23.5 C
Karnataka
April 4, 2025
ಮುಂಬಯಿ

ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜ್ ಐರೋಲಿ: ವಿದ್ಯಾರ್ಥಿಗಳಿಗೆ  ಲೀಡರ್ಶಿಪ್ ಬಗ್ಗೆ ಉಪನ್ಯಾಸ. 



   ಮುಂಬಯಿ ಜುಂ 21.    ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜ್ ಐರೋಲಿ ಯಲ್ಲಿ ವಿದ್ಯಾರ್ಥಿಗಳಿಗೆ Pathway to Leadership Excellence ಎಂಬ ವಿಷಯದ ಮೇಲೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.  ಖ್ಯಾತ ಉಪನ್ಯಾಸಕ ಡಾ. ಸುನಿಲ್ ರಾಜ್ ವಿದ್ಯಾರ್ಥಿಗಳಿಗೆ ಲೀಡರ್ಶಿಪ್ ಗೆ ಬೇಕಾದ ಗುಣಗಳ ಬಗ್ಗೆ ತಿಳಿ ಹೇಳಿದರು. ಹಲವಾರು ಮ್ಯಾನೇಜ್ಮೆಂಟ್ ಗುರುಗಳನ್ನು ಹೆಸರಿಸುತ್ತಾ ಅವರು ಮ್ಯಾನೇಜ್ಮೆಂಟ್ ಬಗ್ಗೆ ಕೊಟ್ಟ  ವ್ಯಾಖ್ಯಾನವನ್ನು ವಿವರಿಸಿದರು.

     ಒಳ್ಳೆಯ ಹಾಗು ಸಫಲ ನಾಯಕನಾಗುವ ಸಲುವಾಗಿ ಅಪಾರ ಪರಿಶ್ರಮ ಪಡಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಿದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸಾಧನೆಯನ್ನು ಮೇಲಕುಹಾಕುತ್ತಾ ವಿದ್ಯಾರ್ಥಿಗಳು ಪರಿಶ್ರಮದಿಂದ ಯಶಸ್ಸನ್ನು ಪಡೆಯಬೇಕೆಂದು ತಿಳಿಸಿದರು. ನಾವು ತೆಗೆದುಕೊಳ್ಳುವ ತೀರ್ಮಾನ, ಮುಂದಾಲೋಚನೆ, ಪರೋಪಕಾರ, ಸತತ ಪರಿಶ್ರಮ ದಿಂದ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಸುನಿಲ್ ರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮ  ಸರಸ್ವತಿ ಪೂಜೆ ಹಾಗು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. IQAC ಸಂಚಾಲಕಿ  ಸಿಂಧು ರಮಣಿ ಅತಿಥಿಗಳನ್ನು,ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು, ಪ್ರಾಧ್ಯಾಪಕ ವೃಂದ ಹಾಗು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.  ಮುಖ್ಯ ಅತಿಥಿ ಸುನಿಲ್ ರಾಜ್ ರನ್ನು ಜ್ಞಾನ ವಿಕಾಸ ಮಂಡಲದ ಕಾರ್ಯಾಧ್ಯಕ್ಷ  ಕೆ. ಎಚ್. ದೇಶಪಾಂಡೆ ಅವರು ಹೂಗುಚ್, ಶಾಲು ಹಾಗು ನೆನಪಿನ ಕಾಣಿಕೆ ಸಲ್ಲಿಸಿ ಸನ್ಮಾನಿಸಿದರು. ಮುಂಬೈ ಠಾಣೆ ಸ್ಟೂಡೆಂಟ್ಸ್ ವೆಂಚುವರ್ ಸಂಸ್ಥೆಯ ಪ್ರಮುಖ  ಪ್ರಿನ್ಸ್ ಜೋಶೆಫ, ಡಾ.ವಂದನಾ,  ಅನಿತಾ ಪ್ರಿನ್ಸ್ ಅವರನ್ನು ಹೂಗುಚ್ಛ ಸಲ್ಲಿಸಿ ಸ್ವಾಗತಿಸಲಾಯಿತು. ಪ್ರಾಚಾರ್ಯ ಡಾ. ಬಿ ಆರ್.ದೇಶಪಾಂಡೆ ಇವರು  ಕಾರ್ಯಾಧ್ಯಕ್ಷ  ಕೆ. ಎಚ್.ದೇಶಪಾಂಡೆ ಹಾಗು ಜೊತೆ ಪ್ರದಾನ ಕಾರ್ಯದರ್ಶಿ  ಜಾನ್ ಥಾಮಸ್ ಅವರನ್ನು ಹೂಗುಚ್ಛ ಸಲ್ಲಿಸಿ ಸ್ವಾಗತಿಸಿದರು.  ಅಧ್ಯಕ್ಷತೆ ವಹಿಸಿ ಮಾತನಾಡಿದ  ಕೆ ಎಚ್ಚ.ದೇಶಪಾಂಡೆ ಅವರು  ವಿದ್ಯಾರ್ಥಿಗಳು ನಾಯಕನಾಗಲು ಬೇಕಾದ ವ್ಯಕ್ತಿತ್ವವನ್ನು ಪಡೆಯಬೇಕೆಂದು ತಿಳಿಸಿದರು. ಒಳ್ಳೆಯ ಶಿಕ್ಷಣ ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರಬೇಕೆಂದು ತಿಳಿಸಿದರು.   ಜ್ಞಾನ ವಿಕಾಸ ಮಂಡಲದ ಆಡಳಿತ ಮಂಡಳಿಯ ಸದಸ್ಯ ಶ್ರೀ ಸತೀಶ ಕಿಲಾರಿ ಅವರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಸಾಗರ  ಶಿಂದೆ ವಂದನಾರ್ಪಣೆ ಸಲ್ಲಿಸಿದರು.

Related posts

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ಸಂಭ್ರಮೊಲ್ಲಸದ ರಜತ ಮಹೋತ್ಸವ ಸಮಾರಂಭ

Mumbai News Desk

ಕಾಪು ಮೊಗವೀರ ಮಹಿಳಾ ಮಂಡಳಿ : ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಕಚೇರಿ ಯಿಂದ ಪುಣ್ಯ ಕ್ಷೇತ್ರ ದರ್ಶನ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ಆಷಾಢೋತ್ಸವ

Mumbai News Desk

ಫೆ 5 ಮತ್ತು 6ರಂದು ಮುಂಬೈಯ ಕೆಲ ಭಾಗಗಳಲ್ಲಿ 30 ಗಂಟೆಗಳ ಕಾಲ ನೀರಿನ ಪೂರೈಕೆ ಸ್ಥಗಿತ

Mumbai News Desk

ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk