24.7 C
Karnataka
April 3, 2025
ಮುಂಬಯಿ

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಆಶಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,



ಯಕ್ಷಗಾನದಿಂದ ಸನಾತನ ಧರ್ಮ ಜಾಗೃತಿ: ಸಾಣೂರು ಸಂತಿಂಜ ಜನಾರ್ಧನ್ ಭಟ್,

ಚಿತ್ರ ವರದಿ ದಿನೇಶ್ ಕುಲಾಲ್.

ಭಾಯಂದರ್ ಜು22ಭಾಯಂದರ್ ಪೂರ್ವ ದ ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜನಾನುರಾಗಿರುವ ಶೇಖರ್ ಎಸ್. ಶೆಟ್ಟಿ (ಧರ್ಮಸೇವಕ)ಇವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ ಜುಲೈ 21 ರಂದು ರವಿವಾರ  ಭಯಂದರ್ ಪೂರ್ವದ ಭಾರತ ರತ್ನ ಸಚಿನ್ ತೆಂಡೂಲ್ಕರ್ ಮೈದಾನದ ಬಳಿ ಗುರುದ್ವಾರದ ಹತ್ತಿರ ಇರುವ ಮುನಿಸಿಪಾಲ್ ಹಾಲ್ ದಲ್ಲಿ   ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ(ರಿ) ನಡೂರು, ಮಂದರ್ತಿ ಕಲಾವಿದರಿಂದ ಧರ್ಮ ಸೇವಕ ಶೇಖರ್ ಶೆಟ್ಟಿ ,  ಸುಧಾಕರ್ ಶೆಟ್ಟಿ ಬಿಯಾಳಿ ಮಂದರ್ತಿ ಮತ್ತು ವಿಶ್ವನಾಥ್ ಶೆಟ್ಟಿ. ಕರ್ನಿರೆ ಪಚ್ಚಂಗೇರಿ ಇವರ ಪ್ರಾಯೋಜಕತ್ವದಲ್ಲಿ “ಮಹಾಶಕ್ತಿ ವೀರಭದ್ರ”ಎಂಬ ಪೌರಾಣಿಕ ಪುಣ್ಯ ಕಥಾಭಾಗವನ್ನು ಯಕ್ಷಗಾನ ಬಯಲಾಟ ನಡೆಯಿತು. 

      ಈ ಸಂದರ್ಭದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೂರು ಜನ ವಿವಿಧ ಕ್ಷೇತ್ರದಲ್ಲಿ ಧಾರ್ಮಿಕ ಸೇವೆ ಮಾಡಿದ ಗುರುಗಳಾದ ಸಾಣೂರು ಸಂತಿಂಜ ಜನಾರ್ಧನ್ ಭಟ್,( ಪ್ರಧಾನ ಅರ್ಚಕರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾಶಿ ಗಾವ್,) ಶ್ರೀ ಅಯ್ಯಪ್ಪ ಭಕ್ತವೃಂದ ಅಂದೇರಿ ಸಂಸ್ಥಾಪಕ  ಇನಂಜೆ ಚಂದ್ರಹಾಸ ಗುರುಸ್ವಾಮಿ , ಯಕ್ಷಗಾನದ ಕಲಾವಿದ ನಟರಾಜ್ ಜಪ್ತಿ ಹೇಗೆ  ಗುರುವಂದನೆ ನಡೆಯಿತು,

