
ಚಿತ್ರ, ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ, ಜು.22. ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾ ಭಾಯಂದರ್ ವತಿಯಿಂದ ಗುರುಪೂರ್ಣಿಮೆ ಉತ್ಸವವನ್ನು ಜು.21ರಂದು ಆದಿತ್ಯವಾರ ಭಾಯಂದರ್ ಫಾಟಕ್ ರಸ್ತೆಯಲ್ಲಿರುವ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ಕ್ರೌನ್ ಹೋಟೇಲಿನ ಅಶ್ವಿನಿ ಬ್ಯಾಂಕ್ವೆಟ್ ಸಭಾಗ್ರಹದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಆರಂಭದಲ್ಲಿ ಸಂಸ್ಥೆಯ ಸಂಚಾಲಕ ಆನಂದ್ ಎನ್. ಶೆಟ್ಟಿ ಕುಕ್ಕುಂದೂರು, ಅದ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ,ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಅಮಾವಾಸ್ಯೆಬೈಲು, ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ , ಉಪಾಧ್ಯಕ್ಷೆ ವಸಂತಿ ಶೆಟ್ಟಿ,ಅರ್ಚಕರಾದ ಲಕ್ಷ್ಮಣ್ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಶೆಟ್ಟಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಲತಾ ಪುತ್ರನ್,ಯುವ ವಿಭಾಗದ ಕಾರ್ಯಾಧ್ಯಕ್ಷ ಕಾಪು ರಾಜೇಶ್ ಶೆಟ್ಟಿ , ಆಶಾ ಶೆಟ್ಟಿ ಮೊದಲಾದವರು ಶ್ರೀ ನಿತ್ಯಾನಂದ ಸ್ವಾಮಿಗಳ ಅಲಂಕೃತ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಜನಾ ಕಾರ್ಯಕ್ರಮದಲ್ಲಿ ಪರಿಸರದ ಶ್ರೀ ಕುಲಮಸ್ತಿ ಭಜನಾ ಮಂಡಳಿ ಮೀರಾ ರೋಡ್, ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಮೀರಾ ರೋಡ್, ಶ್ರೀ ಕಟೀಲೇಶ್ವರಿ ಭಜನಾ ಮಂಡಳಿ ಭಾಯಂದರ್, ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್, ಶ್ರೀ ಅಯ್ಯಪ್ಪ ಆರಾಧನಾ ಭಜನಾ ಮಂಡಳಿ ಭಾಯಂದರ್, ಬಂಟ್ಸ್ ಫೋರಮ್ ಭಜನಾ ಮಂಡಳಿ ಮೀರಾ ಭಾಯಂದರ್, ಕರ್ನಾಟಕ ಮಹಾಮಂಡಲ ಭಜನಾ ಮಂಡಳಿ ಮೀರಾಭಾಯಂದರ್,ಬಂಟರ ಸಂಘ ಮೀರಾಭಾಯಂದರ್ ಸಮಿತಿಯ ಭಜನಾ ಮಂಡಳಿ, ಹಾಗೂ ಮಹಾಲಿಂಗೇಶ್ವರ ಭಜನಾ ಮಂಡಳಿ ಮೀರಾ ಗಾಂವ್, ಶ್ರೀ ಶನೀಶ್ವರ ಸೇವಾ ಸಮಿತಿ ಪ್ಲೆಸೆಂಟ್ ಪಾರ್ಕ್ ಮೊದಲಾದ ಮಂಡಳಿಗಳು ಭಾಗವಹಿಸಿದ್ದವು.
ತದನಂತರ ಗುರು ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ್ದ ಕ್ರೌನ್ ಹೋಟೇಲಿನ ಮಾಲಕ ಶೇಖರ್ ಶೆಟ್ಟಿ, ಸಂಚಾಲಕರಾದ ಚಂದ್ರಹಾಸ್ ಕೆ.ಶೆಟ್ಟಿ ಇನ್ನ, ಅನಿಲ್ ಶೆಟ್ಟಿ ಎಲ್ಲೂರು ಒಡಿಪರಗುತ್ತು, ಹರೀಶ್ ಶೆಟ್ಟಿ ಕಾಪು ಹಾಗೂ ಪ್ರವೀಣ್ ಶೆಟ್ಟಿ, ರಮೇಶ್ ಶೆಟ್ಟಿ, ಪ್ರಸ್ತುತ ವರ್ಷದಲ್ಲಿ ಸಿ.ಎ ಪದವಿ ಗಳಿಸಿದ ಶ್ರೀರಕ್ಷಾ ಶೆಟ್ಟಿ, ಸಂಸ್ಥೆಯ ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ ಹಾಗೂ ಭುವಾಜಿಗಳಾದ ಲಕ್ಷ್ಮಣ್ ಶೆಟ್ಟಿ ಮತ್ತು ನಾರಾಯಣ ಶೆಟ್ಟಿಯವರನ್ನು ಶಾಲು ,ನೆನಸುಗೆ ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ದೇರಳಕಟ್ಟೆ, ಜೊತೆ ಕಾರ್ಯದರ್ಶಿ ಉಮೇಶ್ ಶೆಟ್ಟಿ,ಜತೆ ಕೋಶಾಧಿಕಾರಿ ಮಲ್ಲಿಕಾ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಗೀತಾ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಮತಿ ಎಸ್.ಆರ್.ಶೆಟ್ಟಿ, ವಿಜಯಲಕ್ಷ್ಮೀ ಡಿ.ಶೆಟ್ಟಿ, ಸುಜಾತಾ ಶೆಟ್ಟಿ ಕಾಪು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು. ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗುರು ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.