————
ವಿಶ್ವ ಪ್ರಸಿದ್ಧ ಗಂಡುಕಲೆ ಎಂದೆನಿಸಿದ್ದ ಯಕ್ಷಗಾನ ಕಲೆಯು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ಹಿಂದಿನ ಕಾಲದಲ್ಲಿ ಹಿರಿಯರಿಗೆ ಮಾತ್ರ ಮೀಸಲಿದ್ದಂತಿತ್ತು.ಆದರೆ ಈಗ ಯುವ ಜನಾಂಗವನ್ನು ಸಹಾ ಯಕ್ಷಗಾನವು ತನ್ನತ್ತ ಸೆಳೆಯುತ್ತಿದೆ. ಅಲ್ಲದೇ ಯಕ್ಷಗಾನವು ಇದೀಗ ವ್ಯವಸಾಯಿಕವಾಗಿ ಪರಿಣಮಿಸಿದೆ. ಯಕ್ಷಗಾನ ಕಲೆಯ ವೈಭವವನ್ನು ಉಳಿಸಿ ಬೆಳೆಸುವಲ್ಲಿ ಮುಂಬಯಿ ಕನ್ನಡಿಗರ ಪಾಲು ಹಿರಿದು ಎಂದರೂ ಅತಿಷಯೋಕ್ತಿ ಆಗಲಾರದು.
ಇದೀಗ ಮುಂಬಯಿಯ ಮಲಾಡ್ ಪೂರ್ವದ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಹದಿನೈದನೇ ವಾರ್ಷಿಕೋತ್ಸವದ ಸಲುವಾಗಿ ಇದೇ ಬರುವ ಆಗಸ್ಟ್ 18 ರಂದು ಪೂಜಾ ಸಮಿತಿಯ ಸದಸ್ಯರಿಂದ ” ಶ್ರೀ ದೇವಿ ಮಹಾತ್ಮೆ” ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಪೂಜಾ ಸಮಿತಿಯ ಈ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿಕೊಂಡ ನ್ಯಾಯವಾದಿ ಜಗನ್ನಾಥ ಶೆಟ್ಟಿಯವರ ಮುತುವರ್ಜಿಯಿಂದ ಸಮಿತಿಯ ಸದಸ್ಯರ ಸಹಕಾರದಿಂದ ಮತ್ತು ತುಳು ಕನ್ನಡಿಗ ಧಾನಿಗಳಿಂದ ಈ ಯಕ್ಷಗಾನ ನಡೆಯಲಿದೆ.
ಸಮಿತಿಯ ದಶಮಾನೋತ್ಸವ ಸಂದರ್ಭದಲ್ಲಿ ಕೂಡ ಯಕ್ಷಗಾನವನ್ನು ಪ್ರದರ್ಶಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿದೆ.
ಇದೀಗ ಮತ್ತೆ 5 ವರ್ಷಗಳ ಬಳಿಕ ಸುಮಾರು 50 ಜನ ಹಿರಿಯರು ಕಿರಿಯರು ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ .ಅದರಲ್ಲಿ ಕನ್ನಡ ಓದು ಬಾರದ ಆಂಗ್ಲ ಮಾಧ್ಯಮದ ಮಕ್ಕಳೊಂದಿಗೆ ಮಹಿಳೆಯರು ಹಾಗೂ ಪುರುಷರು ಈ ಯಕ್ಷಗಾನದಲ್ಲಿ ಪಾತ್ರ ವಹಿಸಲಿದ್ದಾರೆ. ಮುಂಬಯಿಯ ನಾಮಾಂಕಿತ ಯಕ್ಷಗಾನ ತರಬೇತಿ ನೀಡುವ ಯಕ್ಷಗುರು ನಾಗೇಶ್ ಕುಮಾರ್ ಪೊಳಲಿಯವರು ತರಬೇತಿ ನೀಡಿ ನಿರ್ದೇಶಿಸಲಿದ್ದಾರೆ.
ಯಕ್ಷಗಾನ ಪ್ರದರ್ಶನಕ್ಕೆ ಊರಿನ ಪ್ರಸಿದ್ಧ ಕಲಾವಿದರು ಭಾಗವತಿಕೆ,ಚಂಡೆ,ಮದ್ದಳೆ ಪಾಲ್ಗೊಳ್ಳಲಿದ್ದಾರೆ.
