23.5 C
Karnataka
April 4, 2025
ಮುಂಬಯಿ

ಕನ್ನಡ ಸಂಘ ಸಯನ್ ನ ಆಯೋಜನೆಯಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ




ಎಲ್ಲರೂ ಒಂದಾಗಿ ಸಂಘವನ್ನು ಮುನ್ನಡೆಸೋಣ – ಡಾ. ಎಂ. ಜೆ. ಪ್ರವೀಣ್ ಭಟ್


ಮುಂಬಯಿ. ಅ. 4. ನಮ್ಮ ಸಂಘದ ಆಯೋಜನೆಯಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟನೆಗೊಂಡಿದ್ದು, ಮುಂದಿನ ಎಲ್ಲಾ ಕಾರ್ಯಕ್ರಮಗಳು, ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಈ ಸಂಧರ್ಭ ಶುಭ ಹಾರೈಕೆಯೊಂದಿಗೆ, ಕನ್ನಡ ಸಂಘ ಸಯನ್ ಆರಂಭವಾಗಿ ಒಂದು ವರ್ಷ ಆಗುತ್ತಿದೆ, ಬರುವ ಅಕ್ಟೊಬರ್ ತಿಂಗಳಲ್ಲಿ ಪ್ರಥಮ ವಾರ್ಷಿಕೋತ್ಸವವನ್ನು ಉತ್ತಮ ರೀತಿಯಲ್ಲಿ ಆಚರಿಸೋಣ. ನಮ್ಮ ಸಂಘದ ಸಲಹೆಗಾರ, ರಾಜಕೀಯ ಮುಂದಾಳು ಭಾಸ್ಕರ ಶೆಟ್ಟಿ ಅವರು ನಮ್ಮ ಸಂಘ ಸ್ವಂತ ಕಛೇರಿ ಹೊಂದುವಂತೆ ಪ್ರಯತ್ನ ಮಾಡಬೇಕು. ಒಳ್ಳೆ, ಒಳ್ಳೆ ಜನರು ನಮ್ಮ ಸಂಘದಲ್ಲಿ ಇದ್ದಾರೆ, ಎಲ್ಲರೂ ಸೇರಿ ಸಂಘವನ್ನು ಮುನ್ನಡೆಸೋಣ ಎಂದು ಕನ್ನಡ ಸಂಘ ಸಯನ್ ನ ಅಧ್ಯಕ್ಷ, ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಡಾ. ಎಂ. ಜೆ. ಪ್ರವೀಣ್ ಭಟ್ ನುಡಿದರು.