    ಗೌರವವನ್ನು ಸ್ವೀಕರಿಸಿದ ಸಾಣೂರು ಸಂತಿಂಜ ಜನಾರ್ಧನ್ ಭಟ್ ಮಾತನಾಡುತ್ತಾ ಭಯಂದರ್ ಪರಿಸರದಲ್ಲಿ ಮೂಕಾಂಬಿಕಾ ಶಾಂತದುರ್ಗ ದೇವಸ್ಥಾನವನ್ನು ನಿರ್ಮಾಣ ಮಾಡಿ ,ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ದೊಂದಿಗೆ ಕಲಾ ಸೇವೆಯನ್ನು ಕೂಡ ಮಾಡುತ್ತಿರುವ ಧರ್ಮ ಸೇವಕ ಶೇಖರ್ ಶೆಟ್ಟಿ ಯವರು ಮತ್ತು ಸುಧಾಕರ್ ಶೆಟ್ಟಿ ಮಂದರ್ತಿಯವರು ಯಕ್ಷಗಾನವನ್ನು ಆಯೋಜಿಸಿ, ಧರ್ಮ ಸಂಸ್ಕೃತಿಯ ಜಾಗೃತಿ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಯಕ್ಷಗಾನ ತಂಡ ಕಳೆದ ವರ್ಷ ಕೂಡ ಉತ್ತಮ ಪ್ರಸಂಗವನ್ನು ನೀಡಿ  ಕಲಾವಿದರ ಪ್ರಶಂಸೆಗೆ ಪಾತ್ರವಾಗಿದೆ ಈ ವರ್ಷ ಕೂಡ ವೀರಭದ್ರನ ಕಥೆಯನ್ನು ಆಧರಿಸಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ, ಸನಾತನ ಧರ್ಮ ಉಳಿವಿಗೆ ಯಕ್ಷಗಾನ ಪೂರಕವಾಗಿದೆ ಯಕ್ಷಗಾನವನ್ನು ಉಳಿಸುವಲ್ಲಿ ನಾವೆಲ್ಲರೂ ಸಹಕಾರಿಯಾಗುವ ಎಂದು ನುಡಿದರು, 

ಗುರುವಂದನೆಯನ್ನು ಸ್ವೀಕರಿಸಿದ ಇನ್ನಂಜೆ ಚಂದ್ರ ಸ್ವಾಮಿ ಮಾತನಾಡುತ್ತಾ, ಮಳೆಯ ಆರ್ಭಟದ ನಡುವೆ ಈ ಪರಿಸರದ ಕಲಾ ಆರಾಧಕರು ಬಾರಿ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ ದೇವಿಯಸೇವೆ ಎನ್ನುವ ಭಾವನೆಯಿಂದ ಸಭಾಂಗಣದಲ್ಲಿ ಬಹಳಷ್ಟು ದೇವಿ ಯದಿರುದಿರು ಸೇರಿಕೊಂಡಿದ್ದಾರೆ, ಸರಕಾರ ಮಾಡುವ ಕೆಲಸವನ್ನು ನಮ್ಮೂರಿನ ತುಳು ಕನ್ನಡಿಗರು ಮಾಡುತ್ತಿದ್ದಾರೆ ಕೊರೋನದ ಸಂದರ್ಭದಲ್ಲಿ ಜೀವದ ಅಂಗು ತೆರೆದು ಬಹಳಷ್ಟು ಜನ ಸಮಾಜ ಸೇವೆ ಮಾಡಿದ್ದಾರೆ, ವೇದಿಕೆಯಲ್ಲಿರುವ ಗಣ್ಯರು ಇಲ್ಲಿ ಸೇರಿಕೊಂಡಿರುವ ಎಲ್ಲರೂ ದೇವರು ಮೆಚ್ಚುವಂಥ ಸಮಾಜ ಸೇವೆಯನ್ನು ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ. ದೇವರನ್ನು ಕ್ಷಣಮಾತ್ರ ಪ್ರಾರ್ಥಿಸಿದರೆ ಯಾವುದೇ ಸಂದರ್ಭದಲ್ಲಿ ಕೂಡ ನಮ್ಮನ್ನು ರಕ್ಷಿಸುತ್ತಾನೆ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಧಾರ್ಮಿಕ ಸಾಮಾಜಿಕ ಸೇವೆಯನ್ನು ಮಾಡಿದಾಗ ನಮ್ಮೊಳಗೆ ಭಗವಂತ ಸೇರಿಕೊಳ್ಳುತ್ತಾನೆ ಎಂದು ನುಡಿದರು.

  ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ  ಮೀರಾ ಭಯಂಂದರ ನ, ಬಿ ಜೆ ಪಿ ಯುವ ಬ್ರಿಗೇಡ್ ನ ಸಚ್ಚಿದಾನಂದ ಶೆಟ್ಟಿ, ಮನ್ನಲಾಯಿ ಗುತ್ತು,  ಮಾತನಾಡುತ್ತಾ ನಮ್ಮಕರಾವಳಿಯ ಸಾಂಸ್ಕೃತಿಕ ರಾಯಭಾರಿ ಎಂದರೆ ಅದು ಮಹಾರಾಷ್ಟ್ರ ಅದರಲ್ಲೂ ಮೀರಾಬಂದರ್ ಪರಿಸರದಲ್ಲಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹಾಗೂ ಕಲಾ ಸೇವೆ ಅತ್ಯಂತ ಹೆಚ್ಚು ನಡೆಯುವ ಪ್ರದೇಶವಾಗಿದೆ, ಒಂದು ಕಾರ್ಯಕ್ರಮ ನಡೆಯಬೇಕೆಂದರೆ ಅದರಲ್ಲಿ ಎಷ್ಟು ಕಷ್ಟವಿದೆ ಎನ್ನುವುದು ಕಾರ್ಯಕ್ರಮದ ಆಯೋಜಕರಿಗೆ ಮಾತ್ರ ಗೊತ್ತು, ಆದರೆ ಆಯೋಜಕರು ಕಲೆ ಕಲಾವಿದರ ಮೇಲೆ ಪ್ರೀತಿ ಇಟ್ಟು ಎಲ್ಲವನ್ನು ಸಂತೋಷದಿಂದ ನಡೆಸುತ್ತಾರೆ, ಗುರುಪೂರ್ಣಿಮೆಯ ಈ ಶುಭ ಸಂದರ್ಭದಲ್ಲಿ ಗುರುಗಳೆಲ್ಲರ ಆಶೀರ್ವಾದ ನಮಗಲ್ಲ ಇರಲಿ ಎಂದು ನುಡಿದರು.

ಮತ್ತೋರ್ವ ಅತಿಥಿ ಬಂಟರ ಸಂಘ   ಮೀರಾ ಭಾಯಂದ‌ರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನರು ರವೀಂದ್ರ ಶೆಟ್ಟಿ ಕೊಟ್ಟಾಪಾಡಿ ಗುತ್ತು, ಮಾತನಾಡುತ್ತಾ ಯಕ್ಷಗಾನ ನಾಟಕ ಮೀರಾಬಂದರ್ ಪರಿಸರದಲ್ಲಿ ನಡೆದಷ್ಟು ಮುಂಬೈಯ ಯಾವುದೇ ಉಪನಗರದಲ್ಲಿ ನಡೆಯುವುದು ಕಡಿಮೆ, ಯಕ್ಷಗಾನಕ್ಕೆ ಕಲಾಭಿಮಾನಿಗಳು ಪ್ರೋತ್ಸಾಹ  ನೀಡಿದವರೆಂದರೆ ಅದು ಈ ಪರಿಸರದವರು, ಇಂದು ಕಾರ್ಯಕ್ರಮ ಆಯೋಜಿಸಿಕೊಂಡವರಲ್ಲಿ ಸುಧಾಕರ್ ಶೆಟ್ಟಿ ಮಂದಾರ್ತಿಯವರು ಓರ್ವ ಪ್ರಾಮಾಣಿಕ ಸಮಾಜ ಸೇವಕ ,ಕೊರೋನಾ ಸಂದರ್ಭದಲ್ಲಿ ಕೂಡ ಬಹಳಷ್ಟು ಜನರಿಗೆ ಸಹಕಾರವನ್ನು ನೀಡುವಲ್ಲಿ ಶ್ರಮಿಸಿದ್ದಾರೆ. ಯಕ್ಷಗಾನ ಕಾರ್ಯಕ್ರಮಕ್ಕೆ ಕೇಳದೆ ದಾನ ನೀಡುವ ಪ್ರವರ್ತಿಯನ್ನು ಬೆಳೆಸಿಕೊಳ್ಳಿ,, ಇಂದು ನಡೆದ ಯಕ್ಷಗಾನದ ಕಾರ್ಯಕ್ರಮದೊಟ್ಟಿಗೆ ಬಡ ಕುಟುಂಬವೊಂದಕ್ಕೆ ಆರ್ಥಿಕ ನೆರವನ್ನು ನೀಡಿದ್ದಾರೆ ಇದು ಬಹಳ ಅಗತ್ಯ ಆದ ಕಾರ್ಯವಾಗಿದೆ. ಯಕ್ಷಗಾನ ನಾಟಕ ಮಾಡಿದರೆ ಸಾಲದು , ಕಷ್ಟದವರಿಗೆ ಸಹಕಾರ ನೀಡುವ ಕಾರ್ಯವನ್ನು ಮಾಡುವ ಎಂದು ನುಡಿದರು.

 ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ. ಎನ್‌ಸಿಪಿ ಯ ಮುಖಂಡ ಡಾ. ಹರೀಶ್ ಶೆಟ್ಟಿ ಮಾತನಾಡುತ್ತಾ ಯಕ್ಷಗಾನದಲ್ಲಿ ಇಂದಿನ ದೇವ ದೇವತೆಯರ ಕರ್ಣಿಕವನ್ನು ತೋರಿಸುತ್ತಾರೆ ಅದರಿಂದ ಕಲಾವಿದರಿಗೂ ಮತ್ತು ಪ್ರೇಕ್ಷಕರಿಗೂ ಪುಣ್ಯದ ಫಲ ಲಭಿಸುತ್ತದೆ. ಹಿಂದೂ ಧರ್ಮವನ್ನು ಜಾಗೃತಿಸುವ ಕಾರ್ಯ ಕೂಡ ಯಕ್ಷಗಾನದಲ್ಲಿ ನಡೆಯುತ್ತದೆ. ಇಂದು ಬಾಂಧವರೆಲ್ಲರೂ ಧರ್ಮದ ರಕ್ಷಣೆಗಾಗಿ ಪ್ರಾರ್ಥನೆ ಮಾಡುತ್ತಾರೆ ಅನ್ಯ ಧರ್ಮದವರು ಹಿಂದುಗಳನ್ನು ಹೇಗೆ ನಾಶ ಮಾಡಬೇಕು ಎನ್ನುವುದನ್ನು ಪ್ರಾರ್ಥಿಸುತ್ತಾರೆ ಆದ್ದರಿಂದ ನಮ್ಮ ಪ್ರಾರ್ಥನೆ ಸರ್ವರ ಶ್ರೇಯ ಅಭಿವೃದ್ಧಿಗಾಗಿ ನಡೆಯಬೇಕು ಎಂದು ನುಡಿದರು.

    ವೇದಿಕೆಯಲ್ಲಿ ಧರ್ಮ ಸೇವಕ ಶೇಖರ್ ಶೆಟ್ಟಿ ,  ಸುಧಾಕರ್ ಶೆಟ್ಟಿ ಬಿಯಾಳಿ ಮಂದರ್ತಿ, ಸಮಾಜ ಸೇವಕರಾದ. ಸಂತೋಷ್ ಶೆಟ್ಟಿ LIC, .ಸತೀಶ್ ಪೂಜಾರಿ ಹೋಟೆಲ್ ಸದಾನಂದ್ ಭಾಯಂದರ,  , ಉದ್ಯಮಿ ಅಜಿತ್ ಶೆಟ್ಟಿ, ಮೀರಾಬಂದರ್ ನ ನವ ತರುಣ ಮಿತ್ರ ಮಂಡಳಿ ಯ ಅಧ್ಯಕ್ಷ, ಹೋಟೆಲ್ ಉದ್ಯಮಿ ಯೋಗೇಶ್ ಗಾಣಿಗ, ಮಣಿಕಂಠ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ್ ಶೆಟ್ಟಿ, ಯಕ್ಷಗಾನದ  ಪ್ರಧಾನ ಭಾಗವತರಾದ ಸದಾಶಿವ ಅಮೀನ್ ಕೊಕ್ಕರಣೆ,   ಮಾಜಿ ನಗರ ಸೇವಿಕ ನೀಲಂ ಧವನ್. ಮತ್ತಿತರರು ಉಪಸ್ಥರಿದ್ದರು 

ಈ ಸಂದರ್ಭದಲ್ಲಿ ಯಕ್ಷಗಾನಕ್ಕೆ ವಿಶೇಷವಾಗಿ ಸಹಕಾರ ನೀಡಿದ ಸುಧಾಕರ್ ಶೆಟ್ಟಿ ಬಿಯಾಳಿ ಮಂದರ್ತಿ ದಂಪತಿಮತ್ತು ವಿಶ್ವನಾಥ್ ಶೆಟ್ಟಿ. ಕರ್ನಿರೆ ಪಚ್ಚಂಗೇರಿ ಇವರ ವೇದಿಕೆ ಗಣ್ಯರು ಗೌರವಿಸಿದರು.

ಇದೇ ಸಂದರ್ಭದಲ್ಲಿ ಸಂಘಟಕರಿಂದ ಆರ್ಥಿಕ ಹಿಂದುಳಿದ ಬಡ ಕುಟುಂಬ ಒಂದಕ್ಕೆ ಆರ್ಥಿಕ ನೆರವನ್ನು ನೀಡಲಾಯಿತು.

