
ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಯಲ್ಲಿ ಜೂನ್ 28, 2024 ಭಾನುವಾರದಂದು ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮವು ಮಂದಿರದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು
ತೆಂಗಿನ ಗರಿಯಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ , ಹಾಗು ಮಂದಿರದ ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ , ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸವಿತಾ ಸಿ ಸಾಲಿಯಾನ್ ರೊಂದಿಗೆ ಅತಿಥಿ ಗಣ್ಯರಾಗಿ ಆಗಮಿಸಿದ ಶ್ರೀಮತಿ ಯೋಗಿನಿ ಸುಕುಮಾರ್ ಶೆಟ್ಟಿ , ಶ್ರೀಯುತ ರವಿ ಸನಿಲ್ ಅತಿಥಿಯಾದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇಂದುಶೇಖರ ಅವರ ದಿವ್ಯ ಹಸ್ತದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಬಂಟ್ಸ್ ಸಂಘ ಮುಂಬಯಿ ಇದರ ಡೊಂಬಿವಲಿ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಯೋಗಿನಿ ಎಸ್ ಶೆಟ್ಟಿ ಹಾಗೂ ಇನ್ನೋರ್ವ ಅತಿಥಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಜೊತೆ ಕಾರ್ಯದರ್ಶಿ ಶ್ರೀ ರವಿ ಎಸ್ ಸನಿಲ್ ಅವರ ಉಪಸ್ಥಿತಿಯಲಿ ಹಿಂಗಾರ ಹೂವನ್ನು ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಹಿಳಾ ಸದಸ್ಯೆಯರಾದ ಶ್ರೀಮತಿ ಗೀತಾ ಪುತ್ರನ್,, ಶ್ರೀಮತಿ ಯಮುನಾ ಪಾಲನ್ ಶ್ರೀಮತಿ ಶಶಿಕಲಾ ಮೆಂಡನ್ ಗಣೇಶ ದೇವರ ಸ್ತುತಿಃಯನ್ನು ಹಾಡಿದರು.
ಸಭಾ ಕಾರ್ಯಕ್ರಮ ಆರಂಭವಾಗುವ ಮೊದಲು ಮಹಿಳಾ ಸದಸ್ಯೆಯ ರಿಂದ ಒಂದು ತಾಸಿನ ಭಜನಾ ಕಾರ್ಯಕ್ರಮ ಶ್ರೀ ಮಹಾ ವಿಷ್ಣು ದೇವರ ಸಾನಿಧ್ಯದಲ್ಲಿ ನಡೆಯಿತು. ಮಂದಿರದ ಅರ್ಚಕರದ ಶ್ರೀಹರೀಶ್ ಪದ್ಮಶಾಲಿ ಅವರಿಂದ ಮಹಾ ಮಂಗಳಾರತಿ ಹಾಗೂ ಆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರಿಗೆ ಮಹಾಪ್ರಸಾದ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯೆಯರಾದ ಶ್ರೀಮತಿ ಯಮುನಾ ಪಾಲನ್ ಶ್ರೀಮತಿ ಗೀತಾ ಪುತ್ರನ್ ಶ್ರೀಮತಿ ಶಶಿಕಲಾ ಮೆಂಡನ್ ಇವರು ಜಾನಪದ ಗೀತೆಯನ್ನು ಪ್ರಸ್ತುತಪಡಿಸಿದರು. ಶ್ರೀಮತಿ ನಯನ ಒಂದು ತುಳು ಪಾಡ್ದನ ಹಾಗೂ ಶ್ರೀಮತಿ ಪ್ರಫುಲ್ಲಾ ದಿನೇಶ್ ಶೆಟ್ಟಿ ಅವರಿಂದ ಕವನವಾಚನ ನಡೆಯಿತು ಹಾಗೂ ಶ್ರೀ ಲೀಲೇಶ್ ಸುವರ್ಣ ಇವರು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಮುದ್ದು ಮಕ್ಕಳಾದ ಪಲಾಶ್ ಕಾಂಚನ್ ಮತ್ತು ಧ್ರುವಿ ಶೆಟ್ಟಿಯ ಆಟಿ ಕಲಂಜನ ನೃತ್ಯ ನೆರೆದ ಸಭಿಕರನ್ನು ರಂಜಿಸಿತು




ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ್ ಸಾಲಿಯನ್ ಅವರು ಆಷಾಢ ಮಾಸ ಹಾಗೂ ಆಟಿಕಳಂಜನ ಬಗ್ಗೆ ಸವಿಸ್ತಾರವಾಗಿ ವಿವರಣೆಯನ್ನು ನೀಡಿ ಎಲ್ಲರನ್ನು ಪ್ರಾಸ್ತಾವಿಕಾವಾಗಿ ಸ್ವಾಗತಿಸಿದರು.
