
ಮಹಿಳೆಯರು ಅಷಾಡ ವೈಭವದಂತಹ ಕಾರ್ಯಕ್ರಮಗಳಲ್ಲಿ ಒಂದಾದಾಗ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತದೆ- ಪ್ರವೀಣ್ ಭೋಜ ಶೆಟ್ಟಿ
ಕಲ್ಯಾಣ್ ಅ.3: ಸಮಾಜ ಬಾಂಧವರು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜ ಉದ್ಧಾರವಾಗುತ್ತದೆ. ಮಹಿಳೆಯರು ಅಷಾಡ ವೈಭವದಂತಹ ಕಾರ್ಯಕ್ರಮಗಳಲ್ಲಿ ಒಂದಾದಾಗ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತದೆ. ಅಂದು ಮಾಜಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ದೂರದೃಷ್ಟಿಯಿಂದ ಇಂದು ನಾವೆಲ್ಲರೂ ಒಂದಾಗಿದ್ದೇವೆ. ಅರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರು ಶಿಕ್ಷಣಕ್ಕಾಗಿ ಪಡುತ್ತಿರುವ ಕಷ್ಟ, ಭವಣೆಗಳನ್ನು ಕಣ್ಣಾರೆ ಕಂಡ ನಮ್ಮ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ ಯವರು ಸಮಾಜ ಅಭಿವೃದ್ಧಿ ಗೊಳ್ಳ ಬೇಕಾದರೆ ಸಮಾಜದ ಮಕ್ಕಳು ಸುಶಿಕ್ಷಿತರಾಗ ಬೇಕೆಂಬ ದೃಷ್ಟಿಯಿಂದ ಸಂಘದ ಮೂಲಕ ಈ ಬೃಹತ್ ಯೋಜನೆ ಕೈಗೊಂಡಿದ್ದಾರೆ. ಆರ್.ಕೆ ಶೆಟ್ಟಿಯವರ ಈ ಚಿಂತನೆಯನ್ನು ಕೊಂಡಾಡಲೇ ಬೇಕು, ಇಂತಹ ದಾನಿಗಳಿಂದಾಗಿ ಸಂಘದ ಯೋಜನೆಗಳು ಪೂರ್ಣಗೊಳ್ಳುತ್ತಿದೆ.ವಿದ್ಯೆ ಜ್ಞಾನ ನೀಡಿದರೆ ಇಂತಹ ಉತ್ತಮ ಕೆಲಸಗಳಿಂದ ನಾವು ಒಗ್ಗಟ್ಟನ್ನು ಬಲಪಡಿಸುತ್ತೇವೆ. ಇಂದು ಬಂಟರ ಸಂಘ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿ ಕೊಂಡಿದೆ. ಕಾರ್ಯಾಧ್ಯಕ್ಷರು ಯಾವ ರೀತಿ ಕೆಲಸ ಮಾಡಬಹುದು ಎನ್ನುವುದನ್ನು ಸುಭೋದ್ ಭಂಡಾರಿ ಯನ್ನು ನೋಡಿ ತಿಳಿಯ ಬಹುದು.ಮಹಿಳಾ ಸದಸ್ಯೆಯರು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ ಇಂತಹ ಅವಕಾಶಗಳಿಂದ ಪ್ರತಿಯೊಬ್ಬರ ಪ್ರತಿಭೆ ಹೊರಬರುತ್ತದೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಪ್ತವೀಣ್ ಭೋಜ ಶೆಟ್ಟಿ ನುಡಿದರು.