ವಿಶ್ವನಾಥ್ ಶೆಟ್ಟಿಕರ್ನಿರೆ ಪಚ್ಚಂಗೇರಿ ಕಾರ್ಯಕ್ರಮವನ್ನುನಿರೂಪಿಸಿ ಧನ್ಯವಾದ ನೀಡಿದರು,

ಕಾರ್ಯಕ್ರಮಕ್ಕೆ ವಿಶೇಷ ಸಹಕಾರವನ್ನು ಮೋಹನ್ ರೈ ಗುರು ಸ್ವಾಮಿ ನವದುರ್ಗ , ಕಿಶೋರ್ ಶೆಟ್ಟಿ ಹೋಟೆಲ್ ಸರಂಗ್ ಕಾಶಿ ಮೀರಾ , ಪ್ರಸನ್ನ ಶೆಟ್ಟಿ ಮಾಣಿ ಬೆಟ್ಟು ,ಸುರೇಶ್ ಶೆಟ್ಟಿ ಕಳತ್ತೂರು( ಓಂ ಸಾಯಿ ಡೆಕೋರೇಟರ್), ಅರುಣ್ ಶೆಟ್ಟಿ ಶ್ರೀ ಕಟೀಲೇಶ್ವರಿ ಬೋರಿವಲಿ , ಸದಾನಂದ ಪೂಜಾರಿಹೋಟೆಲ್ ಜಸೇನ್ ಮಲಾಡ್ , ಭಾರತ್ ಬ್ಯಾಂಕಿನ ನಿರ್ದೇಶಕ ನರೇಶ್ ಪೂಜಾರಿ  , ನಟರಾಜ್ ಶೆಟ್ಟಿ  ಹೋಟೆಲ್ ಉದ್ಯಮಿ , ಹರೀಶ್ ರೈ ಸಮಾಜ ಸೇವಕರು , ಪ್ರವೀಣ್ ಶೆಟ್ಟಿ ಹೋಟೆಲ್ ಬ್ಲೂ ನೈಟ್ , ಅರುಣ್ ಪಕ್ಕಳ ಅರುಣ್ ಕ್ಲಾಸ್ ಬಾಯಂದರ್,  ಅರುಣ್ ಶೆಟ್ಟಿ ಪಣಿಯೂರ್ ಯುವ ಬ್ರಿಗೇಡ್ ಮಿರಾ – ಬಾಯಂದರ್, ಸುರೇಂದ್ರ ಹೆಗ್ಡೆ  , ಅಜಿತ್ ಶೆಟ್ಟಿ ಹೋಟೆಲ್ ಅಕ್ಷಯ್ , ನಟರಾಜ್ ಶೆಟ್ಟಿ  ಹೋಟೆಲ್ ಉದ್ಯಮಿ ,ಉದಯ್ ಶೆಟ್ಟಿ ಬಿಯಾಳಿ  , ಶಶಿಧ‌ರ್ ಶೆಟ್ಟಿ ಬಿಯಾಳಿ, ಮೋಹನ್ ಶೆಟ್ಟಿ ಶಾಂತ ದುರ್ಗಾ ಸೇವಾ ಸಮಿತಿ, ರವಿ ಶೆಟ್ಟಿ ನೆನಪಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಸಹಕಾರವನ್ನು ನೀಡಿದ ಶಾಂತ ದುರ್ಗಾ ಸೇವಾ ಸಮಿತಿ ಮಹಿಳಾ ವಿಭಾಗ ಮಹಿಳಾ ವಿಭಾಗದಸೌಮ್ಯ ಲತಾ ಕಯ್ಯ.ಯಶೋಧ ಕೋಟ್ಯಾನ್ .ವಂದನಾ ಶೆಟ್ಟಿ ,ಶೋಭಾ ಶೇಕರ ಶೆಟ್ಟಿ ,ಕುಶಾಲ ಬಂಗೇರ ,ಶೋಭಾ ರಮೇಶ್ ಶೆಟ್ಟಿ,ವಿಜಯ ಲಕ್ಷಿ ಸುವರ್ಣ ,ಶಕುಂತಳ ಸಾಲಿಯಾನ್ .ಶೀಲಾ ಶೆಟ್ಟಿ,ರಮಾ ಸಫಲಿಗ,ಅನಿತಾ ಶೆಟ್ಟಿ.ವಂದನಾ ಶೆಟ್ಟಿ.ಪ್ರೇಮ ಲೋಕೇಶ್, ಹಾಗೂ ಸದಸ್ಯರನ್ನು ಶೇಖರ್ ಶೆಟ್ಟಿ ಗೌರವಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ರಾಜೇಶ್ ಶೆಟ್ಟಿ ತೆಳ್ಳಾರ್ ಇವರ ಸಹಕಾರದಿಂದ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. 