ಶ್ರೀಮತಿ ಯೋಗಿನಿ ಸುಕುಮಾರ್ ಶೆಟ್ಟಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತ ಆಷಾಢ ಮಾಸ ತುಳುವರ ಕಾಲಮಾನದಲ್ಲಿ ನಾಲ್ಕನೆಯ ತಿಂಗಳಾಗಿದ್ದು ಹಿಂದಿನ ಕಾಲದಲ್ಲಿ ಈ ತಿಂಗಳು ವಿಶೇಷತೆಯನ್ನು ಪಡೆದುಕೊಂಡಿತ್ತು. ಆ ಕಾಲದಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದ ಜನರು ಯಾವುದೇ ಕೆಲಸ ಮಾಡುವಂತಿರಲಿಲ್ಲ ಕೂಡು ಕುಟುಂಬವಿದ್ದ ಕಾರಣ ಜೀವನ ಕಳೆಯುವುದು ತುಂಬಾ ಕಷ್ಟಕರ ವಾಗಿತ್ತು. ಆ ಸಮಯದಲ್ಲಿ ಪೃಕೃತಿ ತನ್ನ ಮಡಿಲಲ್ಲಿ ಬೆಳೆದ ಸೊಪ್ಪು ತರಕಾರಿ ಹಣ್ಣು ಹಂಪಲುಗಳಿಂದ ಜನರ ಹೊಟ್ಟೆ ತುಂಬಿಸುತಿತ್ತು. ಈ ಸಮಯದಲ್ಲಿ ಜನರು ನಂಬಿಕೊಂಡು ಬರುತ್ತಿದ್ದ ದೈವ ದೇವರು ಊರು ಬಿಟ್ಟು ಘಟ್ಟ ಹತ್ತುತ್ತಿದ್ದರು ಆವಾಗ ಜನರನ್ನು ರಕ್ಷಿಸಲು ಕಲೆಂಜಾ ಎಂಬ ದೈವ ಊರಿಗಿಳಿದು ಜನರನ್ನು ರಕ್ಷಣೆ ಮಾಡುತಿತ್ತು ಎಂಬ ಪ್ರತೀತಿ ಇದೆ. ಇಂದು ಆಷಾಢ ಮಾಸ ನಮಗೆ ಸಂಭ್ರಮದ ಮಾಸವಾಗಿದೆ, ಸಣ್ಣ ಮಕ್ಕಳು ಆಟಿ ಕಲೆಂಜನ ವೇಷ ಧರಿಸಿ ಆಟಿ ಕಲೆಂಜನ ನರ್ತನ ಮಾಡುವುದು ಮನಸಿಗೆ ಮುದ ನೀಡುತ್ತದೆ. ಇತ್ತೀಚೆಗೆ ನಮ್ಮ ಹಿಂದಿನ ಸಂಪ್ರದಾಯವೆಲ್ಲ ಕಣ್ಮರೆಯಾಗುತ್ತಿದೆ. ಆದರೂ ಊರಿಗಿಂತ ಪರಊರಿನಲ್ಲಿಯ ತುಳು ಕನ್ನಡಿಗರು ನಮ್ಮ ಸಂಪ್ರದಾಯ ಸಂಸ್ಕೃತಿಯೆಡೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದು ತುಂಬಾ ಸಂತೋಷದ ವಿಷಯವಾಗಿದೆ. ನಾವೆಲ್ಲರೂ ನಮ್ಮ ಸಂಪ್ರದಾಯ ಆಚರಣೆಯ ಬಗ್ಗೆ ಹೆಚ್ಚು ಒತ್ತು ನೀಡುವ ಅನ್ನುತ್ತಾ ಈ ಒಂದು ಧಾರ್ಮಿಕ ಸ್ಥಳದಲ್ಲಿ ನನಗೆ ಅತಿಥಿ ಆಗಿ ಬರಲು ಸಿಕ್ಕಿದ್ದು ನನ್ನ ಯೋಗವೆಂದೆ ಭಾವಿಸುತ್ತೇನೆ. ಇಲ್ಲಿಯ ಶಿಸ್ತು ಬದ್ಧ ಕಾರ್ಯಕ್ರಮ, ಭಕ್ತಿ ಭಾವದ ಭಜನೆ ಮನಸಿಗೆ ಖುಷಿ ನೀಡಿದೆ. ಇನ್ನು ಮುಂದೆ ಕೂಡ ಇಂತಹ ಕಾರ್ಯಕ್ರಮಗಳು ಇಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಜರಗಲಿ ಆರಾಧ್ಯ ದೇವರು ಎಲ್ಲರಿಗೂ ಶುಭವನ್ನೇ ಮಾಡಲಿ ಎಂದು ಹಾರೈಸಿದರು.
