
ಮುಲುಂಡ್,. 2024-25ರ ಶೈಕ್ಷಣಿಕ ವರ್ಷದ ಪಾಲಕ ಶಿಕ್ಷಕ ಸಂಘದ ಮಹಾಸಭೆಯು ಮುಲುಂಡಿನ ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಮಾಧ್ಯಮದ ಶಾಲೆಯ ಸಭಾಗ್ರಹದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅರ್ಚನಾ ಬಿರಾಜದಾರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಪಿ ಬಂಗೇರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾ ಪ್ರಸಾರಕ ಮಂಡಳದ ಕಾರ್ಯ ವೈಖರಿಗಳ ಕುರಿತು ಬೆಳಕನ್ನು ಚೆಲ್ಲುತ್ತಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಅರುಹುತ್ತಾ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾ ಪ್ರಸಾರಕ ಮಂಡಳವು ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತಾಗಿ ವಿವರವಾಗಿ ತಿಳಿಸುತ್ತಾ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಶಿಕ್ಷಣಕ್ಕೆ ಪೂರಕವಾದ ಸಾಮಗ್ರಿಗಳನ್ನು ಪೂರೈಸಲು ಉದಾರವಾದ ದೇಣಿಗೆಯನಿತ್ತು ಸಹಕರಿಸುತ್ತಿರುವ ಮಹಾನ್ ದಾನಿಗಳನ್ನು ಈ ಸಂದರ್ಭದಲ್ಲಿ ನೆನಪಿಸುತ್ತಾ ಅದರ ಸಂಪೂರ್ಣವಾದ ಸದುಪಯೋಗವನ್ನು ಪಡೆದುಕೊಂಡು ಸತ್ಪ್ರಜೆಗಳಾಗಿರಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ ವರ್ಷದ ನೂತನ ಪಾಲಕ ಶಿಕ್ಷಕ ಸಭೆಯ ಕಾರ್ಯ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಪ್ರಾಂಶುಪಾಲರಾದ ಶ್ರೀಮತಿ ಅರ್ಚನಾ ಬಿರಾಜದಾರ,ಗೌರವ ಕಾರ್ಯದರ್ಶಿಗಳಾಗಿ ಶಿಕ್ಷಕಿ ಶ್ರೀಮತಿ ಅಶ್ವಿನಿ ಪಿ ಬಂಗೇರ, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಶೈಲಾ ಗೌಡ,ಗೌರವ ಕೋಶಾಧಿಕಾರಿಗಳಾಗಿ ಶಿಕ್ಷಕರಾದ ಶ್ರೀಯುತ ಮಲ್ಲಿಕಾರ್ಜುನ ಗೋಲಿ, ಜೊತೆ ಕೋಶಾಧಿಕಾರಿಗಳಾಗಿ ಶ್ರೀಮತಿ ಮೀನಾಕ್ಷಿ ಜಮಾದಾರ್ ಅವರು ಆಯ್ಕೆಗೊಂಡರು.

ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅರ್ಚನಾ ಬಿರಾಜದಾರ ಅವರು ಮಾತನಾಡುತ್ತಾ ಶಾಲಾ ಪಾಲಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡ ಪದಾಧಿಕಾರಿಗಳನ್ನು ಅಭಿನಂದಿಸುತ್ತಾ ಪ್ರತಿಯೊಬ್ಬ ಪಾಲಕರು ಕನ್ನಡ ಅಭಿಮಾನದಿಂದ ತಮ್ಮ ಮಕ್ಕಳು ಮಾತೃಭಾಷೆಯಲ್ಲಿಯೇ ಶಿಕ್ಷಣವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ನಮ್ಮ ಕನ್ನಡ ಮಾಧ್ಯಮದ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದೀರಿ .ನಿಮ್ಮ ಕನ್ನಡತನಕ್ಕೆ ನಾವು ಚಿರಋಣಿಗಳು ಎಂದು ತಿಳಿಸುತ್ತಾ, ವಿದ್ಯಾರ್ಥಿಗಳು ಟಿವಿ, ಮೊಬೈಲ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳದಂತೆ ಜಾಗೃತೆವಹಿಸಿ ಅವರ ಅಭ್ಯಾಸದತ್ತ ಗಮನವನ್ನು ಹರಿಸಿರಿ, ಆ ಮೂಲಕ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿಸಿರಿ ಎಂದು ಪಾಲಕರಿಗೆ ಕರೆಯುತ್ರರು.