ಮಳೆಯ ಆರ್ಭಟದ ನಡೆಯು  ಕಿಕ್ಕೇರಿದು ತುಂಬಿತ್ತು ಸಭಾಂಗಣದಲ್ಲಿ ಯಕ್ಷ ಕಲಾಅಭಿಮಾನಿಗಳಿಗೆ ಕಲಾವಿದರು ಯಕ್ಷಗಾನದ  ಮುದ ನೀಡಿದರು,

—————-

ನಿಷ್ಠೆ ಪ್ರಾಮಾಣಿಕತೆಯಿಂದ ಧಾರ್ಮಿಕ ಸಾಮಾಜಿಕ ಸೇವೆಯನ್ನು ಮಾಡಿದಾಗ ನಮ್ಮೊಳಗೆ ಭಗವಂತ ಸೇರಿಕೊಳ್ಳುತ್ತಾನೆ: ಇನ್ನಂಜೆ ಚಂದ್ರಹಾಸ್ ಗುರುಸ್ವಾಮಿ

ಗುರುವಂದನೆಯನ್ನು ಸ್ವೀಕರಿಸಿದ ಇನ್ನಂಜೆ ಚಂದ್ರಹಾಸ್ ಸ್ವಾಮಿ ಮಾತನಾಡುತ್ತಾ, ಮಳೆಯ ಆರ್ಭಟದ ನಡುವೆ ಈ ಪರಿಸರದ ಕಲಾ ಆರಾಧಕರು ಬಾರಿ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ ದೇವಿಯಸೇವೆ ಎನ್ನುವ ಭಾವನೆಯಿಂದ ಸಭಾಂಗಣದಲ್ಲಿ ಬಹಳಷ್ಟು ದೇವಿ ಯದಿರುದಿರು ಸೇರಿಕೊಂಡಿದ್ದಾರೆ, ಸರಕಾರ ಮಾಡುವ ಕೆಲಸವನ್ನು ನಮ್ಮೂರಿನ ತುಳು ಕನ್ನಡಿಗರು ಮಾಡುತ್ತಿದ್ದಾರೆ ಕೊರೋನದ ಸಂದರ್ಭದಲ್ಲಿ ಜೀವದ ಅಂಗು ತೆರೆದು ಬಹಳಷ್ಟು ಜನ ಸಮಾಜ ಸೇವೆ ಮಾಡಿದ್ದಾರೆ, ವೇದಿಕೆಯಲ್ಲಿರುವ ಗಣ್ಯರು ಇಲ್ಲಿ ಸೇರಿಕೊಂಡಿರುವ ಎಲ್ಲರೂ ದೇವರು ಮೆಚ್ಚುವಂಥ ಸಮಾಜ ಸೇವೆಯನ್ನು ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ. ದೇವರನ್ನು ಕ್ಷಣಮಾತ್ರ ಪ್ರಾರ್ಥಿಸಿದರೆ ಯಾವುದೇ ಸಂದರ್ಭದಲ್ಲಿ ಕೂಡ ನಮ್ಮನ್ನು ರಕ್ಷಿಸುತ್ತಾನೆ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಧಾರ್ಮಿಕ ಸಾಮಾಜಿಕ ಸೇವೆಯನ್ನು ಮಾಡಿದಾಗ ನಮ್ಮೊಳಗೆ ಭಗವಂತ ಸೇರಿಕೊಳ್ಳುತ್ತಾನೆ ಎಂದು ನುಡಿದರು,

——

 

 

Related posts

ವಿಜಯ ಕಾಲೇಜ್ ಮೂಲ್ಕಿ ವಿಶ್ವ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಕೂಡುವಿಕೆ

Mumbai News Desk

ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ 15ನೇ ವರ್ಷದ ಪೂಜೆಯ ಆಮಂತ್ರಣ ಪತ್ರಿಕೆ ಲೋಕಾರ್ಪಣೆ.

Mumbai News Desk

ಕರ್ನಿರೆ  ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ.

Mumbai News Desk

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ಶ್ರೀ ಜಗದಂಬಾ ಮಂದಿರದ 9 ನೇ ವಾರ್ಷಿಕ ಮಹೋತ್ಸವ

Mumbai News Desk

 ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

Mumbai News Desk