ಅವರು ಅಗಸ್ಟ್1 ರಂದು ಸಂಜೆ ಕಲ್ಯಾಣ್ ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ, ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಜರಗಿದ ಆಷಾಢ ವೈಭವ ಮತ್ತು ಅಡುಗೆ ಸ್ಪರ್ಧೆ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸುಭೋದ್ ಭಂಡಾರಿ ಮಾತನಾಡುತ್ತಾ ಮಹಿಳಾ ವಿಭಾಗ ಪ್ರಾದೇಶಿಕ ಸಮಿತಿಗಳ ಬೆನ್ನೆಲುಬು ಅಷಾಡ ವೈಭವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮಹಿಳಾ ವಿಭಾಗದ ಪದಾಧಿಕಾರಿಗಳಿಗೆ ಹಾಗೂ ಮಹಿಳಾ ಸದಸ್ಯೆಯರಿಗೆ ಅಭಿನಂದನೆಗಳು. ಮಹಿಳಾ ವಿಭಾಗದ ಪ್ರತಿಯೊಂದು ಕಾರ್ಯಕ್ರಮ ಗಳಿಗೆ ನಮ್ಮ ಸಹಕಾರ ಸದಾ ಇದೆ. ಸಮಾಜ ಬಾಂಧವರ ಹಿತದೃಷ್ಟಿಯಿಂದ ಯಾವರೀತಿಯಲ್ಲೂ ಕೆಲಸ ಮಾಡ ಬಹುದು ಎಂದು ನಮಗೆ ತೋರಿಸಿ ಕೊಟ್ಟವರು ಡಾ. ಆರ್.ಕೆ. ಶೆಟ್ಟಿಯವರು. ಸಂಜೀವಿನಿ ಯೋಜನೆ ಪ್ರಾದೇಶಿಕ ಸಮತಿಯ ಸಮಾಜ ಬಾಂಧವರಿಗೆ ಉಪಯೋಗವಾಗಲಿದೆ ಎಂದರು.
ಸಂಘದ ಕಾರ್ಯದರ್ಶಿ ಸಂಜೀವಿನಿ ಯೋಜನೆಯ ರೂವಾರಿ ಸಂಜೀವಿನಿ ಯೋಜನೆ ಉದ್ಘಾಟಿಸಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯ ಕಟ್ಟ ಕಡೆಯ ವ್ಯಕ್ತಿಗೆ ಈ ಯೋಜನೆ ಸಹಾಯ ಮಾಡಲಿದೆ ಅರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಮನೆಗಳನ್ನು ಗುರಿತಿಸಿ ಅವರ ವಿದ್ಯಾಭ್ಯಾಸ ಮತ್ತು ದತ್ತು ಸ್ವೀಕರಿಸಿ ಅವರಿಗೆ ಸಹಾಯ ಮಾಡಲಿದೆ ಇದರ ಲಾಭವನ್ನು ಸಮಾಜ ಬಾಂಧವರು ಪಡೆಯ ಬಹುದು ಎಂದರು.








ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯು ಉತ್ತಮ ಕೆಲಸಗಳ ಮೂಲಕ ಈಗಾಗಲೇ ಹೆಸರುವಾಸಿಯಾಗಿದೆ. ಮಹಿಳಾ ವಿಭಾಗ ಅಯೋಜಿಸಿದ ಅಷಾಡ ವೈಭವ ಹಾಗೂ ಸ್ಪರ್ಧೆ ಉತ್ತಮ ರೀತಿಯಲ್ಲಿ ಜರಗಿದೆ ಎನ್ನಲು ಸಂತೋಷವಾಗುತ್ತಿದೆ ಎಂದರು.
ಪೂರ್ವ ವಲಯದ ಪ್ರಾದೇಶಿಕ ಸಮಿತಿಗಳ ಸಮನ್ವಯಕರಾದ ಸುಕುಮಾರ್ ಶೆಟ್ಟಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮ ಶಿಸ್ತು ಬದ್ಧವಾಗಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ಬಂಟರ ಸಂಘದಿಂದ ಸಿಗುವ ಸೌಲಭ್ಯಗಳು ಹಾಗೂ ಈಗ ತಾನೇ ಉದ್ಘಾಟನೆ ಗೊಂಡ ಸಂಜೀವಿನಿ ಯ ಸೌಲಭ್ಯ ಕಾರ್ಯಾಧ್ಯಕ್ಷರಾದ ಸುಭೋದ್ ಭಂಡಾರಿ ಮತ್ತು ಶೋಭಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಮಾಜ ಬಾಂಧವರಿಗೆ ಸಿಗುವಂತಾಗಲಿ ನಿಮ್ಮ ಪ್ರತಿಯೊಂದು ಕಾರ್ಯಕ್ರಮ ಕ್ಕೆ ನನ್ನ ಸಹಕಾರ ಸದಾ ಇದೆ ಎಂದರು.
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎ. ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಕ್ಕೆ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಮತ್ತು ಎಲ್ಲಾ ಮಹಿಳೆಯರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಇದೇ ರೀತಿಯ ಸಹಕಾರವನ್ನು ಬಯಸುತ್ತೇನೆ ಎಂದರು.
ಇದೇ ಸಂದರ್ಬದಲ್ಲಿ ಸಂಘದ ಕಾರ್ಯದರ್ಶಿಯವರಾದ ಡಾ. ಆರ್.ಕೆ. ಶೆಟ್ಟಿ ಯವರ ಯೋಜನೆಯಾದ ‘ ಸಂಜೀವಿನಿ ‘ ದತ್ತು ಸ್ವೀಕಾರ ಯೋಜನೆಯನ್ನು ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಆಟಿ ಕಳಂಜ ಪ್ರದರ್ಶನ ಗೊಂಡಿತು ಪ್ರಾದೇಶಿಕ ಸಮಿತಿಯ ಮಕ್ಕಳು, ಮಹಿಳೆಯರಿಂದ ವಿವಿಧ ನೃತ್ಯ, ಜಾನಪದ ಗೀತೆ, ಗಾಯನ ಜರಗಿತು. ಕು. ದ್ರುವಿಕಾ ಶೆಟ್ಟಿ ಅಟಿ ತಿಂಗಳ ವೈಶಿಷ್ಟ್ಯಗಳನ್ನು ತಿಳಿಸಿ ಗಣ್ಯರ ಪ್ರಶಂಸೆಗೆ ಪಾತ್ರಳಾದಳು.
ಅಡುಗೆ ಸ್ಪರ್ಧೆಯ ತೀರ್ಪುಗಾರರಾಗಿ ಕೃಷ್ಣಿ ಎಮ್. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ ಮತ್ತು ಸುಲೋಚನಾ ಎಸ್. ಶೆಟ್ಟಿ ಉಪಸ್ಥಿತಿತರಿದ್ದರು
ಅತಿಥಿಗಳನ್ನು, ದಾನಿಗಳನ್ನು, ತೀರ್ಪುಗಾರರನ್ನು, ಬಂಟರ ಸಂಘದ ಇತರ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಯಿತು.
ಅಡುಗೆ ಸ್ಪರ್ಧೆಯ ವಿಜೇತರಿಗೆ ವೇದಿಕೆಯಲ್ಲಿ ಬಹುಮಾನ ನೀಡಿ ಸತ್ಕರಿಸಲಾಯಿತು
ಇದಕ್ಕೂ ಮೊದಲು ಜಯಶ್ರೀ ಸತೀಶ್ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆ ಮೇಲೆ ಸಂಘದ ಅಧ್ಯಕ್ಷರಾದ ಪ್ರವೀಣ್ ಬಿ. ಶೆಟ್ಟಿ, ಸುಬ್ಬಯ್ಯ ಎ. ಶೆಟ್ಟಿ, ಡಾ. ಆರ್.ಕೆ. ಶೆಟ್ಟಿ, ಆರತಿ ಯೋಗೇಶ್ ಶೆಟ್ಟಿ, ಸುಭೋದ್ ಡಿ.ಭಂಡಾರಿ, ಸುಕುಮಾರ್ ಎನ್. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಶೋಭಾ ಎ. ಶೆಟ್ಟಿ, ಜಯಶ್ರೀ ಎಚ್. ಶೆಟ್ಟಿ, ಪ್ರಮೀತಾ ಆರ್. ಶೆಟ್ಟಿ, ಕವಿತಾ ಎನ್. ಶೆಟ್ಟಿ, ಯಶೋಧ ಎಸ್. ಶೆಟ್ಟಿ, ಮಹಾಲಕ್ಷ್ಮಿ ಎಸ್. ರೈ ಮತ್ತಿತರರು ಉಪಸ್ಥಿತರಿದ್ದರು.
ಸುಜಾತ ಎಸ್. ಶೆಟ್ಟಿ ಮತ್ತು ಪ್ರವೀಣಾ ಎಸ್. ಹೆಗ್ಡೆ ಅತಿಥಿ ಗಣ್ಯರನ್ನು ಪರಿಚಯಿಸಿದರು, ತಿಂಡಿ- ತಿನಸುಗಳನ್ನು ತಂದವರ ಹೆಸರನ್ನು ಸುಪ್ರೀತ ಜಿ. ಶೆಟ್ಟಿ ಓದಿದರು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಮೀತಾ ಆರ್. ಶೆಟ್ಟಿ ನಿರೂಪಿಸಿದರು ಸಭಾ ಕಾರ್ಯಕ್ರಮವನ್ನು ರೋಹಿಣಿ.ಡಿ. ಶೆಟ್ಟಿ ನಿರೂಪಿಸಿದರೆ ಪ್ರಮೀತಾ ಆರ್. ಶೆಟ್ಟಿ ವಂದಿಸಿದರು.
ಅಡುಗೆ ಸ್ಪರ್ಧೆಯಲ್ಲಿ ವೀಜೆತರು
ಕೋರಿ ಸುಕ್ಕ ಪ್ರಥಮ ಪ್ರವೀಣಾ ಪಿ. ಶೆಟ್ಟಿ, ದ್ವೀತಿಯ ಸರಿತಾ ಎ. ಶೆಟ್ಟಿ, ಎಟ್ಟಿ ಚಟ್ನಿ ಪ್ರಥಮ ಮೂಕಾಂಬಿಕಾ ಪಿ. ಶೆಟ್ಟಿ, ದ್ವೀತಿಯ ಜಯಶ್ರೀ ಕೆ. ಶೆಟ್ಟಿ, ಪತ್ರಡ್ಡೆ ಪ್ರಥಮ ಮಮತಾ ಎಸ್. ಶೆಟ್ಟಿ, ದ್ವೀತಿಯ ರೋಹಿಣಿ ಡಿ. ಶೆಟ್ಟಿ, ಮೆತ್ತೆ ಗಂಜಿ ಪ್ರಥಮ ಉಷಾ ಎ. ಶೆಟ್ಟಿ, ದ್ವೀತಿಯ ಪ್ರವೀಣಾ ಪಿ. ಶೆಟ್ಟಿ,
ಕಳೆದ 12 ವರ್ಷಗಳಿಂದ ಪ್ರಾದೇಶಿಕ ಸಮಿತಿ ಮತ್ತು ಸಂಘದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಭಾಗ್ಯದಿಂದ ಇಂದು ಸಮಾಜ ನನ್ನನ್ನು ಗುರುತಿಸುವಂತಾಗಿದೆ. ಬಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಭೋದ್ ಭಂಡಾರಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಇಂತಹ ಕಾರ್ಯಕ್ರಮ ನಿರಂತರ ನಡೆಯುತ್ತಿರಲಿ—ಸುಬ್ಬಯ್ಯ ಎ.ಶೆಟ್ಟಿ ( ಮುಖ್ಯ ಅತಿಥಿ)
ಹಿಂದಿನ ದಿನಗಳಲ್ಲಿ ಅಟಿ ತಿಂಗಳು ಬಹಳ ಕಷ್ಟದ ತಿಂಗಳು ಅದರೆ ಅಟಿ ತಿಂಗಳ ಸಂಪ್ರದಾಯ ಗಳಿಗೆ ವಿಶೇಷ ಮಹತ್ವಗಳಿವೆ ಇಂದಿನ ಮಕ್ಕಳಿಗೆ ಈ ಸಂಪ್ರದಾಯ ತಿಳಿಸುವ ಅಗತ್ಯ ಬಹಳಷ್ಠಿದೆ — ಆರತಿ ಯೋಗೇಶ್ ಶೆಟ್ಟಿ ( ಅತಿಥಿ)