
ಸಮಾಜ ಏಳಿಗೆ, ಮುನ್ನಡೆಗೆ ಒಗ್ಗೂಡುವಿಕೆ ಅತ್ಯವಶ್ಯ:ಪ್ರಭಾಕರ ಪಿ.ಭಂಡಾರಿ.
ಮುಂಬಯಿ ಅ 2. ಸಮುದಾಯ ಸೇವಾ ಸಂಸ್ಥೆಯು ಸಮರ್ಥ ನಾಯಕತ್ವದೊಂದಿಗೆ ಈ ಮಟ್ಟಕ್ಕೆ ಸಾಗಿಬಂದಿದೆ. ನಮ್ಮಲ್ಲಿನ ಧುರೀಣರ ಮಾರ್ಗದರ್ಶನದಿಂದ ಉನ್ನತಿ ಕಂಡಿದೆ. ನಮ್ಮ ನಾಯಕರು ಸಮುದಾಯದ ಪರ ಚಿಂತನೆ ಮೂಡಿಸಿದ್ದ ಕಾರಣ ಸಮಾಜವು ಬಹುತೇಕ ಕ್ಷೇತ್ರದಲ್ಲೂ ಪ್ರಗತಿಯನ್ನು ಸಾಧಿಸಿದ್ದು, ನಮ್ಮಲ್ಲಿನ ಯುವಜನತೆ ಸಂಘದಲ್ಲಿ ಸದಸ್ಯತ್ವ ಹೊಂದಿ ಭಂಡಾರಿ ಸಮುದಾಯದ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು, ಸಮಾಜದ ಏಳಿಗೆ, ಮುನ್ನಡೆಗೆ ಒಗ್ಗೂಡುವಿಕೆ ಅತ್ಯವಶ್ಯ.
ಕುರ್ಲಾದಲ್ಲಿನ ಪುನರಾಭಿವೃದ್ಧಿಗೆ ಹೋಗಿದ್ದ ಸಂಘದ ಸ್ವಂತದ ಜಾಗವು ೨೦೨೫ರಲ್ಲಿ ನಮಗೆ ಸಿಗಲಿದ್ದು ಆ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ಪ್ರಭಾಕರ ಪಿ.ಭಂಡಾರಿ ನುಡಿದರು.
ಅ28 ರಂದು ಮುಲುಂಡ್ ಪಶ್ಚಿಮದ ಶ್ರೀ ಕುಛ್ ದೇಶಿಯಾ ಸರಸ್ವತ್ ಬ್ರಾಹ್ಮಿಣ್ ಮಹಾಸಂಸ್ಥಾನ್ ಟ್ರಸ್ಟ್ ಸಭಾಗೃಹದಲ್ಲಿ ಆಯೋಜಿಸಿದ್ದ ಭಂಡಾರಿ ಸೇವಾ ಸಮಿತಿಯ 71ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪ್ರಭಾಕರ್ ಭಂಡಾರಿ ಮಾತನಾಡಿದರು.

ಸಂಘದ ಗೌರವ ಕಾರ್ಯದರ್ಶಿ ರಮೇಶ್ ಭಂಡಾರಿ , ಕೋಶಾಧಿಕಾರಿ ಶೀನ ಭಂಡಾರಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್.ಭಂಡಾರಿ ವೇದಿಕೆಯಲ್ಲಿದ್ದರು.
ರಮೇಶ್ ಭಂಡಾರಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ, ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತರು. ಶೀನ ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ 2024-2026ರ ಕಾಲಾವಧಿಯ ನೂತನ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆ ನಡೆಸಲಾಗಿದ್ದು
ಅಧ್ಯಕ್ಷರಾಗಿ ನ್ಯಾಯವಾದಿ ರಂಜಿತ್ ಎಸ್.ಭಂಡಾರಿ, ಗೌರವ ಕಾರ್ಯದರ್ಶಿ ಆಗಿ ಸುನೀಲ್ ಭಂಡಾರಿ, ಕೋಶಾಧಿಕಾರಿ ಆಗಿ ಕಾರ್ತಿಕ್ ಭಂಡಾರಿ ಹಾಗೂ
ಮಹಿಳಾ ಕಾರ್ಯಾಧ್ಯಕ್ಷೆ ಜಯಸುಧಾ ಟಿ.ಭಂಡಾರಿ, ಹಾಗೂ ೧೮ ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಆಯ್ಕೆ ನಡೆಸಲ್ಪಟ್ಟಿತು. .
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶಶಿಧರ್ ಡಿ.ಭಂಡಾರಿ ಮತ್ತು ರಮಾನಂದ ಕೆ.ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ರಂಜಿತ್ ಎಸ್.ಭಂಡಾರಿ ಮತ್ತು ರಾಕೇಶ್ ಎಸ್.ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಯೋಗೇಶ್ ಥಾಣೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ . ರುಕ್ಮಯ ಭಂಡಾರಿ, ಕರುಣಾಕರ ಭಂಡಾರಿ ಕಾಂದಿವಿಲಿ, ಕೇಶವ ಟಿ.ಭಂಡಾರಿ, ಜಯಶೀಲ ಯು.ಭಂಡಾರಿ, ಪ್ರೇಮಾ ಭಂಡಾರಿ, ಉಷಾ ಭಾಸ್ಕರ್, ಪ್ರಕಾಶ್ ಭಂಡಾರಿ, ರೇಖಾ ಎ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಭಂಡಾರಿ ಬಂಧುಗಳು, ಸಂಘದ ಮಾಜಿ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಕುಲದೇವರದ ಕಚ್ಚೂರು ಶ್ರೀ ನಾಗೇಶ್ವರ ದೇವರನ್ನು ಸ್ತುತಿಸಿ ಮಹಾ ಸಭೆ ಆರಂಭಿಸಲಾಯಿತು. ಗತವರ್ಷದಲ್ಲಿ ಅಗಲಿದ ಸರ್ವ ಭಂಡಾರಿ ಭಾಂಧವರು, ಗಣ್ಯರು, ಸಂಘದ ಹಿತೈಷಿಗಳಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ಸಭಿಕರ ಪರವಾಗಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲಲಿತಾ ವಿಶ್ವನಾಥ್ ಭಂಡಾರಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಂಘದ ಉನ್ನತಿಗೆ ಶುಭ ಹಾರೈಸಿದರು.
ಪಲ್ಲವಿ ರಂಜಿತ್ ಭಂಡಾರಿ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಸಮಿತಿಯ ಸದಸ್ಯರುಗಳ ಪ್ರತಿಭಾನ್ವಿತ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಪ್ರಭಾಕರ ಪಿ.ಭಂಡಾರಿ ಕೊಡಮಾಡಿದ ಟಿಪ್ಪಣಿಪುಸ್ತಕಗಳ ನ್ನು ವಿತರಿಸಲಾಯಿತು. ಪುರುಷೋತ್ತಮ ಭಂಡಾರಿ ಧನ್ಯವಾದ ಸಮರ್ಪಿಸಿದರು . ರಾಷ್ಟ್ರಗೀತೆಯೊಂದಿಗೆ ಮಹಾ ಸಭೆ ಸಮಾಪನಗೊಂಡಿತು