ಸಭಾ ಕಾರ್ಯಕ್ರಮವು ಶಾಲಾ ಶಿಕ್ಷಕಿ ಶ್ರೀಮತಿ ಸುನಿತಾ ಮಠ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಆಗಮಿಸಿದ ಅತಿಥಿ ಅಭ್ಯಾಗತರನ್ನು ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಪಿ ಬಂಗೇರರವರು ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಶ್ರೀಯುತ ರಮೇಶ್ ಚಂಕೋಟೆ,ಶ್ರೀಯುತ ಚಂದ್ರಶೇಖರ ಬನ್ನಿಮಠ, ಶ್ರೀಮತಿ ಸುಮಿತ್ರಾ ಗೌಡ,ಶ್ರೀಮತಿ ಸುನಿತಾ ಮಠ್, ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ರೇಖಾ ರಾವ್ ಹಾಗೂ ಶಿಕ್ಷಕರಾದ ಶ್ರೀಯುತ ವಿಶ್ವನಾಥ್ ಧನಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಪಾಲಕರಾದ ಶ್ರೀಮತಿ ಗೀತಾ ಗೌಡ ,ಶ್ರೀಮತಿ ಶೈಲಾಗೌಡ ಶ್ರೀಮತಿ ತಾರಾಮಣಿ ಹಾಗೂ ಶ್ರೀಮತಿ ಸರಿತಾ ಕಟ್ಟಿಮನಿಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಶಾಲೆಗೆ ವಿದ್ಯಾರ್ಥಿಗಳನ್ನು ತರುವಲ್ಲಿ ಸಂಪೂರ್ಣವಾದ ಸಹಕಾರವನ್ನಿತ್ತ ಪಾಲಕರಾದ ಶ್ರೀಯುತ ನಾಗೇಂದ್ರ ಮೊರೆ, ಶ್ರೀಯುತ ಲಕ್ಷ್ಮಣ ಹಿಂದಿನಮನೆ ಹಾಗೂ ಶ್ರೀಯುತ ಕಲ್ಲೇಶ್ ಬಾವಿಕಟ್ಟೆಯವರನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅರ್ಚನಾ ಬಿರಾಜದಾರ್ ಅವರು ಹೂಗುಚ್ಛವನ್ನಿತ್ತು ಸತ್ಕರಿಸಿದರು. ವೇದಿಕೆಯಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯನಿ ಶ್ರೀಮತಿ ಲಕ್ಷ್ಮಿ ಕೆಂಗನಾಳ ಹಾಗೂ ಮಾಧ್ಯಮಿಕ ವಿಭಾಗದ ಪರಿವೀಕ್ಷಕಿ ಶ್ರೀಮತಿ ರತ್ನ ಕುಲಕರ್ಣಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ಜರುಗಲು ಶಿಕ್ಷಕರಾದ ಶ್ರೀಯುತ ಮಲ್ಲಿಕಾರ್ಜುನ ಗೋಲಿಯವರು ಸಹಕರಿಸಿದರು.
ಸಭಾ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಪಿ ಬಂಗೇರ ರವರು ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವನ್ನಿತ್ತರು. . ಸಭೆಯಲ್ಲಿ ಉಪಸ್ಥಿತರಿದ್ದ ಸರ್ವರಿಗೂ ಲಘು ಉಪಹಾರವನ್ನು ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವರದಿ
ಅಶ್ವಿನಿ ಪಿ ಬಂಗೇರ 8454814553