
~~~~~~~~~~~~~~~~~
ಬೊಯಿಸರ್ : ಮಹಾರಾಷ್ಟ್ರ ದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯ ಅಸಂಖ್ಯ ತುಳುಕನ್ನಡಿಗರ ಸಾಂಸ್ಕೃತಿಕ ಹಾಗೂ ಶೃದ್ಧಾ ಕೇಂದ್ರವೆನಿಸಿದ ಬೊಯಿಸರ್ ಪಶ್ಚಿಮದಲ್ಲಿನ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಇದೇ ಬರುವ ತಾ.21.07.2024 ನೇ ರವಿವಾರ ಆಷಾಢ ಪೂರ್ಣಿಮೆಯಂದು ಗುರುಪೂರ್ಣಿಮೆ ಯನ್ನು ಆಚರಿಸಲಾಗುವುದು.
ಪ್ರಾತಃ ಕಾಲ 6 ಗಂಟೆಗೆ ಕಳಶಪೂಜೆ , 6.30 ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಸಾರ್ವಜನಿಕ ಸೀಯಾಳಾಭಿಷೇಕ ಹಾಗೂ ಬೆಳಿಗ್ಗೆ 8 ಕ್ಕೆ ಪ್ರಾತಃ ಆರತಿ ಜರಗಲಿರುವುದು.
9.30 ರಿಂದ ಭಕ್ತಿಗೀತೆ ಹಾಗೂ ಭಜನಾ ಕಾರ್ಯಕ್ರಮವಿರುವುದು. ಮದ್ಯಾಹ್ನ 12 ಗಂಟೆಗೆ ವಿಶೇಷ ಗುರು ಪೂಜೆ ಮತ್ತು 12.30 ಕ್ಕೆ ಮಂಗಳ ಆರತಿಯ ಬಳಿಕ ಪ್ರಸಾದ ವಿತರಣೆ ಜರಗಲಿದೆ.
ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಗುರುಪೂರ್ಣಿಮಾ ಉತ್ಸವಕ್ಕೆ ಭಕ್ತಾಭಿಮಾನಿಗಳೆಲ್ಲರೂ ಕುಟುಂಬ ಸಮೇತ ಆಗಮಿಸಿ ಸದ್ಗುರುವಿನ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ , ಪ್ರಸಾದವನ್ನು ಸ್ವೀಕರಿಸಿ ಸದ್ಗುರು ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ವಿಶ್ವಸ್ತ ಮಂಡಳಿ , ಶ್ರೀ ನಿತ್ಯಾನಂದ ಸ್ವಾಮಿ ಭಕ್ತವೃಂದ ಹಾಗೂ ಸದ್ಗುರು ನಿತ್ಯಾನಂದ ಭಜನಾ ಮಂಡಳಿಯ ಸರ್ವ ಸದಸ್ಯರು ಪ್ರಕಟಣೆಯ ಮೂಲಕ ವಿನಂತಿಸಿರುತ್ತಾರೆ.
ಸುದ್ದಿ : ಪಿ.ಆರ್.ರವಿಶಂಕರ್
8483980035