ಮುಂಬಯಿ ಜು19. ಗೊರೆಗಾಂವ್ ಪೂರ್ವ ಸಹಕಾರ್ ವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ದಲ್ಲಿ ಗುರು ಪೂರ್ಣಿಮಾ ಮಹಾಪೂಜೆ ನಿಮಿತ್ತ ಜುಲೈ 20 ಶನಿವಾರ ರಂದು ಬೆಳಿಗ್ಗೆ ಏಕಹಾ ಭಜನೆ ಕಾರ್ಯಕ್ರಮ ಚಾಲನೆ, ಮರುದಿನ ಜುಲೈ 21ರ ರವಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ .
ಜು 20 ಶನಿವಾರ.ಸಂಜೆ 7.20 “ಏಕಾಃ ಭಜನೆ” ಗುರು ನಾಮಸ್ಮರಣೆಯ ಉದ್ಘಾಟನೆ “ಓಂ ನಮೋ ಗುರು ನಿತ್ಯಾನಂದಾಯ” ಜು 21ಭಾನುವಾರ ಬೆಳಗ್ಗೆ 7.21″ಏಕ ಭಜನ ಮಂಗಲೋತ್ಸವ” ಬೆಳಗ್ಗೆ 8.00ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ ಮತ್ತು ತೀರ್ಥ ಪ್ರಸಾದ ಬೆಳಗ್ಗೆ 9.30 ರಿಂದ ರಾತ್ರಿ 11.30 ದೇವಾನಂದ್ ಸುವರ್ಣ ತಂಡದ ಮತ್ತು ಶ್ರೀ ಸದ್ಗುರು ಭಜನಾ ಸಮಿತಿಯಿಂದ “ಭಜನ್ ಕೀರ್ತನ”ಬಳಿಕ ಮಹಾಪೂಜೆ ಮಧ್ಯಾಹ್ನ ಮಂಗಳಾರತಿ ನಡೆದ ಬಳಿಕ ರತ್ನಮ್ಮ ದೇವಪ್ಪ ಗೌಡ ತೀರ್ಥಹಳ್ಳಿ ಯವರು ಮಕ್ಕಳಿಂದ ಮತ್ತು ದಿ. ವೀರಮ್ಮ ಮೂಲ್ಯರ ನೆನಪಿಗಾಗಿ ಅವರ ಮಕ್ಕಳಿಂದ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 6.00 ರಿಂದ ರಾತ್ರಿ 9.00 ಯುವ ವಿಭಾಗದ ಸದಸ್ಯರಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಗುರುಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದ್ಗುರು ನಿತ್ಯಾನಂದ ಗುರುಗಳ ಪ್ರಸಾದವನ್ನು ಸ್ವೀಕರಿಸಬೇಕಾಗಿ ನಿತ್ಯಾನಂದ ಆಶ್ರಮದ ಗೌರವ ಅಧ್ಯಕ್ಷರಾದ ಮೋಹನ್ ಪೂಜಾರಿ, ಅಧ್ಯಕ್ಷರಾದ ರಾಘು ಮೂಲ್ಯ ,ಮುಖ್ಯ ಸಂಚಾಲಕ ಡಾ.ಶೈಲೇಶ್ ಜಿ, ಉಪಾಧ್ಯಕ್ಷರು ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲಿಯಾನ್ , ಕೋಶಧಿಕಾರಿ ಮುಂಡಪ್ಪ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್.ಕೋಟ್ಯಾನ್, ಜೊತೆ ಕೋಶಧಿಕಾರಿ ಬಬಿತಾ ಜೆ. ಕೋಟ್ಯಾನ್ ,
ಮಹಿಳಾ ವಿಭಾಗದ ಶಾಂಭವಿ ಕೆ. ಪೂಜಾರಿ, ಪೂರ್ಣಿಮಾ ಶೆಟ್ಟಿ, ಸುಮತಿ ಪೂಜಾರಿ, ರೇವತಿ ಸಾಲಿಯಾನ್ ಮತ್ತು ಪೂಜಾ ಸಮಿತಿಯ ವಿಶ್ವನಾಥ್ ಎಸ್.ಪೂಜಾರಿ, ರವಿ ಶೆಟ್ಟಿ, ಪ್ರೇಮಲತಾ ಆರ್.ಮೂಲ್ಯ, ಸುಧಾಕರ ಅಮೀನ್ ಮತ್ತು ಇತರರು. ಯುವ ಘಟಕ ಸದಸ್ಯರು , ಮತ್ತು ವ್ಯವಸ್ಥಾಪಕ ಸಮಿತಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.