ಯಕ್ಷಗಾನದ ಪ್ರಾಯೋಜಕರಾಗಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಸಿ.ಎ.ಸುರೇಂದ್ರ ಶೆಟ್ಟಿ, ವೆಲ್ ಕಮ್ ಪೇಕೇಜಿಂಗ್ ಇಂಡಸ್ಟ್ರೀಸ್ ನ CMD ಶ್ರೀ ರವೀಂದ್ರನಾಥ್ ಭಂಡಾರಿ ಮತ್ತು ಸಮಿತಿಯ ಯುವ ವಿಭಾಗದ ಪ್ರಣೀತ ವರುಣ್ ಶೆಟ್ಟಿಯವರು ವಹಿಸಲಿದ್ದಾರೆ…
ಪಾತ್ರವರ್ಗದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಯಕ್ಷಗಾನ ಕಲಾವಿದ ಸಿ.ಎ.ಸುರೇಂದ್ರ ಶೆಟ್ಟಿ- ರಕ್ತ ಬೀಜಾಸುರ,
ಸುನಂದ ಬಂಗೇರ- ಆದಿ ಮಾಯೆ, ದಿಶಾ ಕರ್ಕೇರ- ಬ್ರಹ್ಮ, ಶ್ವೇತ ಪೂಜಾರಿ-ವಿಷ್ಣು, ಹರ್ಷಿತ ಪೂಜಾರಿ-ಮಹೇಶ್ವರ, ಶ್ರೀಮತಿ ಆಚಾರ್ಯ- ಮಧು, ಭಾರತಿ ಆಚಾರ್ಯ- ಕೈತಬ, ಲಾಸ್ಯ ಕುಲಾಲ- ಮಾಲಿನಿ, ಸೂರಪ್ಪ ಕುಂದರ್- ಮಾಲಿನಿ ಧೂತ, ಪ್ರಥಮ್ ಪೂಜಾರಿ-ಸುಪರ್ಶಕ, ಸನತ್ ಪೂಜಾರಿ-ಮಹಿಷಾಸುರ, ನಿಧಿ ನಾಯಕ್-ಶಂಖಾಸುರ, ರಾಕ್ಷಸ ಬಲದಲ್ಲಿ- ನವೀನ್ ಸಾಲ್ಯಾನ್,ವಿನೀತ್ ಪೂಜಾರಿ, ಅಕ್ಷರಿ ಆಚಾರ್ಯ, ಅದಿತಿ ಆಚಾರ್ಯ, ರಚಿತ್ ಸುವರ್ಣ, ಅಸ್ಮಿತ್ ಪೂಜಾರಿ, ಶ್ರುತಿ ನಾಯಕ್, ಪ್ರಜ್ವಲ್ ನಾಯಕ್, ರತ್ನಾ ಪೂಜಾರಿ, ಪ್ರಥಮ ದೇವೇಂದ್ರನಾಗಿ ವೀಣಾ ಆಚಾರ್ಯ, ದೇವೇಂದ್ರ ಬಲದಲ್ಲಿ – ಯುಕ್ತಿ ಆಚಾರ್ಯ, ಸೃಷ್ಟಿ ಪೂಜಾರಿ, ನಿಥಿಕಾ ಆಚಾರ್ಯ, ಯಜ್ಞಶ್ರೀ ಶೆಟ್ಟಿಗಾರ್, ರಾಶಿ ಸುವರ್ಣ, ಲಾಹರಿ ಸಾಲ್ಯಾನ್, ಆಸ್ಮಿಕಾ ಪೂಜಾರಿ, ಮಹಿಷ ವಧೆ ದೇವಿಯಾಗಿ ಶಿವಾನಿ ಪ್ರಭು, ಸುರೇಂದ್ರ ಆಚಾರ್ಯ-ಸಿಂಹ, ಪವನ್ ರಾವ್-ಶುಂಭ, ಪ್ರಣೀತ ವಿ.ಶೆಟ್ಟಿ- ಕೌಷಿಕೆ ದೇವಿ, ಶ್ರುತಿ ಎಸ್ ಪೂಜಾರಿ-ಎರಡನೇ ದೇವೇಂದ್ರ, ಸುದೀಪ್ ಪೂಜಾರಿ-ಶಂಡಾಸುರ, ರಷ್ಮಿ ಪೂಜಾರಿ-ಮುಂಡಾಸುರ, ವಿದ್ಯಾ ಆಚಾರ್ಯ -ಧೂಮ್ ರಕ್ಷ, ನವೀನ್ ಸಾಲ್ಯಾನ್-ಕಾಳಿ, ಸಪ್ತ ಮಾತೆಯರಾಗಿ ಪದ್ಮಾವತಿ ಪೂಜಾರಿ.ವಿಜಯಶ್ರೀ ಆಚಾರ್ಯ, ವಿದ್ಯಾ ನಾಯಕ್, ನಳಿನಿ ಕರ್ಕೇರ, ಹರಿಣಾಕ್ಷಿ ಮೂಲ್ಯ, ಪ್ರಮೀಳಾ ಆಚಾರ್ಯ, ಶ್ರೀದೇವಿ ಆಚಾರ್ಯ ಹಾಗೂ ಪ್ರಥಮ್ ಪೂಜಾರಿ ರಕ್ತೇಶ್ವರಿಯಾಗಿ. ದರ್ಶನ ಪಾತ್ರಿಯಾಗಿ ಸುಂದರ ಪೂಜಾರಿ ಭಾಗವಹಿಸಲಿದ್ದಾರೆ.
