ಸಯನ್ ಪರಿಸರದ ತುಳು ಕನ್ನಡಿಗರ ಸಂಸ್ಥೆ ಕನ್ನಡ ಸಂಘ ಸಯನ್ ನ ವತಿಯಿಂದ ಕಲಾಪ್ರಕಾಶ ಪ್ರತಿಷ್ಠಾನ ಇವರ
ಸಂಯೋಜನೆಯಲ್ಲಿ ಆಗಸ್ಟ್ 3, ಶನಿವಾರ, ಸಂಜೆ 5 ಗಂಟೆಗೆ, ಸ್ವಾಮಿ ನಿತ್ಯಾನಂದ ಸಭಾಗೃಹ ಸಯನ್ ಇಲ್ಲಿ “ತುಳುನಾಡ ಬಲಿಯೇಂದ್ರ “(ತುಳುವಿನಲ್ಲಿ ) ಹಾಗೂ “ಅಂಗದ ಸಂದಾನ” “(ಕನ್ನಡ ) ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು.
ಮುಮ್ಮೇಳದಲ್ಲಿ : ಜಬ್ಬಾರ್ ಸಮೋ ಸಂಪಾಜೆ, ಪ್ರೊ. ಪವನ್ ಕಿರಣ್ ಕೆರೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಡಾ. ಮಹೇಶ್ ಸಾಣೂರು.
ಹಿಮ್ಮೆಳದಲ್ಲಿ : ಭಾಗವತ – ಬಲಿಪ ಶಿವ ಶಂಕರ ಭಟ್, ಮದ್ದಳೆ – ಮದುಸೂಧನ್ ಪಾಲನ್, ಚೆಂಡೆ – ಆಶೀಷ್ ದೇವಾಡಿಗ.
ಸದಸ್ಯರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

previous post