23.5 C
Karnataka
April 4, 2025
ಪ್ರಕಟಣೆ

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ)* ಪುನರ್ ನಿರ್ಮಾಣ, ಅ 15.:   ಗೋರೆಗಾಂವ್ ಪೂರ್ವದಲ್ಲಿ ನಂದಾದೀಪ ಆಡಿಟೋರಿಯಮ್ ನಲ್ಲಿ ಮನವಿಪತ್ರ ಬಿಡುಗಡೆ.



 

——

ಪ್ರಕೃತಿರಮ್ಯ ಸಸಿಹಿತ್ಲು’ವಿನ ಸುಂದರ ತಾಣದಲ್ಲಿ ಸಪ್ತ ದುರ್ಗೆಯರ ಸಮ್ಮುಖದಲ್ಲಿ ನೆಲೆ ನಿಂತಿರುವ ಕ್ಷೇತ್ರ ಸಸಿಹಿತ್ಲು ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ. ಅನಾದಿಕಾಲದಲ್ಲಿ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ಕೈಯಾರೆ ಕಟ್ಟಿದ ಗರೋಡಿ ಎನಿಸಿದ ಈ ಕ್ಷೇತ್ರ ಇದೀಗ ದೈವಸ್ಥಾನವಾಗಿದ್ದು, ಮತ್ತೆ ಗರೋಡಿಯಾಗಬೇಕೆಂದು ಉಳ್ಳಾಯ ಪರಿವಾರ ಶಕ್ತಿಗಳು ಅಭಯ ನೀಡಿದ ಪ್ರಕಾರ ಮತ್ತೆ ಗರೋಡಿ ನಿರ್ಮಿಸಲು ಸರ್ವ ಸಿದ್ಧತೆ ನಡೆಸಿ ಮುಂದಡಿ ಇಡಲಾಗಿದೆ.

ಕ್ಷೇತ್ರದ ಹಿನ್ನೆಲೆ :- ತುಳುನಾಡಿನಲ್ಲಿ ಕೋಟಿ ಚೆನ್ನಯರಿಗೆ ಸಮಬಲರೆನಿಸಿದ ಕಾಂತಾಬಾರೆ ಬೂದಾಬಾರೆಯರು ಮುಲ್ಕಿ ಒಂಭತ್ತು ಮಾಗಣೆಯ ಕೊಲ್ಲೂರು ತಿರ್ತ ಗುಡ್ಡೆಯಲ್ಲಿ ತಾಕಟೆಮರದ ನೆರಳಿನಲ್ಲಿ ಆಚು ಬೈದೆದಿಯಿಂದ ಸೀರೆಯ ನೇಣೆ ಹಾಕಿ ಬೆಳೆದರೆಂದು ಇತಿಹಾಸ ಹೇಳುತ್ತದೆ. ಆ ಬಳಿಕ ದೊಡ್ಡವರಾದಾಗ ರಾತ್ರಿ ಬೆಳಗಾಗುವುದರೊಳಗೆ ಗರೋಡಿ ಕಟ್ಟುವೆವೆಂದು ಸಾಕು ತಾಯಿ ಪುಲ್ಲ ಪೆರ್ಗತಿಯಿಂದ ಅಪ್ಪಣೆ ಪಡೆದು ಮುಲ್ಕಿ ಸೀಮೆಯ ಸಾವಂತ ಅರಸರನ್ನು ಭೇಟಿಯಾಗಿ ಸಸಿಹಿತ್ಲುವಿಗೆ ಬರುವ ಸಂದರ್ಭದಲ್ಲಿ ಪಡುಪಣಂಬೂರು ಮುಟ್ಟಿಕಲ್ಲಿನಿಂದ ಹಾಸು ಕಲ್ಲನ್ನು ಹಿಡಿದುಕೊಂಡು ಬರುವಾಗ ದಾರಿ ಮಧ್ಯೆ ನಂದಿನಿ ನದಿಗೆ ಇಳಿಯುತ್ತಾರೆ. ಈ ಸಮಯದಲ್ಲಿ ನದಿಗೆ ತಾಗಿಕೊಂಡಿರುವ ಹೊಯಿಗೆಗುಡ್ಡೆಯ ಗೌರಿ ದೇವಸ್ಥಾನದ ಗೌರಿದೇವಿ ಇವರ ಸಾಮಥ್ರ್ಯ ಪರಿಶೀಲಿಸಲು ಕಳ್ಳ ಕೋಳಿಯಾಗಿ ಕೂಗುತ್ತಾರೆ. ರಾತ್ರಿ ಬೆಳಗಾಗುವುದರೊಳಗೆ ಗರೋಡಿ ಕಟ್ಟುವೆವು ಎಂಬ ಮಾತು ಮುರಿದು ಬಿದ್ದಿದ್ದನ್ನು ತಿಳಿದ ಅವರು ಉಳಿದ ಮೂರು ಕಲ್ಲುಗಳನ್ನು ಕಂಕುಳಲ್ಲಿ ಹಿಡಿದುಕೊಂಡು ಸಸಿಹಿತ್ಲುವಿಗೆ ಬಂದು ಸಮತ್ತಟ್ಟಾಗಿದ್ದ ಭೂಮಿಯಲ್ಲಿ ತಮ್ಮ ಸುರಿಯದಿಂದ ಬಾವಿ ನಿರ್ಮಿಸಿ ನೀರು ಚಿಮ್ಮಿದಾಗ ಅದರ ಮೇಲೆ ತಾವು ತಂದ ಮೂರು ಹಾಸುಕಲ್ಲುಗಳನ್ನು ಹಾಸುತ್ತಾರೆ. ಆ ಬಳಿಕ ಗರೋಡಿಯನ್ನು ಅರ್ಧದಲ್ಲೇ ಮುಗಿಸುವಾಗ ಕೈಲಾಸವಾಸಿ ಈಶ್ವರ ದೇವರು ಉಳ್ಳಾಯ ರೂಪದಲ್ಲಿ ಗರೋಡಿಗೆ ಪ್ರವೇಶಿಸುತ್ತಾರೆ. ಉಳ್ಳಾಯ ಬಂದ ಮೇಲೆ ನಮಗೇನು ಇಲ್ಲಿ ಕೆಲಸವೆಂದು ಭಾವಿಸಿದ ಬಾರೆಯರು ಪಡುವಣ ದಿಕ್ಕಿಣ ಗೋಡೆ ಒಡೆದು ಮತ್ತೆ ಪುಲ್ಲೋಡಿ ಬೂಡಿಗೆ ವಾಪಾಸಾಗುತ್ತಾರೆ. ಈ ಹೊತ್ತಿನಲ್ಲಿ ಸಸಿಹಿತ್ಲು ನಾಲ್ಕು ಕರೆ ಹದಿನಾರು ಗುರಿಕಾರರಲ್ಲಿ ಪ್ರಧಾನರೆನಿಸಿದ ಕಾಂತುಲಕ್ಕಣ ಗಡಿಪ್ರದಾನರ ಮನೆಯಲ್ಲಿ ಸೇವೆ ಪಡೆಯುತ್ತಿದ್ದ ಜಾರಂದಾಯ, ಜುಮಾದಿ, ಕೊಡಮಣಿತ್ತಾಯ, ಮೂಲಮಹಿಷಂದಾಯ ಶಕ್ತಿಗಳ ಜೊತೆಗೆ ಸಸಿಹಿತ್ಲುವಿನ ತೋಚೋಡಿ ಕುಟುಂಬದಿಂದ ಸವಾರಿ ಬಂದ ಓಡ್ಯಂತ್ತಾಯ ದೈವ ಗರೋಡಿಯತ್ತ ಬರುತ್ತವೆ. ಇವರನ್ನು ಕಂಡ ಉಳ್ಳಾಯ ದೇವರು ಓಡ್ಯಂತ್ತಾಯನಿಗೆ ಇಲ್ಲಿಯ ಅಧಿಕಾರವನ್ನು ಪರಿವಾರ ಶಕ್ತಿಗಳ ಜೊತೆಗೂಡಿ ನೀನು ನಿಭಾಯಿಸು, ನಾನು ಅಡ್ಕದ’ಪಾಲೆ, ತೋಡ’ಪಿಂಗಾರ ಇರುವ ಸಂಪು’ಲ್ಲ ಜಾಗಕ್ಕೆ ಹೋಗುತ್ತೇನೆ ಎಂದು ಈಗ ಎರ್ಮಾಳು ಜಪ್ಪು, ಖಂಡೇವು ಅಡೆಪು ಎಂದು ಪ್ರಸಿದ್ಧಿಯಾಗಿರುವ ಖಂಡೇವುಗೆ ಹೋಗುತ್ತಾರೆ. 

