
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರ ಕ್ರೀಡಾ ಕೂಟದಲ್ಲಿ ಭಾರತದ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ 221.7 ಅಂಕದೊಂದಿಗೆ 3ನೇ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ.
ಹರಿಯಾಣ ಮೂಲದ ಮನು ಭಾಕರ್ ಕಂಚು ಪದಕ ಗೆದ್ದು ಒಲಿಂಪಿಕ್ಸ್ 2024ರಲ್ಲಿ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.
ಒಲಂಪಿಕ್ಸ್ ನಲ್ಲಿ ಭಾರತ ಮೊದಲ ಪದಕ ಗೆದ್ದಿದ್ದು, ಕಂಚಿನ ಪದಕದೊಂದಿಗೆ ಭಾರತ ಪದಕ ಬೇಟೆ ಮುಂದುವರಿಸಿದೆ.