
ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ಮಹಮಂಡಳ ಮೀರಾಬಾಯಿಂದರ್ ಪರಿಸರದಲ್ಲಿ ತುಳು ಕನ್ನಡಿಗರ ಸಾಮಾಜಿಕ ಚಟುವಟಿಕೆಗಳಿಗೆ ಪ್ರೇರಣೆಯನ್ನು ನೀಡುವುದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಇಂಥ ವಿವಿಧ ಕ್ಷೇತ್ರದಲ್ಲಿ ಪ್ರಶಂ ಶನಿಯ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ಮಾ ಮಂಡಳದ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಜುಲೈ 20ರ ಶನಿವಾರದಂದು ಸಾಯಂಕಾಲ ಅಶ್ವಿನಿ ಬಂಕ್ವೇಟ್ ಹಾಲ್ ಕ್ರೌನ್ ಬಿಜಿನೆಸ್ ಹೋಟೆಲ್ ಗೋಲ್ಡನ್ ನೆಸ್ಟ್ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಪ್ರತಿವರ್ಷದಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮ್ಮ ತಮ್ಮ ಮನೆಗಳಿಂದ ನಾನಾ ರೀತಿಯ ರುಚಿ ರುಚಿಕರವಾದ ಖಾದ್ಯ ಪದಾರ್ಥಗಳನ್ನು ತಯಾರು ಮಾಡಿ ತಂದು ಸಮಾಜ ಬಾಂಧವರೊಂದಿಗೆ ಬಗೆ ಬಗೆಯ ತಿನಿಸುಗಳನ್ನು ಪರಸ್ಪರ ಹಂಚಿಕೊಂಡು ಪದಾರ್ಥಗಳ ಸವಿಯನ್ನು ಸವಿದು ಹಿಂದಿನ ಕಾಲದ ಆಟಿ ತಿಂಗಳ ಕಷ್ಟ ಸುಖಗಳನ್ನು ನೆನಪಿಸುತ್ತ ಕುಣಿದು ಕುಪ್ಪಳಿಸುತ್ತಾ ಸಮಾಜ ಬಾಂಧವರಿಗೆ ಮಕ್ಕಳಿಗೆ ಆಟಿ ತಿಂಗಳ ಮಹತ್ವವನ್ನು ತಿಳಿಸುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀಮತಿ ವಸಂತಿ ಶೆಟ್ಟಿ, ಮಹಿಳಾ ವಿಭಾಗ ಕಾರ್ಯದಕ್ಷರು ಬಂಟರ ಸಂಘ ಮುಂಬೈ ಮೀರಾ ಬೈಂದರ್ ಪ್ರಾದೇಶಿಕ ಸಮಿತಿ, ಶ್ರೀಮತಿ ಸುಜಾತ ಜಿ ಶೆಟ್ಟಿ ಮಹಿಳಾ ವಿಭಾಗ ಕಾರ್ಯಾಧ್ಯಕ್ಷರು ಮೀರಾ ಡಹನು ಬಂಟ್ಸ್, ಶ್ರೀಮತಿ ಸುಖವಾಣಿ ಶೆಟ್ಟಿ ಕಾರ್ಯಧ್ಯಕ್ಷರು ಮಹಿಳಾ ವಿಭಾಗ ಬಂಟ್ಸ್ ಫೋರಂ ಮೀರಾ ಬೈಂದರ್, ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ ಕಾರ್ಯಾಧ್ಯಕ್ಷರು ಶ್ರೀ ಶಕ್ತಿ ಫೌಂಡೇಶನ್ ಮೀರಾ ಬೈಂದರ್, ಶ್ರೀಮತಿ ತನುಜಾ ಶೆಟ್ಟಿ ವೀರ್ಕರ್ ಸಮಾಜ ಸೇವಕಿ, ಶ್ರೀಮತಿ ಲತಾ ಸಂತೋಷ್ ಶೆಟ್ಟಿ ಲೇಖಕಿ, ಶ್ರೀಮತಿ ಸುಮಿತ್ರ ಕರ್ಕೇರ ಇವರೆಲ್ಲರೂ ಆಗಮಿಸಿ ಆಟಿ ತಿಂಗಳ ಮಹತ್ವದ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು, ಕಾರ್ಯಕ್ರಮದಲ್ಲಿ ಶ್ರೀ ರವೀಂದ್ರ ಶೆಟ್ಟಿ ಇನ್ನ ಅಧ್ಯಕ್ಷರು ಕರ್ನಾಟಕ ಮಹಾಮಂಡಲ ಮೀರಾ ಬೈಂದರ್, ಶ್ರೀ ಉದಯ್ ಶೆಟ್ಟಿ ಮಲ್ಲಾರ್ ಬೀಡು ಅಧ್ಯಕ್ಷರು ಬಂಟ್ಸ್ ಫೋರಂ ಮೀರಾ ಬೈಂದರ್, ಶ್ರೀ ಚಂದ್ರಹಾಸ್ ಶೆಟ್ಟಿ ಉದ್ಯಮಿ, ಶ್ರೀ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ಕಾರ್ಯಾಧ್ಯಕ್ಷರು ಬಂಟ್ಸ್ ಸಂಘ ಮುಂಬೈ ಮೀರಾ ಬೈಂದರ್ ಪ್ರಾದೇಶಿಕ ಸಮಿತಿ, ಶ್ರೀ ಬಾಬಾ ಪ್ರಸಾದ್ ಅರಸ ಕಾರ್ಯದರ್ಶಿ ಬಂಟ್ಸ್ ಸಂಘ ಮುಂಬೈ ಮೀರಾ ಬೈಂದರ್ ಪ್ರಾದೇಶಿಕ ಸಮಿತಿ, ಶ್ರೀ ಚೇತನ್ ಶೆಟ್ಟಿ, ಅಧ್ಯಕ್ಷರು ನಮ ಜವನೇ ರ್ ಮೀರಾ ಬೈಂದರ್, ಶ್ರೀ ನರೇಶ್ ಪೂಜಾರಿ ಕಾರ್ಯಧ್ಯಕ್ಷರು ಬಿಲ್ಲವರ ಅಸೋಸಿಯೇಶನ್ ಬೈಂದರ್ ಸ್ಥಳೀಯ ಸಮಿತಿ ಇವರೆಲ್ಲರೂ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು. ಮಂಡಲದ ಮಹಿಳಾ ವಿಭಾಗದ ಕಾರ್ಯಧ್ಯಕ್ಷರಾದ ಶ್ರೀಮತಿ ಸುಮಂಗಲ ಅಶೋಕ ಕಣಂಜಾರು ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ಪಂತಿನಕುಲು ಮಾತೆರ್ಲ ಬೈದರತ್ತ ಪದ್ಯವು ಎಲ್ಲರ ಗಮನ ಸೆಳೆಯಿತು. ಪ್ರಾರಂಭದಲ್ಲಿ ಶ್ರೀಮತಿ ಅನುಷಾ ಶೆಟ್ಟಿ ಮತ್ತು ಶ್ರೀಮತಿ ಸುಮತಿ ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ಸದಸ್ಯರಿಂದ ಆಟಿ ಕಳೆಂಜ ದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ನಿರೂಪಣೆಯನ್ನು ಮಂಡಳದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ನಯನ ರಮೇಶ್ ಶೆಟ್ಟಿ ನಿರೂಪಿಸಿದರು. ಪ್ರೋತ್ಸಾಹಿಸಿದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಮಹಿಳಾ ಸದಸ್ಯರಿಗೆ, ಮಂಡಳದ ಸದಸ್ಯರಿಗೆ, ಮಹಿಳಾ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಾ ಮಹಿಳಾ ಸದಸ್ಯರು ತಯಾರು ಮಾಡಿ ತಂದ ನಾನಾ ರೀತಿಯ ಖಾದ್ಯ ಪದಾರ್ಥಗಳ ಸವಿಯನ್ನು ಎಲ್ಲರೂ ಒಟ್ಟಾಗಿ ,ಒಂದಾಗಿ ಸವಿಯುತ್ತಾ ಸಮಾಜ ಬಾಂಧವರ ಏಕತೆಯನ್ನು ಸಾರುತ್ತ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.