
ಒಗ್ಗಟ್ಟಿನಿಂದ ಪೂಜಾ ಮಹೋತ್ಸವವನ್ನು ಯಶಸ್ವಿಗೊಳಿಸುವ: ನ್ಯಾ. ಜಗನ್ನಾಥ್ ಶೆಟ್ಟಿ ಪಣಿಯೂರು
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಜು16. ಮಲಾಡ್ ಪೂರ್ವದ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಮಲಾಡ್ ಇದರ 15ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಗಸ್ಟ್ 18ರಂದು ಮಲಾಡ್ ಪೂರ್ವದ ಸ್ವಾಮಿ ನಾರಾಯಣ ಸಭಾಂಗಣದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯು ಜುಲೈ 14ರಂದು ಉತ್ಕರ್ಷ ವಿದ್ಯಾಮಂದಿರದ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಅವರು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಪ್ರತಿ ವರ್ಷ ಪೂಜಾ ಮಹೋತ್ಸವವು ವಿಜೃಂಭಣೆ ಯಿಂದ ನಡೆಯುತ್ತಿದ್ದು ಈ ವರ್ಷ 15 ವರ್ಷ ಪೂರ್ತಿಗೊಳ್ಳುವ ಸುಸಂದರ್ಭದಲ್ಲಿ ದಿನಪೂರ್ತಿ ಕಾರ್ಯಕ್ರಮ ನಡೆಯಲಿದ್ದು ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು . ಪೂಜಾ ಸಮಿತಿಯ ಎಲ್ಲಾ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ನಡೆಯುತ್ತಿದ್ದು ಇದಕ್ಕೆ ಆಡಳಿತ ಸಮಿತಿ,ಮಹಿಳಾ ವಿಭಾಗ,ಯುವ ವಿಭಾಗದ ಸರ್ವ ಸದಸ್ಯರು ಬಹಳ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷದ ಕಾರ್ಯಕ್ರಮದಲ್ಲೂ ಕೂಡ ಸದಸ್ಯರೆಲ್ಲರೂ ಬಹಳ ಮುತುವರ್ಜಿಯಿಂದ ಜವಾಬ್ದಾರಿಯನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕು. ಕಾರ್ಯಕ್ರಮ ಮಲಾಡಿನ ತುಳು ಕನ್ನಡಿಗರ ಒಗ್ಗಟ್ಟಿನ ಶಕ್ತಿಯ ಪ್ರದರ್ಶನವಾಗಬೇಕು ಎಂದು ನುಡಿದರು.
ಸಮಿತಿಯ ಉಪಾಧ್ಯಕ್ಷ, ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯದಕ್ಷರಾದ ಸಂತೋಷ್ ಕೆ ಪೂಜಾರಿ ಮಾತನಾಡಿ ಮಾಲಾಡ್ ಪೂರ್ವದ ತುಳು ಕನ್ನಡಿಗರ ಎಲ್ಲರನ್ನು ಒಗ್ಗಟ್ಟು ಮಾಡಿದ ಪೂಜಾ ಸಮಿತಿ ಪ್ರತಿವರ್ಷ ವಿಭಿನ್ನ ಸೇವಾ ಕಾರ್ಯಗಳ ಮೂಲಕ ಈ ಪರಿಸರದ ಎಲ್ಲರನ್ನೂ ಒಗ್ಗಟ್ಟು ಮಾಡುತ್ತದೆ ಈ ವರ್ಷ ನಡೆಯುವ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸದಸ್ಯರೆಲ್ಲರೂ ಶ್ರಮವಹಿಸಬೇಕು ಎಂದು ನುಡಿದರು.
