ಮುಂಬಯಿ ಜೂ 26.ವರ್ಲಿಯ ಪರಿಸರದಲ್ಲಿ ಧಾರ್ಮಿಕ ಸಾಮಾಜಿಕ ಸೇವೆಯ ಮೂಲಕ ಪ್ರಸಿದ್ಧಿಯಲ್ಲಿರುವ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಆಶ್ರಯದಲ್ಲಿಜು 28 ರವಿವಾರದದು ಆಟಿದ ಕೂಟ ಸಂಜೆ 6 ನಡೆಯಲಿದೆ
ಸಂಜೆ 6ರಿಂದ 7 ವರೆಗೆ ಭಜನೆ ಬಳಿಕ ಮಹಾಮಂಗಳಾರತಿ.ರಾತ್ರಿ 7.30 ಕ್ಕೆ ತುಳುನಾಡ ಸಂಸ್ಕೃತಿ ಆಟಿದ ಕೂಟ ಕಾರ್ಯಕ್ರಮದ ಮಹಿಳಾ ವಿಭಾಗದ ಸಂಸ್ಥಾಪಕಿ ಶಾಂಭವಿ ಆರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ . ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಕವಿತಾ ಗೋಪಾಲ್ ಶೆಟ್ಟಿ ಅವರ ನೇತೃತ್ವದಲ್ಲಿ.. ಫೌಂಡೇಶನ್ ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳು ಮಾತುವಿನಿಮಯವಾಗಲಿದೆ.
ಮಹಿಳಾ ವಿಭಾಗದ ಸದಸ್ಯರು ಮನೆಯಿಂದಲೆ ಸಸ್ಯಹಾರಿ ಆಟಿ ತಿಂಗಳ ತಿಂಡಿ ತಿನಿಸುಗಳನ್ನು ಮಾಡಿ ಭಕ್ತರಿಗೆ ಸದಸ್ಯರಿಗೆ ನೀಡಲಿದ್ದಾರೆ.
ಫೌಂಡೇಶನ್ ನ ಸಂಸ್ಥಾಪಕರಾದ ಶ್ರೀ ರಮೇಶ್ ಗುರುಸ್ವಾಮಿಯವರು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕತೆಯನ್ನು ಒಳಗೊಂಡಿರುವ ಆಟಿ ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ. ಫೌಂಡೇಶನ್ ನ ಕಾರ್ಯದರ್ಶಿ ಹರೀಶ್ ಶೆಟ್ಟಿ. ಮಹಿಳಾ ವಿಭಾಗದ ಕಾರ್ಯದರ್ಶಿ ರೋಹಿಣಿ ಶೇಖರ್ ಪೂಜಾರಿ ಮತ್ತಿತರ ಪದಾಧಿಕಾರಿಗಳು ಸದಸ್ಯರು ವಿನಂತಿಸಿಕೊಂಡಿದ್ದಾರೆ.