ಇನ್ನೋರ್ವ ಅತಿಥಿ ರವಿ ಎಸ್ ಸನಿಲ್ ಮಾತಾನ್ನಾಡುತ್ತಾ ಅವರು ಬಾಲ್ಯದಲ್ಲಿ ಕಂಡ ಆಟಿ ತಿಂಗಳ ಅನುಭವನ್ನು ಹಂಚಿಕೊಂಡರು. ಆಟಿ ತಿಂಗಳ ವಿಪರೀತ ಮಳೆಯಿಂದಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ದೋಣಿಯ ಸಹಾಯ ಬೇಕಾಗುತಿತ್ತು.. ಮಳೆಯಿಂದಾಗಿ ಜನರು ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು ಅಸಾಧ್ಯವಾಗಿತ್ತು ಹಾಗಾಗಿ ಆ ಸಮಯದಲ್ಲಿ ಯಾವುದೇ ಮಂಗಳ ಕಾರ್ಯಗಳು ನಡೆಯುತ್ತಿರಲಿಲ್ಲ. ಅಷ್ಟೊಂದು ಕಷ್ಟದಲ್ಲಿದ್ದರೂ ಜನರು ಬಲು ಇಷ್ಟದಿ ಬದುಕುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಕಷ್ಟ ಅಷ್ಟೊಂದು ಇಲ್ಲದಿದ್ದರೂ ಇಷ್ಟದ ಬದುಕು ಎಲ್ಲಿಯೂ ಕಾಣುತ್ತಿಲ್ಲ. ವಿಷ್ಣು ಮಂದಿರದಲ್ಲಿ ಇಂದು ನಡೆದ ಈ ಸಂಭ್ರಮದಲ್ಲಿ ಕಂಡು ಬಂದ ಕಲ್ಪವೃಕ್ಷದ ಹೆಗ್ಗೆಯಿಂದ ಮಾಡಿದ ಈ ವೇದಿಕೆ ಒಮ್ಮೆ ಊರನ್ನು ನೆನೆಪಿಸಿತು. ಅಲ್ಲದೇ ಇಂದು ಇಲ್ಲಿ ಮಕ್ಕಳು ತುಂಬಾ ಮಂದಿ ಭಾಗಿಯಾಗಿರುವುದು ಕಂಡು ಸಂತಸವಾಗಿದೆ. ಒಟ್ಟಿನಲ್ಲಿ ಇಂದಿನ ಅಚ್ಚುಕಟ್ಟಾದ ಕಾರ್ಯಕ್ರಮ ಮನಸಿಗೆ ಮುದ ನೀಡಿದೆ ಅನ್ನುತ್ತಾ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಇಂದುಶೇಖರ್ ತಮ್ಮ ಸಂಸ್ಥೆಯ ವಾರ್ಷಿಕ ಕಾರ್ಯಕಲಾಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರಲ್ಲದೆ ಸುವರ್ಣ ಮಹೋತ್ಸವದ ತಯಾರಿಯಲ್ಲಿರುವ ನಮ್ಮ ಸಂಸ್ಥೆಯ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಹಿರಿಯ ಕಿರಿಯ ಸದಸ್ಯರೆಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಮಹಿಳಾ ಸದಸ್ಯೆಯರು ಸುಮಾರು 40 ಕ್ಕೂ ಹೆಚ್ಚು ಸಿಹಿ ತಿಂಡಿ ಗಳನ್ನು ಮಾಡಿ ತಂದು ಎಲ್ಲರಿಗೂ ಉಣಬಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಂದಿರದ ಕಾರ್ಯಕಾರಿ ಸಮಿತಿಯ ಸದ್ಯಸ್ಯರು, ಮಹಿಳಾ ವಿಭಾಗದ ಸದಸ್ಯರು, ಉಪಸ್ಥಿತರಿದ್ದು ಕಾರ್ಯಕ್ರಮ ಯಶ್ವಸಿಯಾಗಲು ಸಹಕರಿಸಿದರು. ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಜಿ. ಪೂಜಾರಿಯಾವರು ಕಾರ್ಯಕ್ರಮ ನಿರೂಪಣೆ ಗೈದರು ಕೊನೆಗೆ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.