
ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭಾ ವಿಕಸನಕ್ಕೆ ಅತ್ಯಾಧುನಿಕ ಕಂಪ್ಯೂಟರ್ ಸಹಕಾರಿ – ರವಿ ಉಚ್ಚಿಲ್
ಮುಂಬಯಿ : ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ವಿಕಸನ ಗೊಳಿಸುವಲ್ಲಿ ವಂಚಿತರಾಗಬಾರದು ಎಂಬ ನೆಲೆಯಲ್ಲಿ ಅಂತಹ ಶಾಲೆಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ ಕ್ಲವ್ಡ್ ಆಧಾರಿತ ಕಂಪ್ಯೂಟರ್ ಲ್ಯಾಬ್ ಮತ್ತು ತರಬೇತಿ ಕೇಂದ್ರ, ಶಾಕ್ ಪ್ರೂಪ್ ಹಾಗೂ ವಾಟರ್ ರೆಸಿಸ್ಟೆಂಟ್ ಟೇಬಲ್ ನೊಂದಿಗೆ ಒದಗಿಸಲು ನಮೋ ಮೊಯರ್ ಗ್ಲೋಬಲ್ ಪೌಂಡೇಶನ್, ಹಿಟಾಚಿ ಸಿಸ್ಟಮ್ಸ್ ಇಂಡಿಯಾ ಪ್ರೈ, ಲಿ. ಇವರ ಸಹಾಯದಿಂದ ಈ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು ಇದು ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಪ್ರಯೋಜನಕಾರಿಯಾಗುವುದು ಮಾತ್ರವಲ್ಲದೆ ನಮ್ಮ ಸಂಸ್ಥೆಯ “ಪರಿವರ್ತನೆ” ಯೋಜನೆಯಡಿ ಮುಂದೆ ಇಂತಹ ಗ್ರಾಮೀಣ ಪ್ರದೇಶದ ನೂರು ಶಾಲೆಗಳಿಗೆ ಈ ಸೌಲಭ್ಯವನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳೂ ಆಧುನಿಕ ತಂತ್ರಜ್ನಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಂತಾಗುವುದು ಎಂದು ನಮೋ ಮೊಯರ್ ಗ್ಲೋಬಲ್ ಪೌಂಡೇಶನ್ ಅಧ್ಯಕ್ಷರಾದ ರವಿ ಉಚ್ಚಿಲ್ ನುಡಿದರು.
ಜೂನ್ 22 ರಂದು ನಮೋ ಮೊಯರ್ ಗ್ಲೋಬಲ್ ಪೌಂಡೇಶನ್, ಹಿಟಾಚಿ ಸಿಸ್ಟಮ್ ಇಂಡಿಯಾ ಪ್ರೈ, ಲಿ. ನ ಸಹಾಯದಿಂದ ಗ್ರಾಮೀಣ ಪ್ರದೇಶದವಾದ ಭಿವಂಡಿಯ ಕವಾಡ್ ಇಲ್ಲಿನ ಜಿಲ್ಲಾ ಪರಿಷತ್ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ 12 ಕಂಪ್ಯೂಟರ್ ಗಳನ್ನು ವಿತರಿಸಿ ಮಾತನಾಡಿದ ಅವರು ಕಂಪ್ಯೂಟರ್ ಬಳಕೆಯ ಬಗ್ಗೆ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ತರಬೇತಿ ನೀಡುವುದರೊಂದಿಗೆ ಇದರಿಂದಾಗುವ ಬೆಳವಣಿಗೆ ಬಗ್ಗೆ ಶಾಲೆಗೆ ಬೇಟಿ ನೀಡಿ ವಿವರವನ್ನು ಪಡೆಯಲಾಗುವುದು ಎನ್ನುತ್ತಾ ಪೌಂಡೇಶನ್ ಈ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.



ಹಿಟಾಚಿ ಸಿಸ್ಟಮ್ಸ್ ಇಂಡಿಯಾ ಪ್ರೈ, ಲಿ. ನ ಪ್ರಾಯೋಜಕತ್ವದಲ್ಲಿ ಆಧುನಿಕ ಸೌಲಭ್ಯವನ್ನು ಹೊಂದಿದ 12 ಕಂಪ್ಯೂಟರ್ ಗಳನ್ನು ಎಲಿಮೆಂಟರಿ ಸಿಸ್ಟಮ್ಸ್ ಮತ್ತು ಯಶ್ಮಯ ಇನ್ಫೋಟೆಕ್ ಇವರ ತಾಂತ್ರಿಕ ಬೆಂಬಲದೊಂದಿಗೆ ವಿತರಿಸಲಾಯಿತು.
ಉದ್ಯಮಿ ಮುರಳಿ ಉಚ್ಚಿಲ್ ಮಾತನಾಡುತ್ತಾ ಪೌಂಡೇಶನ್ ನ ಸಮಾಜಪರ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅರ್ಹ ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿರುವ ಈ ಸಂಸ್ಥೆಗೆ ತನ್ನ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾದ್ಯಾಯರು, ಸರಪಂಚರು, ಸ್ಥಳೀಯ ಸಮಾಜ ಸೇವಕರು ಆತ್ಮೀಯವಾಗಿ ಸ್ವಾಗತಿಸಿ ಈ ಸೌಲಭ್ಯವನ್ನು ಒದಗಿಸಲು ಸಹಕರಿಸಿದ ನಮೋ ಮೊಯರ್ ಗ್ಲೋಬಲ್ ಪೌಂಡೇಶನ್ ಮತ್ತು ಪ್ರಾಯೋಜಕರಾದ ಹಿಟಾಚಿ ಸಿಸ್ಟಮ್ ಇಂಡಿಯಾ ಪ್ರೈ, ಲಿ. ಅಮಿತಿ ಪಿತ್ವಾ ಅವರಿಗೆ ಧನ್ಯವಾದವಿತ್ತರು.
ಪೌಂಡೇಶನ್ ನ ಮೋಹನ್ ಶೆಟ್ಟಿ, ಶ್ರೀಮತಿ ಮೀರಾ ಶೆಟ್ಟಿ, ಈಶ್ವರ ಕೆ. ಐಲ್, ನವೀನ್ ಬೆಳ್ಚಪಾಡ, ಸಂದೇಶ ಐಲ್, ಯಶವಂತ ಐಲ್, ಶ್ರೀಮತಿ ಧನ್ಯಶ್ರೀ ಐಲ್, ಚಂದ್ರಕಲಾ ಉಚ್ಚಿಲ್, ಕುಮಾರ ಐಲ್ , ಸತೀಷ್ ಐಲ್, ರವಿ ಬತ್ತೇರಿ, ಶಾಲಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ಡೋಂಗ್ರೆ, ಮತ್ತಿತರರು ಉಪಸ್ಥಿತರಿದ್ದರು. ನಮೋ ಮೊಯರ್ ಗ್ಲೋಬಲ್ ಪೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ರಾದೇಶ್ ಉಚ್ಚಿಲ್ ಹಿಟಾಚಿ ಸಿಸ್ಟಮ್ ಇಂಡಿಯಾ ಪ್ರೈ, ಲಿ. ಹಾಗೂ ಕಾರ್ಯಕ್ರಮಕ್ಕೆ ವಿವಿದ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.