
ಡೊಂಬಿವಲಿ ಸ್ಥಳೀಯ ಕಚೇರಿ 35 ವರ್ಷದಿಂದ ಎಕತೆಯಿಂದ ಸಮಾಜದ ಕೆಲಸ ಮಾಡುತ್ತಿದೆ ಎನ್ನಲು ಹೆಮ್ಮೆಯಾಗುತ್ತಿದೆ– ಚಂದ್ರಹಾಸ ಪಾಲನ್
ಚಿತ್ರ. ಧನಂಜಯ ಪೂಜಾರಿ, ವರದಿ ರವಿ. ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ ನಗರ ಮಹಾರಾಷ್ಟ್ರದ ತುಳುನಾಡೇಂದೆ ಖ್ಯಾತಿಯನ್ನು ಪಡೆದಿದೆ ಎಲ್ಲಾ ಸಮಾಜದ ಜಾತಿ- ಬಾಂಧವರು ಜಾತಿ- ಮತವನ್ನು ಮರೆತು ಅನ್ಯೋನ್ಯತೆಯಿಂದ ಒಂದೇ ತಾಯಿಯ ಮಕ್ಕಳಂತೆ ಡೊಂಬಿವಲಿ ನಗರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಿಲ್ಲವರ ಅಸೋಸಿಯೇಷನ್ ನ 22 ಸ್ಥಳೀಯ ಕಚೇರಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದ ಡೊಂಬಿವಲಿ ಸ್ಥಳೀಯ ಕಚೇರಿ 35 ವರ್ಷದಿಂದ ಎಕತೆಯಿಂದ ಸಮಾಜದ ಕೆಲಸ ಮಾಡುತ್ತಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಈಗಲೂ ಡೊಂಬಿವಲಿ ಸ್ಥಳೀಯ ಕಚೇರಿಯ ಸ್ಥಾಪಕ ಸದಸ್ಯರು ಇಂದಿಗೂ ಪ್ರತಿ ಸಮಿತಿಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ ಎಂದು ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಪಾಲನ್ ನುಡಿದರು.












ಅವರು ಅಗಸ್ಟ್ 4 ರ ಭಾನುವಾರದಂದು ಸಂಜೆ ಡೊಂಬಿವಲಿ ಎಮ್.ಐ.ಡಿ.ಸಿ ಪರಿಸರದ ಹೋಟೆಲ್ ಶಿವಂ ನ ಸಭಾಗ್ರಹದಲ್ಲಿ ಬಿಲ್ಲವರ ಅಸೋಸಿಯೇಷನ್ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅತಿಥಿ ಅಸೋಸಿಯೇಷನ್ ನ ಜತೆ ಕಾರ್ಯದರ್ಶಿ ರವಿ ಸನಿಲ್ ಮಾತನಾಡುತ್ತಾ ಅಕ್ಷಯ ಮಾಸ ಪತ್ರಿಕೆಯ ಸದಸ್ಯ ನೊಂದಣಿ ಸಂದರ್ಭದಲ್ಲಿ ಮೂರನೇ ಸ್ಥಳೀಯ ಕಚೇರಿಯಾಗಿ ಡೊಂಬಿವಲಿ ಸ್ಥಳೀಯ ಕಚೇರಿಯ ನಿರ್ಮಾಣವಾಗಿದೆ. ಸ್ಥಳೀಯ ಕಚೇರಿಯ ನಿರ್ಮಾಣದಲ್ಲಿ ವಿ.ವಿ.ಸುವರ್ಣ, ಸಂಜೀವ ಪಾಲನ್, ಬಿ.ಯಶವಂತ ಸುವರ್ಣ, ಎನ್.ಎಲ್. ಸುವರ್ಣ, ಕೆ.ಭೋಜರಾಜ್ ಇವರ ಕೊಡುಗೆ ಬಹಳಷ್ಠಿದೆ. ಡೊಂಬಿವಲಿ ಸ್ಥಳೀಯ ಕಚೇರಿಯ ಸುಧೀರ್ಘ ಅವದಿಯಲ್ಲಿ ಕೇವಲ ನಾಲ್ಕು ಮಂದಿ ಕಾರ್ಯಾದ್ಯಕ್ಷರಾಗಿದ್ದಾರೆ ಇಲ್ಲಿ ಹುದ್ದೆಗೆ ಯಾವತ್ತೂ ಪೈಪೋಟಿ ನಡೆಯಲಿಲ್ಲ ಎಲ್ಲರೂ ಒಂದಾಗಿ ಒಮ್ಮತದಿಂದ ಕೆಲಸ ಮಾಡಿ ಸ್ಥಳೀಯ ಕಚೇರಿಯನ್ನು ಮಾದರಿ ಕಚೇರಿ ಮಾಡುವಲ್ಲಿ ಶ್ರಮಿಸಿದ್ದಾರೆ, ಸ್ಥಳೀಯ ಕಚೇರಿಯ ಮಹಿಳಾ ವಿಭಾಗವನ್ನು ಸದೃಢ ಗೊಳಿಸುವಲ್ಲಿ ಪ್ರಭಾ ಬಂಗೇರರ ಕೊಡುಗೆ ಅಪಾರವಾಗಿದೆ. ವಿಜೃಂಭಣೆಯ ಗುರು ಪೂರ್ಣಿಮೆ ಪೂಜೆ, ಅದ್ದೂರಿ ವಾರ್ಷಿಕ ಕ್ರೀಡಾಕೂಟವನ್ನು ಅಯೋಜಿಸಿದ ಕೀರ್ತಿ ಡೊಂಬಿವಲಿ ಸ್ಥಳೀಯ ಸಮಿತಿಗೆ ಸಲ್ಲುತ್ತದೆ. ಡೊಂಬಿವಲಿ ಪರಿಸರದ ದಾನಿಗಳ ಸಹಕಾರದಿಂದ ಸ್ಥಳೀಯ ಸಮಿತಿಯ ಪ್ರತಿಯೊಂದು ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ ನಾವೆಲ್ಲ ಸಮಾಜ ಬಾಂಧವರು ಭಿನ್ನಾಭಿಪ್ರಾಯ ಗಳನ್ನು ಮರೆತು ಸಮಾಜದ ಭದ್ರ ಬುನಾದಿಗಾಗಿ ಒಮ್ಮತದಿಂದ ಕೆಲಸಮಾಡಿ ಅಸೋಸಿಯೇಷನ್ ನನ್ನು ಇನ್ನಷ್ಟು ಸದೃಢ ಗೊಳಿಸೋಣಾ ಎಂದರು.
ಅತಿಥಿ ಉದ್ಯಮಿ ರವಿ ಪೂಜಾರಿ ಮಾತನಾಡುತ್ತಾ ಅಸೋಸಿಯೇಷನ್ ನ ಸ್ಥಳೀಯ ಕಚೇರಿ ಸಮಾಜ ಬಾಂಧವರನ್ನು ಒಗ್ಗೂಡಿಸಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಸ್ಥಳೀಯ ಕಚೇರಿಯ ರಜತ ಮಹೋತ್ಸವವನ್ನು ಅದ್ಧೂರಿಯಾಗಿ ಅಚರಿಸಿದ ನಮ್ಮ ಬಿ. ಯಶವಂತ ಸುವರ್ಣ ಇಂದು ನಮ್ಮೊಂದಿಗಿಲ್ಲ ಎಂಬ ಕೊರತೆ ಕಾಡುತ್ತಿದೆ ನಾನು ಅವರನ್ನು ಸದಾ ಗುರು ಸ್ಥಾನದಲ್ಲಿ ಇಟ್ಟಿದ್ದೇನೆ ಎಂದರು.




ಅತಿಥಿ ಪ್ರಭಾ ಬಂಗೇರ ಮಾತನಾಡುತ್ತಾ ನಾವು ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಮಾಜ ಬಾಂದವರನ್ನು ಒಗ್ಗೂಡಿಸಿ ಮಾದರಿ ಕೆಲಸಗಳನ್ನು ಮಾಡಿದ ರೀತಿಯಲ್ಲಿಯೇ ಇಂದಿಗೂ ಕೆಲಸ ಮಾಡಿ ಸ್ಥಳೀಯ ಕಚೇರಿಯನ್ನು ಉನ್ನತ ಮಟ್ಟಕೇರಿಸಿದ್ದಾರೆ ನಿಮ್ಮ ಕೆಲಸ ಕಾರ್ಯಗಳು ಇದೇ ರೀತಿ ಮುಂದುವರಿಯಲಿ ಎಂದರು.
ಗೌರವ ಕಾರ್ಯಾಧ್ಯಕ್ಷ ದೇವರಾಜ ಪೂಜಾರಿ ಮಾತನಾಡುತ್ತಾ ಸ್ಥಳೀಯ ಕಚೇರಿಯ ಅಭಿವೃದ್ಧಿಯಲ್ಲಿ ಸಂಜೀವ ಪಾಲನ್, ಯಶವಂತ ಸುವರ್ಣರ ಪಾಲು ಬಹಳಷ್ಠಿದೆ ನಾವು ಯಾವರೀತಿ ಸಮಾಜ ಸೇವೆ ಮಾಡಬೇಕು ಎಂದು ಮಾರ್ಗದರ್ಶನ ನೀಡಿದವರು ಯಶವಂತ ಸುವರ್ಣ ಸ್ಥಳೀಯ ಕಚೇರಿ ಪ್ರತಿ ವರ್ಷ ಸುಮಾರು 2.50 ಲಕ್ಷಕ್ಕೂ ಮಿಕ್ಕಿ ಶೈಕ್ಷಣಿಕ ಸಹಾಯವನ್ನು ನೀಡುತ್ತಿದೆ ಇಂತಹ ಕೆಲಸ ಕಾರ್ಯ ನಿರಂತರ ನಡೆಯುತ್ತಿರಲಿ ಎಂದರು.
ಜಗದೀಶ್ ನಿಟ್ಟೆ ಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ 35 ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು
ವೇದಿಕೆಯ ಮೇಲೆ ಚಂದ್ರಹಾಸ ಪಾಲನ್, ರವಿ ಸನಿಲ್, ದೇವರಾಜ ಪೂಜಾರಿ, ರಾಮಚಂದ್ರ ಬಂಗೇರ, ರವಿ ಪೂಜಾರಿ, ನವೀನ್ ಅಂಚನ್,ಸತೀಶ್ ಕೋಟ್ಯಾನ್, ಗಿರಿಜಾ ಪಾಲನ್, ಪ್ರಭಾ ಬಂಗೇರ, ರಾಜಶ್ರೀ ಜಿ. ಪೂಜಾರಿ, ಶ್ರೀಧರ ಅಮೀನ್, ಅನಂದ ಪೂಜಾರಿ, ಸಚಿನ್ ಪೂಜಾರಿ ಮೊದಲಾದವರು ಉಪಸ್ಥಿತಿತರಿದ್ದರು
ಕಾರ್ಯದರ್ಶಿ ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.