ. ಇವರ ಎಳೆಯ ವಯಸ್ಸಿನ ಸಾಧನೆಯನ್ನು ಗುರುತಿಸಿ ಹಲವಾರು ಸ್ಥಳೀಯ ಸಂಘ ಸಂಸ್ಥೆಯವರು ಇವರನ್ನು ಸನ್ಮಾನಿಸಿ ಗೌರವಿಸುತ್ತಾರೆ. ಪ್ರಸ್ತುತ ಇವರು 2024ನೇ ಸಾಲಿನ ಜೆಸಿಐ ಶಂಕರಪುರ ಜಾಸ್ಮಿನ್ ಇದರ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಇವರು ಸೀತಾರಾಮ್ ಪೂಜಾರಿ ಹಾಗೂ ಶ್ರೇಯಸ್ ಇವರಿಂದ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ.

Related posts

*ಸರ್ವ ಬಂಟರ ಕ್ರೀಡಾ ಕೂಟದ *ವಾರ್ಷಿಕ ಕ್ರಿಕೆಟ್ ಬಂಟ್ಸ್ ಕಪ್,*ಸತತ ಎರಡನೆಯ ಬಾರಿ  ” ಜಲದುರ್ಗಾ “ತಂಡಕ್ಕೆ ಟ್ರೋಫ಼ಿ

Mumbai News Desk

ನೇಪಾಳದಲ್ಲಿ ಜರಗಿದ ಏಷಿಯನ್ ಥಾಯ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಜಾನ್ವಿ ಮನೋಜ್ ಕೋಟ್ಯಾನ್

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ವಾರ್ಷಿಕ ಮಹಾಸಭೆ : ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿ – ಲವ ಕರ್ಕೇರ.

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk

ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾಗೆ ಮಹಾಮೋಸ – ಅನ್ಯಾಯದ ತೀರ್ಪಿಗೆ ಯಶಸ್ವಿ ಜೈಸ್ವಾಲ್ ಬಲಿ.

Mumbai News Desk

ಬಹುಮುಖ ಪ್ರತಿಭೆಯ ಬಾಲ ಪ್ರತಿಭೆ ಬೆಳ್ತಂಗಂಡಿಯ ಶ್ರೇಯಸ್ ಯೋಗೇಶ್ ಪೂಜಾರಿ.

Mumbai News Desk