
ಮುಂಬಯಿ, ಜು.15: ವಿದ್ಯಾದಾಯಿನಿ ಸಭಾ(ರಿ) ಫೋರ್ಟ್ ಮುಂಬಯಿ (ವಿದ್ಯಾದಾಯಿನಿ ರಾತ್ರಿ ಶಾಲಾ ಸಂಚಾಲಕರು)ಇದರ ಶತಮಾನೋತ್ಸವವನ್ನು ಯಶಸ್ವಿಯಾಗಿ ಆಚರಿಸಿದ ಸಂತೋಷದಲ್ಲಿ ಜುಲೈ 14 ರಂದು ಮಲಾಡ್ ಪಶ್ಚಿಮದ ಮಡ್ ಐಲ್ಯಾಂಡ್ ಸಮೀಪದ ವಿಲೀನ್ ವಿಲ್ಲಾ ರಿಸೋರ್ಟಿನಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತವರ ಪರಿವಾರದೊಂದಿಗೆ ವಿಹಾರ ಕೂಟವನ್ನು ಸಂಸ್ಥೆಯ ಗೌರವಾಧ್ಯಕ್ಷ ಜೆ.ಎಮ್.ಕೋಟ್ಯಾನ್ ರವರ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು.
ಸಂಸ್ಥೆಯ ಅದ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಗೌ.ಕಾರ್ಯದರ್ಶಿ ಚಿತ್ರಾಪು ಕೆ.ಎಮ್.ಕೋಟ್ಯಾನ್, ಉಪಾಧ್ಯಕ್ಷ ಆರ್.ಕೆ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಹರೀಶ್ ಶಾಂತಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಆರ್.ಕೋಟ್ಯಾನ್ ,ಭಜನಾ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಪೂಜಾರಿ, ಸೇವಾದಳದ ಜಿಒಸಿ ಸುರೇಶ್ ಪೂಜಾರಿ, ರಾತ್ರಿ ಶಾಲಾ ಸಂಚಾಲಕ ಜಿ.ಸಿ.ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದ್ದರು.