ಸಸಿಹಿತ್ಲುವಿನಿಂದ ಖಂಡೇವುಗೆ ಹೋಗುವಾಗ ನಾನು ವರ್ಷಂಪ್ರತಿ ಇಲ್ಲಿನ ನೇಮೋತ್ಸವ ಸಂದರ್ಭ ಮದುಮಗನ ರೂಪದಲ್ಲಿ ಇಲ್ಲಿನ ಭಂಡಾರ ಬರುವಾಗ ನನ್ನ ಬಾಳು ಭಂಡಾರವನ್ನು ಐವರು ಶಕ್ತಿಗಳ ಪರಿವಾರ ಸಮೇತ ಇಲ್ಲಿಗೆ ಬರುತ್ತೇನೆ ಎಂಬ ಅಭಯದಂತೆ ಇಂದಿಗೂ ಇಲ್ಲಿನ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ಈ ಪರಂಪರೆ ಮುಂದುವರಿಯುತ್ತಿದೆ.

ಅಂದು ಉಳ್ಳಾಯ ಖಂಡೇವುಗೆ ಸಾಗಿದಾಗ ಅವರನ್ನು ಅತ್ಯಂತ ವಿಧೇಯತೆಯಿಂದ ಕಡವಿನಲ್ಲಿ ಕರೆದೊಯ್ದ ಸಸಿಹಿತ್ಲುವಿನ ಕಡಪುರ ಮನೆ ಇಂದಿಗೂ ಉಳ್ಳಾಯನ ಭಂಡಾರವನ್ನು ದೋಣಿಯಲ್ಲಿ ಕರೆತರುವ ಅಧಿಕಾರ ಪಡೆಯುತ್ತದೆ. ಮುಕ್ಕ ಮಿತ್ರ ಪಟ್ಣದ  ಮೊಗವೀರ ಕುಟುಂಬ ಉಳ್ಳಾಯನ ಮೆರವಣಿಗೆ ಏಳು ಕಿಲೋ ಮೀಟರ್ ದೂರ ಹಾದಿಯಲ್ಲಿ ಸಾಗುವಾಗ ಪಲ್ಲಕ್ಕಿಯನ್ನು ಹೊತ್ತುತರುವ ಅಧಿಕಾರ ಪಡೆಯುತ್ತದೆ. ಭಂಡಾರ ಜಾಗಕ್ಕೆ ಬಂದ ಮೇಲೆ ಕಾಂತುಲಕ್ಕಣ ಗಡಿಪ್ರದಾನರ ಮನೆ ದೈವಗಳು ಉಳ್ಳಾಯ ಪರಿವಾರ ಶಕ್ತಿಗಳ ಜೊತೆಗೆ ಮುಖಾಮುಖಿಯಾಗಿ ಕೊಡಿಯೇರಿ (ಧ್ವಜಸ್ತಂಭ) ಇಲ್ಲಿನ ನೇಮೋತ್ಸವ ಆರಂಭವಾಗುತ್ತದೆ. ಹಕ್ಕಿಗಳು ಗೂಡಿನಿಂದ ಹೊರಬಂದು ಚಿಲಿಪಿಲಿಗುಟ್ಟುವ ಮುಂಜಾವದ ಸಮಯದಲ್ಲಿ ಉಳ್ಳಾಯನಿಗೆ ನೇಮೋತ್ಸವ ನಡೆದರೆ ಅಪರಾಹ್ನ ಓಡ್ಯಂತ್ತಾಯನಿಗೆ ಸೇವೆ ನಡೆಯುತ್ತದೆ. ಆ ಬಳಿಕ ಇತರ ಎಲ್ಲಾ ಪರಿವಾರ ಶಕ್ತಿಗಳಿಗೆ ಕಟ್ಟುಕಟ್ಟಲೆಯ ನೇಮ ನಡೆಯುತ್ತದೆ. ಆ ಬಳಿಕ ಮರುದಿನ ಧ್ವಜಾ ಅವರೋಹಣವಾಗಿ ಖಂಡೇವಿನ ಉಳ್ಳಾಯನ ಭಂಡಾರ ಮತ್ತೆ ಖಂಡೇವಿಗೆ ವಾಪಾಸಾಗುತ್ತದೆ. ಈ ಸಂದರ್ಭದಲ್ಲಿ ಗಂಜಿ ಮತ್ತು ಗುಜ್ಜೆ ಪಲ್ಯದಿಂದ ಅಲ್ಲಿನ ಮುಕ್ಕಾಲಿಯವರು ನೀಡುವ ಆತಿಥ್ಯ ಬಿಲ್ಲವ, ಮೊಗವೀರ, ಮತ್ತು ಬಂಟ ಸಮಾಜದ ಸಂಬಂದಕ್ಕೆ ಸಾಕ್ಷಿಯಾಗಿದೆ. 

