
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ®, ಮಂಗಳೂರು, ಹಾಗೂ
ಮುತ್ತುಟ್ ಫೈನಾನ್ಸ್ ಲಿಮಿಟೆಡ್, ಇವರ ಜಂಟಿ ಆಶ್ರಯದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಜೈ ಇಲ್ಲಿ ಸ್ಥನ್ಯ ಪಾನ ಸಪ್ತಾಹ(breast feeding week)ಇದರ ಪ್ರಯುಕ್ತ ಇದೇ ಶನಿವಾರ, 10 ಆಗಸ್ಟ್ 2024 ರಂದು ಬೆಳಿಗ್ಗೆ 11.00 ಕ್ಕೆ, ಸ್ಥನ್ಯ ಪಾನ ಕೇಂದ್ರ( breast feeding center) ಉದ್ಘಾಟನೆ ನಡೆಯಲಿದೆ.
ಈ ಕಾರ್ಯಕ್ರಮವನ್ನು ಡಾ. ರಾಜೇಶ್, ಆರ್‌ಸಿಎಚ್ ಅಧಿಕಾರಿ, ದಕ್ಷಿಣ ಕನ್ನಡ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಸುಜಯ್ ಭಂಡಾರಿ, ಟಿಎಚ್‌ಒ, ದಕ್ಷಿಣ ಕನ್ನಡ, ಶ್ರೀ. ಪ್ರಶಾಂತ್ ಲಕ್ಷ್ಮಣ್ ನಾಯಕ್, ಪ್ರಾದೇಶಿಕ ವ್ಯವಸ್ಥಾಪಕ ಮುತ್ತುಟ್ ಫೈನಾನ್ಸ್, ಮಂಗಳೂರು ಪ್ರಾದೇಶಿಕ, ಡಾ. ಜಯಶ್ರೀ, ವೈದ್ಯಾಧಿಕಾರಿ, ಯುಪಿಎಚ್‌ಸಿ, ಬೆಜೈ, ಶ್ರೀ. ಸಂದೇಶ್ ಶೆಣೊಯ್, ಕ್ಲಸ್ಟರ್ ವ್ಯವಸ್ಥಾಪಕ, ಮುತ್ತುಟ್ ಫೈನಾನ್ಸ್, ಮಂಗಳೂರು ಕ್ಲಸ್ಟರ್, ಸುನೀಲಾ ವಿ., ಶಾಖಾ ವ್ಯವಸ್ಥಾಪಕ, ಮುತ್ತುಟ್ ಫೈನಾನ್ಸ್ ಕೊಟ್ಟಾರ ಶಾಖೆ, ಮತ್ತು ಶ್ರೀಮತಿ ಕಲ್ಪನಾ ಪಿ. ಕೋಟಿಯಾನ್, ಟ್ರಸ್ಟಿ, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ®, ಮಂಗಳೂರು ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಸಂಧರ್ಭದಲ್ಲಿ, ಈ ಕಾರ್ಯಕ್ರಮಕ್ಕೆ ಶುಭ ಕೋರುವಾವರು ಶ್ರೀ. ಪ್ರಕಾಶ್ ಮೂಲತ್ವ ಮತ್ತು ಎಲ್ಲಾ ಸದಸ್ಯರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ®, ಮಂಗಳೂರು ಮತ್ತು ಶ್ರೀ. ಪ್ರಸಾದ್ ಕುಮಾರ್, ವ್ಯವಸ್ಥಾಪಕ-ಸಿಎಸ್ಆರ್, ಮಂಗಳೂರು ಮುತ್ತುಟ್ ಫೈನಾನ್ಸ್, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಜೈ ಹಾಗೂ ಶ್ರೀಮತಿ ಲೋಲಕ್ಷಿ, ಅಧ್ಯಕ್ಷೆ, ಪ್ರತ್ವಿ ಸ್ವಯಂ ಸೇವಕಾರು ಚಾರಿಟೇಬಲ್ ಟ್ರಸ್ಟ್, ಮಂಗಳೂರು ಇವರು ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟಿನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ಇವರು ತಿಳಿಸಿರುತ್ತಾರೆ.