ಅವರು ಆಗಸ್ಟ್ 3 ರಂದು ಸಂಜೆ, ಸಯನ್ ನ ವಲ್ಲಭ ಸಭಾಗ್ರಹದಲ್ಲಿ, ಕನ್ನಡ ಸಂಘ ಸಯನ್ ನ ಆಯೋಜನೆಯಲ್ಲಿ, ಕಲಾ ಪ್ರಕಾಶ ಪ್ರತಿಷ್ಟಾನದ ಸಂಯೋಜನೆಯಲ್ಲಿ ನಡೆದ ಸರಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಉಪಸ್ಥಿತರಿದ್ದ ಸಂಘದ ಸಲಹೆಗಾರ, ಹೆಸರಾಂತ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಮಾತಾನಾಡುತ್ತಾ “ಕಳೆದ ದಸರಾ ಸಮಯದಲ್ಲಿ ಕನ್ನಡ ಸಂಘ ಸಯನ್ ಆರಂಭಗೊಂಡಾಗ ಬಹಳ ಸಂತಸ ಪಟ್ಟಿದ್ದೆ. ನಾನು ನನ್ನ ಜೀವನದ 60 ವರ್ಷಗಳನ್ನು ಇದೇ ಪರಿಸರದಲ್ಲಿ ಕಳೆದಿದ್ದೇನೆ.ಈಗ ಸಂಘಕ್ಕೆ ಒಂದು ವರ್ಷ ಆಗುತ್ತಾ ಬಂತು, ನಾನು ರಾಷ್ಟ್ರೀಯ – ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಇದ್ದೇನೆ, ಆದರೆ ಕನ್ನಡ ಸಂಘ ಸಯನ್ ನನ್ನ ಮೆಚ್ಚಿನ ಸಂಸ್ಥೆಯಾಗಿದೆ. ಇಂದು ತಾಳ ಮದ್ದಳೆ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಆಯೋಜಿಸಲಾಗಿದೆ, ಮುಂದಕ್ಕೂ ಎಲ್ಲರ ಸಹಕಾರದಿಂದ ಒಳ್ಳೆ ಕಾರ್ಯಗಳನ್ನು ಮಾಡೋಣ ” ಎಂದು ನುಡಿದರು.
ಈ ಸಂದರ್ಭದಲ್ಲಿ ಸಂಘದ ಎಲ್ಲಾ ಚಟುವಟಿಕೆಗಳಿಗೆ ವಿಶೇಷ ಶ್ರಮಿಸುತಿರುವ ಸಂಸ್ಥಾಪಕ ಹ್ಯಾರಿ ಸೀಕ್ವೆರ ಮತ್ತು ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಹರೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಂಘದ ಗೌರವ ಅಧ್ಯಕ್ಷರಾದ ಅಜಂತಾ ಕ್ಯಾಟರರ್ಸ್ ನ ಶ್ರೀ ಜಯರಾಮ್ ಶೆಟ್ಟಿ ( ಅಜಂತಾ ಕ್ಯಾಟರರ್ಸ್), ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ(ಲಕ್ಷ್ಮಿ ಕ್ಯಾಟರರ್ಸ್ ), ಸದಾನಂದ ಶೆಟ್ಟಿ, ಸಲಹೆಗಾರರಾದ ರಾಜಕಾರಣಿ ಭಾಸ್ಕರ್ ಶೆಟ್ಟಿ, ದಿನೇಶ್ ಶೆಟ್ಟಿ(ದೇವಿ ಪ್ರಸಾದ್ ), ಕೋಶಾಧಿಕಾರಿ ಸುರೇಶ್ ಶೆಟ್ಟಿ, ಸಂಸ್ಥಾಪಕ ಹ್ಯಾರಿ ಸೀಕ್ವೆರ, ಜತೆ ಕಾರ್ಯದರ್ಶಿ ಜಯಶೀಲ ಮೂಲ್ಯ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಶೆಟ್ಟಿ, ಕಾರ್ಯದರ್ಶಿ ಪ್ರಭಾ ಎನ್ ಸುವರ್ಣ, ಸದಸ್ಯರುಗಳಾದ ಚಂದ್ರಿಕಾ ಶೆಟ್ಟಿ, ತ್ರಿವೇಣಿ ಶೆಟ್ಟಿ ಉಪಸ್ಥಿತರಿದ್ದರು.
ಕಲಾ ಪ್ರಕಾಶ ಪ್ರತಿಷ್ಠಾನದ ರೂವಾರಿ ಪ್ರಕಾಶ್ ಶೆಟ್ಟಿ ಸುರತ್ಕಲ್, ಮುಮ್ಮೇಳದ ಕಲಾವಿದರುಗಳಾದ ಜಬ್ಬಾರ್ ಸಮೋ ಸಂಪಾಜೆ, ಪ್ರೊ. ಪವನ್ ಕಿರಣ್ ಕೆರೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಡಾ. ಮಹೇಶ್ ಸಾಣೂರು ಹಾಗೂ ಹಿಮ್ಮೆಳದಲ್ಲಿ ಸಾಥ್ ನೀಡಿದ ಭಾಗವತ – ಬಲಿಪ ಶಿವ ಶಂಕರ ಭಟ್, ಮದ್ದಳೆ – ಮದುಸೂಧನ್ ಪಾಲನ್, ಚೆಂಡೆ – ಆಶೀಷ್ ದೇವಾಡಿಗ ಇವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಡಾ.ಪ್ರವೀಣ್ ಭಟ್ ಮತ್ತು ಪದಾಧಿಕಾರಿಗಳು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪದ್ಮನಾಭ ಶೆಟ್ಟಿ ಪ್ರಾರ್ಥನೆ ಮಾಡಿದರು.
ಸಂಘದ ಗೌರವ ಕಾರ್ಯದರ್ಶಿ ಡಾ ಜಿ. ಪಿ. ಕುಸುಮ ಸ್ವಾಗತಿಸಿ, ಪ್ರಸ್ತಾವನೆಗೈಯುತ್ತಾ “ಸಯನ್, ಧಾರವಿ, ಚುನಭಟ್ಟಿ, ಕೊಲಿವಾಡ, ಕುರ್ಲಾ, ಮಹಿಮ್ – ವಡಲಾ ಪರಿಸರದ ತುಳು -ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಅವರ ಅಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ನವರಾತ್ರಿಯ ಪರ್ವ ದಿನದಂದು ಹುಟ್ಟಿಕೊಂಡ ಕನ್ನಡ ಸಂಫ ಸಯನ್ ಗೆ ಒಂದು ವರ್ಷ ಪೂರ್ತಿಯಾಗುವ ಸಮಯದಲ್ಲಿ ನಾವಿದ್ದೇವೆ. ಸಂಘಕ್ಕೆ ಪರಿಸರದ ತುಳು -ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಮುಂಬರುವ ದಿನಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ನಮ್ಮ ಯೋಜನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಬಳಿಕ ಊರಿನ ಹೆಸರಾಂತ ಕಲಾವಿದರಿಂದ “ತುಳುನಾಡ ಬಲಿಯೇಂದ್ರ” (ತುಳು ) ಮತ್ತು “ಅಂಗದ ಸಂದಾನ” (ಕನ್ನಡ ) ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.
ಸಂಘದ ಸದಸ್ಯರು, ಪರಿಸರದ ತುಳು – ಕನ್ನಡಿಗರು, ಯಕ್ಷಭೀಮಾನಿಗಳು ಉಪಸ್ಥಿತರಿದ್ದು ತುಳು – ಕನ್ನಡ ತಾಳ ಮದ್ದಳೆಯ ರಸದೌತಣ ಆಸ್ವಾದಿಸಿದರು .

Related posts

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರಂಭದ ಉದ್ಘಾಟನೆ

Mumbai News Desk

ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಆಷಾಢ ವೈಭವ ಮತ್ತು ಅಡುಗೆ ಸ್ಪರ್ಧೆ

Mumbai News Desk

ಭಾಯಂದರ್ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  ಅಯ್ಯಪ್ಪ ಸ್ವಾಮಿ ಗೆ ಅಪ್ಪ ಸೇವೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಬಿಂದಿಯಾ ಉದಯ ಮೂಲ್ಯ ಗೆ ಶೇ 94.80 ಅಂಕ.

Mumbai News Desk