ಈ ಕ್ಷೇತ್ರದ ಜೀರ್ಣೋದ್ಧಾರದ ನಿಟ್ಟಿನಲ್ಲಿ ಮನವಿಪತ್ರ ತಯಾರಾಗಿದ್ದು, ಅಗಸ್ಟ್ 22 ಮತ್ತು 23 ರಂದು ಕ್ಷೇತ್ರದಲ್ಲಿ ಸಂಕೋಚ ನಡೆದು ದೈವ ದರ್ಶನದ ಮೂಲಕ ಶಕ್ತಿಗಳನ್ನು ಬಾಲಾಲಯದಲ್ಲಿ ಆವಾಹಣೆಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 15 ರಂದು ಮುಂಬಯಿ ಸಮಿತಿಯ ಆಶ್ರಯದಲ್ಲಿ ನಂದಾದೀಪ ಆಡಿಟೋರಿಯಮ್, ಅಭಿನವ ಶೈಕ್ಷಣಿಕ ಮಂಡಲ್, ಜೆ.ಬಿ.ನಗರ್, ಗೋರೆಗಾಂವ್ ಪೂರ್ವದಲ್ಲಿ ಮನವಿಪತ್ರ ಬಿಡುಗಡೆ ಸಮಾರಂಭ ನಡೆಯಲ್ಲಿದ್ದು, ಈ ಸಮಾರಂಭದ ಅಧ್ಯಕ್ಷತೆಯನ್ನು ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ ಕರ್ಕೇರರವರು ವಹಿಸಲಿದ್ದಾರೆ. ಪೊವೈಯಿಯ ಮಹಾಶೇಷ ರುಂಡಮಾಲಿನಿ ಸುವರ್ಣ ದೇವಸ್ಥಾನದ ಧರ್ಮದರ್ಶಿ ಸುವರ್ಣ ಬಾಬರವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಆಗಮಿಸಲ್ಲಿದ್ದಾರೆ. ಗೌರಾವಾನ್ವಿತ ಅತಿಥಿಗಳಾಗಿ ಸಾಕಿನಾಕ ಜೆರಿಮೆರಿಯ ಉಮಾಮಹೇಶ್ವರಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ಎನ್ ಉಡುಪ, ಮುಂಬಯಿ ಮಹಿಮ್ ಬಿಜೆಪಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಮನೋಜ್ ನಾಗ್‍ಪಾಲ್, ಡಿ.ಜೆ ಮೀಡಿಯ ಪ್ರಿಂಟ್ ಇದರ ಆಡಳಿತ ನಿರ್ದೇಶಕ ದಿನೇಶ್ ಕೋಟ್ಯಾನ್, ಮುಂಬಯಿ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಬಿಲ್ಲವರ ಎಸೋಶಿಯೇಶನ್ ಇದರ ಉಪಾಧ್ಯಕ್ಷ ಕದ್ರಿ ಸುರೇಶ್ ಕುಮಾರ್, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಲ್ಚಡ, ಘೋಡ್ ಬಂದರ್ ಕನ್ನಡ ಸಂಘ ಥಾಣೆ ಇದರ ಅಧ್ಯಕ್ಷ ಹರೀಶ್ ಡಿ ಸಾಲ್ಯಾನ್, ಉದ್ಯಮಿ ವಸಂತ ಸುವರ್ಣ, ಹೊಟೇಲ್ ಉದ್ಯಮಿ ಪದ್ಮನಾಭ್ ಬಿ ಅಮೀನ್ ಸಸಿಹಿತ್ಲು, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಶಕುಂತಲಾ ಎಮ್ ಕೋಟ್ಯಾನ್, ಉದ್ಯಮಿ ಸಾಹಿತಿ ಪೇತ್ರಿ ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸವಿತಾ ಪೂಜಾರಿ, ಸಮಾಜಸೇವಾ ಕಾರ್ಯಕರ್ತೆ ಶಶಿಕಲಾ ಎಸ್ ಕೋಟ್ಯಾನ್ ಗೋರೆಗಾಂವ್ ಆಗಮಿಸಲ್ಲಿದ್ದಾರೆ. ಸಸಿಹಿತ್ಲುವಿನಿಂದ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನವನ್ನು ಪ್ರತಿನಿಧಿಸಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಬಿಲ್ಲವರ ಹಿತವರ್ಧಕ ಸಂಘ(ರಿ.) ಸಸಿಹಿತ್ಲು ಇದರ ಮುಂಬಯಿ ಸಮಿತಿಯ ಅಧ್ಯಕ್ಷ ಸತೀಶ್ ಎನ್ ಕೋಟ್ಯಾನ್‍ರವರು ಮನವಿಪತ್ರ ಬಡುಗಡೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬಯಿಯ ಶ್ರೀಕೃಷ್ಣ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಕೈರಬೆಟ್ಟು ವಿಶ್ವನಾಥ ಭಟ್ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ಉದ್ಯಮಿ ಗಣೇಶ್ ಆರ್.ಪೂಜಾರಿ(ಏಷ್ಯಾಟಿಕ್ ಕ್ರೈನ್ ಪ್ರೈವೇಟ್ ಲಿಮಿಟೆಡ್), ಶ್ರೀನಿವಾಸ್ ಪಿ.ಸಾಫಲ್ಯ, (ಶನೀಶ್ವರ ದೇವಸ್ಥಾನ ಮಲಾಡ್) ಬಿಲ್ಲವರ ಎಸೋಸಿಯೇಶನ್ನಿನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ.ಕೊಟ್ಯಾನ್, ಸುರೇಂದ್ರ ಎ. ಪೂಜಾರಿ(ಸಾಯಿ ಕೇರ್ ಲಾಜಿಸ್ಟಿಕ್),  ಭಾರತ್ ಬ್ಯಾಂಕ್ ನಿರ್ದೇಶಕರಾದ ಅಶೋಕ್ ಎಮ್ ಕೋಟ್ಯಾನ್, ಚಂದ್ರಶೇಖರ ಎಸ್ ಪೂಜಾರಿ, ಭಾಸ್ಕರ್ ಎಮ್ ಸಾಲ್ಯಾನ್, ಗಂಗಾಧರ ಜೆ ಪೂಜಾರಿ, ಗಣೇಶ್ ಡಿ ಪೂಜಾರಿ, ನಾರಾಯಣ ಎಲ್ ಸುವರ್ಣ, ದಯಾನಂದ ಆರ್ ಕೋಟ್ಯಾನ್, ಸುರೇಶ್ ಬಿ ಸುವರ್ಣ, ಹೊಟೇಲ್ ಉದ್ಯಮಿ ಗಂಗಾಧರ ಅಮೀನ್ ಕರ್ನಿರೆ, ಹೊಟೇಲ್ ಉದ್ಯಮಿ ವಿನೋದ್ ಅಮೀನ್, ಬಿಲ್ಲವರ ಎಸೋಸಿಯೇಶನ್ ನವಿ ಮುಂಬಯಿ ಸ್ಥಳೀಯ ಕಛೇರಿಯ ಉಪ ಕಾರ್ಯಾಧ್ಯಕ್ಷ  ಕೃಷ್ಣ ಎಂ. ಪೂಜಾರಿ, ಹೋಟೆಲ್ ಉದ್ಯಮಿ ಮೋಹನ್ ಪೂಜಾರಿ ಆಗಮಿಸಲಿದ್ದಾರೆ. ಬಿಲ್ಲವರ ಹಿತವರ್ಧಕ ಸಂಘದ ಸ್ಥಾಪಕ ಸದಸ್ಯ ಮಂಜುನಾಥ್ ಆರ್. ಕೋಟ್ಯಾನ್, ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಹಿರಿಯ ಪತ್ರಕರ್ತ ಪರಮಾನದ ವಿ. ಸಾಲ್ಯಾನ್ ಅವರಿಗೆ ಅಭಿನಂದನ ಕಾರ್ಯಕ್ರಮ ನಡೆಯಲಿದ್ದು, ಬಿಲ್ಲವರ ಹಿತವರ್ಧಕ ಸಂಘ ಮುಂಬಯಿಯ ಉಪಾಧ್ಯಕ್ಷ ವಿಜಯಕುಮಾರ್ ಪಿ. ಸನಿಲ್ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. 

