



ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಆಡಳಿತ ಮಂಡಳಿ ಮತ್ತು ಉಪಸಮಿತಿಗಳ ಸಹಕಾರದೊಂದಿಗೆ ಧಾರ್ಮಿಕ ಸಮಿತಿಯ ಸಂಯೋಜನೆಯಲ್ಲಿ ಜುಲೈ 21 ರಂದು ರವಿವಾರ ಅಪರಾಹ್ನ 3-00 ರಿಂದ ಥಾಣೆ ಪಶ್ಚಿಮದಲ್ಲಿರುವ ಸಂಘದ ನೂತನ ಕಿರು ಸಭಾಂಗಣದಲ್ಲಿ (ಪ್ರಥಮ ಮಹಡಿ, 9 ಮಾನಸಿ) ಗುರುಪೂರ್ಣಿಮೆ ಆಚರಿಸಲಾಯಿತು
ಅಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದ ಬಳಿಕ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಮತ್ತು ಸದಸ್ಯರಿಂದ ಭಜನೆ ನಡೆಯಿತು ತದನಂತರ ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಪ್ರಧಾನ ಅರ್ಚಕರಾದ ಶ್ರೀಧರ ವಿ. ಪೂಜಾರಿ ಮಹಾಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದರು. ಮಾಜಿ ಉಪಾಧ್ಯಕ್ಷರಾದ ಸಿ. ಎ. ಪೂಜಾರಿ ಗುರು ಸೋತ್ರ ಪಠಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ಗುರು ಪೂರ್ಣಿಮೆ ಉತ್ಸವದಲ್ಲಿ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್ ಉಪಾಧ್ಯಕ್ಷರುಗಳಾದ ಎನ್. ಎಮ್. ಬಿಲ್ಲವ, ಆನಂದ ಕೆ. ಪೂಜಾರಿ, ಮಾಜಿ ಉಪಾಧ್ಯಕ್ಷರಾದ ಎನ್. ಜಿ. ಪೂಜಾರಿ, ಜೊತೆ ಕಾರ್ಯದರ್ಶಿ ಹರೀಶ್ ಎನ್. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಧಾರ್ಮಿಕ ಸಮಿತಿಯ ಜೊತೆ ಕಾರ್ಯದರ್ಶಿ ಸೋಮಯ್ಯ ಪೂಜಾರಿ ಹಾಗೂ ಆಡಳಿತ ಮಂಡಳಿ ಮತ್ತು ಉಪಸಮಿತಿಗಳ ಸದಸ್ಯರು, ಸಮಾಜ ಬಾಂಧವರು ಸಂಘದ ಸದಸ್ಯರು ಮತ್ತು ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಬ್ರಹ್ಮಶ್ರೀ ನಾರಾಯಣ ಗುರುವರ್ಯರಗೆ ಗುರುವಂದನೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.