*ಬನ್ನಿ ನಾವೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಸಾಕ್ಷಿಯಾಗೋಣ* * *ಯಕ್ಷಗಾನಂ ಗೆಲ್ಗೆ*
ಸೂರಪ್ಪ ಕುಂದರ್ ಮಲಾಡ್
———-
ಯಕ್ಷ ಗುರು ನಾಗೇಶ್ ಕುಮಾರ್ ಪೊಳಲಿ:
ಕಲೆಯ ಜೊತೆಗೆ ಉತ್ತಮ ಭವಿಷ್ಯದ ಜೀವನ ಪಥ ಶೋಧಿಸುತ್ತಾ ಮುಂಬಯಿಗೆ ಬಂದ ನಾಗೇಶ್ ಪೊಳಲಿಯವರು ಪರಿಶ್ರಮದಿಂದ ಯಕ್ಷಗಾನ ರಂಗದಲ್ಲಿ ಮಿಂಚಿ ಪ್ರಸಿದ್ಧಿ ಪಡೆದಿದ್ದಾರೆ.
ಯಕ್ಷಗಾನ ರಂಗದಲ್ಲಿ ನೂರಾರು ಪಾತ್ರಕ್ಕೆ ತಾನು ಬಣ್ಣ ಹಚ್ಚಿ ತನ್ನ ಪ್ರತಿಭೆಯನ್ನು ಮೆರೆದವರು. ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನದ ಅಭಿರುಚಿ ಉಳ್ಳವರಾಗಿದ್ದು ಯಕ್ಷಗಾನವನ್ನೇ ತನ್ನ ವೃತ್ತಿ ಜೀವನದಲ್ಲಿ ಅಳವಡಿಸಿ ಕೊಂಡು ಯಶಸ್ವೀ ಜೀವನ ಸಾಗಿಸುತ್ತಿದ್ದಾರೆ.
ಮೃದುಭಾಷಿ,ಸರಳತೆಯ ವ್ಯಕ್ತಿತ್ವವುಳ್ಳ ನಾಗೇಶ್ ರವರು ಪೊಳಲಿ ಸದಾಶಿವ ಕುಂದರ್ ಮತ್ತು ಗಾಯತ್ರಿ ಸಾಲ್ಯಾನ್ ದಂಪತಿಯ ಪುತ್ರನಾಗಿ ಜನಿಸಿದ ನಾಗೇಶ್ ಕುಮಾರ್ ಪೊಳಲಿಯವರು ಕೆಲ ಸಮಯದಿಂದ ವೃತ್ತಿಪರ ಮೇಳದಲ್ಲಿ ದುಡಿದ ಅನುಭವ ಇರುವುದರಿಂದ ತರಬೇತಿ ನೀಡುವ ಪ್ರವೃತ್ತಿ ಬೆಳೆಸಿಕೊಂಡು ಇದೀಗ ತಮ್ಮದೇ ಆದ ಯಕ್ಷಗಾನ ತರಬೇತಿ ಶಿಬಿರ *ಯಕ್ಷ ಪ್ರಿಯ ಬಳಗ* ವನ್ನು ಮುಂಬಯಿಯ ಮೀರಾ ರೋಡ್ ಪರಿಸರದಲ್ಲಿ ಸ್ಥಾಪಿಸಿದ ಇವರು ಸುಮಾರು ನೂರಕ್ಕೂ ಮಿಕ್ಕಿ ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ. ಮಾತ್ರವಲ್ಲದೆ ಪ್ರಸ್ತುತ ಮಲಾಡ್, ನಲ್ಲಸೊಪಾರ ಹಾಗೂ ಭಿವಂಡಿಗಳಲ್ಲಿ ಕೂಡಾ ಯಕ್ಷಗಾನ ತರಬೇತಿ ನೀಡುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ಸಾವಿರಕ್ಕೂ ಮಿಕ್ಕಿ ಆಸಕ್ತರಿಗೆ ತರಬೇತಿ ನೀಡಿ ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸುವ ಇವರಿಗೆ ಮುಂಬಯಿಯ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ.
ಇದೀಗ ನಾಗೇಶ್ ಪೊಳಲಿಯವರಿಂದ ತರಬೇತಿ ಪಡೆದ, ಮಲಾಡ್ ಪೂರ್ವದ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಅಂಗವಾಗಿ ನಡೆಯಲಿರುವ *ಶ್ರೀ ದೇವಿ ಮಹಾತ್ಮೆ* ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಎಂಟು ವರ್ಷದ ಮಗುವಿನಿಂದ 65 ವರ್ಷದ ಹಿರಿಯರಿಗೆ ಹಿರಿಯರು ಅಭಿನಯಿಸುವ ಈ ಯಕ್ಷಗಾನದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ಮಕ್ಕಳು ಅವರು ಕನ್ನಡ ಭಾಷೆಯನ್ನು ಕಲಿಸಿ ಯಕ್ಷಗಾನ ತರಬೇತಿಯನ್ನು ಸಮರ್ಥ ರೀತಿಯಲ್ಲಿ ನೀಡಿ. ಆಗಸ್ಟ್ 18ರ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ ಮಲಾಡ್ ಪೂರ್ವದ ಸ್ವಾಮಿನಾರಾಯಣ ಸಭಾಂಗಣದಲ್ಲಿ ನಡೆಯಲಿರುವ ಯಕ್ಷಗಾನದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಲಿದ್ದಾರೆ.