ಕೋಶಾಧಿಕಾರಿ ಜಗನ್ನಾಥ್ ಮೆಂಡನ್ ಸಾಲಿಗ್ರಾಮ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಮುಂಬೈ ನಗರದಲ್ಲಿ ವರಮಹಾಲಕ್ಷ್ಮೀ ಪೂಜೆ ಬಹಳ ಶಿಸ್ತು ಬದ್ಧವಾಗಿ ನಡೆಸುತ್ತಾ ಬಂದಿದ್ದೇವೆ ಅದು ಬಹಳಷ್ಟು ಸಂಸ್ಥೆಗಳಿಗೆ ಆದರ್ಶವಾಗಿದೆ ಈ ವರ್ಷದ ಸಂಭ್ರಮದ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸದಸ್ಯರೆಲ್ಲರೂ ಜವಾಬ್ದಾರಿ ವಹಿಸಬೇಕು ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ರತ್ನ ಡಿ ಕುಲಾಲ್ ತನ್ನ ಅನಿಸಿಕೆಯನ್ನು ತಿಳಿಸುತ್ತಾ ಪೂಜಾ ಸಮಿತಿಯ ದಶಮಾನೋತ್ಸವ ಮತ್ತು ಮಕ್ಕಳು ಉತ್ಸವ ಬಹಳಷ್ಟು ಯಶಸ್ವಿಯಾಗಿದೆ. ಈ ವರ್ಷದ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಮಹಿಳಾ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಆಚಾರ್ಯ ಮಾತನಾಡುತ್ತಾ ಪೂಜಾ ಸಮಿತಿಯ ಮಹಿಳಾ ವಿಭಾಗದ ವಿಶೇಷ ಕಾರ್ಯಕ್ರಮ ಜುಲೈ 28ರಂದು ಆಷಾಡ ಹಬ್ಬ (ಆಟಿದ ಒಂಜಿ ದಿನ) ನಡೆಯಲಿದೆ ಈ ಕಾರ್ಯಕ್ರಮದಲ್ಲೂ ಕೂಡ ಮಹಿಳೆಯರು ಮತ್ತು ಮಲಾಡಿನ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಯುವ ವಿಭಾಗದ ಕಾರ್ಯದರ್ಶಿ ಸುದೀಪ್ ಡಿ ಪೂಜಾರಿ ಮಾತನಾಡಿ ಯುವ ವಿಭಾಗದ ಎಲ್ಲಾ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಮತ್ತಿತರ ಚಟುವಟಿಕೆಗಳಲ್ಲಿ ಪೂಜಾ ಸಮಿತಿಯ ಸೇವಾ ಕಾರ್ಯಗಳನ್ನು ಮುತುವರ್ಜಿಯಿಂದ ನಿರ್ವಹಿಸುತ್ತಿದ್ದಾರೆ. 15ನೇ ವರ್ಷದ ಕಾರ್ಯಕ್ರಮದಲ್ಲಿ ಬಹಳಷ್ಟು ಯುವ ಸಮುದಾಯ ಯಕ್ಷಗಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ತಮ್ಮ ನೃತ್ಯ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಹಿಳಾ ವಿಭಾಗದ ಕೋಶಾಧಿಕಾರಿ ಶೀಲಾ ಎಂ ಪೂಜಾರಿ, ಯುವ ವಿಭಾಗದ ಕೋಶಾಧಿಕಾರಿ ದಿಶಾ ಕರ್ಕೇರ, ಸಂಚಾಲಕ ಡಾ. ಶಶಿನ್ ಕೆ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್ ನಿರೂಪಿಸಿದರು.ಸಮಿತಿಯ ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ ಧನ್ಯವಾದ ನೀಡಿದರು.
ಆಗಸ್ಟ್ 18ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಲಾಡಿನ ಸ್ವಾಮಿ ನಾರಾಯಣ ಸಭಾಂಗಣದಲ್ಲಿ ಕುಣಿತ ಭಜನೆ, ನೃತ್ಯ, ಸಮಿತಿಯ ಸದಸ್ಯ ನಾಗೇಶ್ ಪೊಳಲಿಯವರ ನಿರ್ದೇಶನದ” ಶ್ರೀ ದೇವಿ ಮಹಾತ್ಮೆ” ಯಕ್ಷಗಾನ, ಸಂಜೆ ನೃತ್ಯ ಕಾರ್ಯಕ್ರಮ ಹಾಗೂ ನಗರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಹಾಗೂ ಶ್ರೀ ಕಟೀಲು ಕ್ಷೇತ್ರದ ಅನುವಂಶ ಅರ್ಚಕರಾದ ಹರಿ ನಾರಾಯಣ ಆಶ್ರಣ್ಣರು ಆಶೀರ್ವಚನ ನೀಡಲಿದ್ದಾರೆ.
ಸಂಜೆ 6.30 ಕ್ಕೆ ರಮೇಶ್ ವಾಗ್ಲೆ ದೊಂಬಿವಳಿ ಅವರ ಪುರೋಹಿತದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ.