April 1, 2025
ಸುದ್ದಿ

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇದರ ಜಂಟಿ ಆಶ್ರಯದಲ್ಲಿ ಸ್ಥನ್ಯಪಾನ ಶಿಬಿರಕ್ಕೆ ಚಾಲನೆ.

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇವುಗಳ ಜಂಟಿ ಆಶ್ರಯದಲ್ಲಿ ಬಿಜೈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥನ್ಯಪಾನ ಸಪ್ತಾಹ ಪ್ರಯುಕ್ತ ಆಗಸ್ಟ್ 10 ರಂದು ಬೆಳಿಗ್ಗೆ 11 ಗಂಟೆಗೆ ಸ್ಥನ್ಯಪಾನ ಕೇಂದ್ರವನ್ನು ಡಾಕ್ಟರ್ ರಾಜೇಶ್, ಆರ್ ಸಿ ಎಚ್ ಆಫೀಸರ್,ದಕ್ಷಿಣ ಕನ್ನಡ ಇವರು ಉದ್ಘಾಟಿಸಿ ಸ್ತನ್ಯಪಾನ ಮಹತ್ವವನ್ನು ವಿವರಿಸಿದರು. ತಾಯಿ, ಮಗು ಮನೆಯಿಂದ ಹೊರಗಡೆ ಇರುವಾಗ ಮಗುವಿನ ಹಾಲು ಕೊಡುವ ವ್ಯವಸ್ಥೆ ಎಲ್ಲೂ ಇರುವುದಿಲ್ಲ, ಈ ನಿಟ್ಟಿನಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಮುತ್ತೂಟ್ ಫೈನಾನ್ಸ್ ಜಂಟಿಯಾಗಿ ಸೇರಿ ಸುಂದರವಾದ ಕೊಠಡಿ ನಿರ್ಮಿಸಿ ಕೊಟ್ಟಿದ್ದಾರೆ ಎಂದು ಉದ್ಘಾಟನೆ ಮಾತಿನಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಸುಜಯ್ ಭಂಡಾರಿ, ಟೀ ಹೆಚ್ ಓ ದಕ್ಷಿಣ ಕನ್ನಡ ಮಂಗಳೂರು,ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟಿನ ಕಲ್ಪನಾ ಪಿ ಕೋಟ್ಯಾನ್,ಮುತ್ತೂಟ್ ಫೈನಾನ್ಸ್ ಪ್ರಶಾಂತ್ ಲಕ್ಷ್ಮಣ್ ನಾಯಕ್, ಸಂದೇಶ್ ಶೇನೋಯ್, ಮಿಸ್ ಸುನಿಲಾ, ಡಾಕ್ಟರ್ ಜಯಶ್ರೀ ಮೆಡಿಕಲ್ ಆಫೀಸರ್ ಯು ಪಿ ಹೆಚ್ ಸೀ ಬಿಜೈ, ಉಪಸ್ಥಿತರಿದ್ದರು, ಕಾರ್ಯಕ್ರಮದ ಪ್ರಾಸ್ತವಿಕ ಭಾಷಣ ಮುತ್ತೂಟ್ ಫೈನಾನ್ಸ್ ಮ್ಯಾನೇಜರ್, ಶ್ರೀ ಪ್ರಸಾದ್ ಕುಮಾರ್ ಮಾಡಿದರು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟಿನ, ಟ್ರಸ್ಟಿ ಶೈನಿ ಸ್ವಾಗತ ಮಾಡಿದರು, ವಂದನಾರ್ಪಣೆಯನ್ನು ಶ್ರೀಮತಿ ಗುಣವತಿ ನೆರವೇರಿಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ಶ್ರೀಮತಿ ಲೋಲಾಕ್ಷಿ , ಅಧ್ಯಕ್ಷರು, ಪೃಥ್ವಿ ಸ್ವಯಂಸೇವಕ ಟ್ರಸ್ಟ್, ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಕಾರ್ಯಕ್ರಮಕ್ಕೆ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಮುತ್ತೂಟ್ ಫೈನಾನ್ಸ್ ನ ಎಲ್ಲ ಸಿಬ್ಬಂದಿಗಳು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಅಕ್ಷತಾ ಕದ್ರಿ ನೆರವೇರಿಸಿದರು.

Related posts

ಬಂಟರ ಸಂಘ ಮುಂಬೈಯ ನೂತನ ಟ್ರಸ್ಟಿ   ಉಳ್ತೂರು  ಮೋಹನ್ದಾಸ್ ಶೆಟ್ಟಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಭಿನಂದನೆ.

Mumbai News Desk

ಪಾಲ್ಘರ್ ರಘು ಶೆಟ್ಟಿ ನಿಧನ.

Mumbai News Desk

ಡಾ. ಭರತ್ ಕುಮಾರ್ ಪೊಲಿಪು ಅವರಿಗೆ ಮಾತೃ ವಿಯೋಗ.

Mumbai News Desk

ಸಚಿವೆ ಲಕ್ಶ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ : ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬಂಧನ

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk

ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಅಮೃತ ಮಹೋತ್ಸವ ‘ಶ್ರೀ ದುರ್ಗಾಮೃತ’ ಸ್ಮರಣ ಸಂಚಿಕೆ ಬಿಡುಗಡೆ

Mumbai News Desk