ಪ್ರಾರ್ಥನಾ ಭಜನ್ ಸಂಧ್ಯಾ, ನೃತ್ಯ ವೈವಿಧ್ಯ, ಸಂಗೀತ ವೈವಿಧ್ಯ ಮತ್ತು ಕೆ.ವಿ.ಎಸ್ ಎಂಟರ್‍ಟೈನ್‍ಮೆಂಟ್ ಮುಂಬಯಿ ಇವರಿಂದ ‘ಈ ರಾತ್ರೆಗ್ ಪಗೆಲ್ಗ್ ಯಾನ್’ ನಾಟಕ ನಡೆಯಲಿದೆ. ದೇಶ ಭಕ್ತಿಯನ್ನು ಹುಟ್ಟಿಸುವ ರಾಷ್ಟ್ರ ನಮನ ಕಾರ್ಯಕ್ರಮವು ಸಮಾರಂಭಕ್ಕೆ ಕಳೆ ನೀಡಲಿದೆ.

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು ವಾಸ್ತುಬದ್ಧವಾಗಿ, ಶಿಲಾಮಯವಾಗಿ ನಿರ್ಮಾಣವಾಗಲು ಪ್ರಸಿದ್ಧ ವಾಸ್ತುಶಿಲ್ಪಿ ಉಮೇಶ್ ಆಚಾರ್ಯರವರು ನೀಲ ನಕ್ಷೆ ನೀಡಿದ್ದು, ಸುಮಾರು ಮೂರು ಕೋಟಿ ರೂ.ಗಳ ಯೋಜನೆ ಸಿದ್ಧಗೊಂಡಿದೆ. ಈ ಯೋಜನೆಯ ಯಶಸ್ವಿಗಾಗಿ ಊರಿನಲ್ಲಿ ಸರ್ವ ಸಿದ್ಧತೆಗಳು ನಡೆಯುತ್ತಿದ್ದು, ಮುಂಬಯಿಯಲ್ಲಿ ರಚಿಸಲಾಗಿರುವ ಸಮಿತಿಯು ಉಳ್ಳಾಯ ಪರಿವಾರ ದೈವಗಳ ಈ ಪವಿತ್ರ ಕಾರ್ಯದಲ್ಲಿ ರಾತ್ರಿ ಹಗಲು ಶ್ರಮಿಸುತ್ತಿದ್ದು, ಮುಂಬಯಿಯ ದೈವಭಕ್ತ ದಾನಿಗಳು ಸಂಪೂರ್ಣ ಸಹಕಾರ ನೀಡಿದಾಗ ಈ ಯೋಜನೆಯ ಯಶಸ್ಸು ಸಾಧ್ಯ. ಆಗಸ್ಟ್ 15ರಂದು ತಾವೆಲ್ಲರೂ ಬಂಧು ಮಿತ್ರರೊಡಗೂಡಿ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಬಿಲ್ಲವರ ಹಿತವರ್ಧಕ ಸಂಘ (ರಿ) ಸಸಿಹಿತ್ಲು ಮತ್ತು ಮುಂಬಯಿ ಸಮಿತಿಯ ಪದಾಧಿಕಾರಿಗಳು ವಿನಮ್ರವಾಗಿ ವಿನಂತಿಸಿದ್ದಾರೆ.

*ಪರಮಾನಂದ ವಿ. ಸಾಲ್ಯಾನ್

Related posts

ಜ.6 ರಂದು ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶಂಕರಪುರ ಇದರ 38ನೇ ವರ್ಷದ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ರೋಡ್ : ಡಿ. 22ರಂದು 28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಅ. 24ರಂದು ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ 

Chandrahas

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ

Mumbai News Desk

ಜ. 12. ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಕೋಟಿ -ಚೆನ್ನಯ ಕ್ರೀಡೋತ್ಸವ

Mumbai News Desk

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk