April 2, 2025
ಮುಂಬಯಿ

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ… ಹರೀಶ್ ಜಿ ಅಮೀನ್

ಚಿತ್ರ ವರದಿ: ಉಮೇಶ್ ಕೆ ಅಂಚನ್

ಆಟಿ ತಿಂಗಳನ್ನು ನೆನಪಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ತಮಗೆಲ್ಲರಿಗೂ ಅಭಿನಂದನೆಗಳು. ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಬಿಲ್ಲವರ ಅಸೋಸಿಯೇಶನ್ ಸಾಮಾಜಿಕ ಸೇವೆಯೊಂದಿಗೆ ಶೈಕ್ಷಣಿಕ ಸೇವೆಗೂ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ. ಶೈಕ್ಷಣಿಕವಾಗಿ ಪ್ರತೀ ವರ್ಷ ಲಕ್ಷಾಂತರ ರೂಪಾಯಿಯನ್ನು ವ್ಯಯಿಸುತ್ತಿದೆ. ಸಮಾಜದ ಮಕ್ಕಳಿಗೆ ಅಗತ್ಯವಿರುವ ಉನ್ನತ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸುವುದು ಅಸೋಸಿಯೇಶನಿನ ಮುಂದಿನ ಗುರಿಯಾಗಿದೆ. ಈ ಕಾರ್ಯಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಬಿಲ್ಲವರ ಅಸೋಸಿಯೇಶನಿನ ಅದ್ಯಕ್ಷ ಹರೀಶ್ ಜಿ.ಅಮೀನ್ ಹೇಳಿದರು.
ಅವರು ಅ.11ರಂದು ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯು ಮೀರಾ ರೋಡ್ ಪೂರ್ವದ ಬಾಲಾಜಿ ಇಂಟರ್ನ್ಯಾಷನಲ್ ಹೋಟೇಲಿನ ಸಭಾಗ್ರಹದಲ್ಲಿ ಆಯೋಜಿಸಿದ್ದ ಆಟಿಡೊಂಜಿ ದಿನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಕೇಂದ್ರ ಶೈಕ್ಷಣಿಕ ಉಪಸಮಿತಿಯ ಕಾರ್ಯದರ್ಶಿ ಕೊಕ್ಕರ್ಣೆ ಹರೀಶ್ ಪೂಜಾರಿ ಆಟಿ ತಿಂಗಳ ಮಹತ್ವದ ಬಗ್ಗೆ ಹಾಗೂ ಅಸೋಸಿಯೇಶನಿನ ಶೈಕ್ಷಣಿಕ ಸೇವೆಯ ಬಗ್ಗೆ ವಿವರಿಸಿದರು.
ಅಸೋಸಿಯೇಶನಿನ ಉಪಾಧ್ಯಕ್ಷೆ ಜಯಂತಿ ವರದ್ ಉಳ್ಳಾಲ್ ಮಾತನಾಡಿ ಪ್ರಸ್ತುತ ಅದ್ಯಕ್ಷ ಹರೀಶ್ ಜಿ.ಅಮೀನ್ ರವರು ಸಮಾಜಕ್ಕೆ ಒಳ್ಳೆಯ ನೇತೃತ್ವವನ್ನು ನೀಡಿದ್ದಾರೆ. ಸಮಾಜವನ್ನು ಬಲಿಷ್ಠ ಗೊಳಿಸಲು ನಾವೆಲ್ಲ ಅವರಿಗೆ ಸಹಕರಿಸೋಣ ಎಂದರು.


ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪಲಿಮಾರು ಸಂದರ್ಭೋಚಿತವಾಗಿ ಮಾತನಾಡಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕರ್ಕೇರರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದಿಗೂ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಇದೇ ರೀತಿ ಸಹಕರಿಸಬೇಕೆಂದು ವಿನಂತಿಸಿದರು. ಸ್ಥಳೀಯ ಸಮಿತಿಯ ಎಲ್ಲಾ ಕಾರ್ಯಗಳಿಗೆ ತುಂಬು ಹೃದಯದ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಅದ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು.
ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಲಂಕೃತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಿಂಗಾರ ಹೂ ಬಿಡಿಸಿ ಅದ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪರಿಸರದ ಶಾಲಾ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡಲಾಯಿತು. ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು, ದಾನಿಗಳನ್ನು ಹಾಗೂ ಸುಮಾರು 52 ಬಗೆಯ ಆಟಿ ತಿಂಗಳನ್ನು ನೆನಪಿಸುವ ತಿಂಡಿ ತಿನಿಸು ಮತ್ತು ಖಾದ್ಯ ಪದಾರ್ಥಗಳೊಂದಿಗೆ ಊಟದ ವ್ಯವಸ್ಥೆ ಮಾಡಿದ್ದ ಮಹಿಳೆಯರನ್ನು ಸತ್ಕರಿಸಲಾಯಿತು.

ವೇದಿಕೆಯಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಮೋಹನ್ ಕೋಟ್ಯಾನ್, ಕೇಂದ್ರ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ್ ಕಾರ್ಯದರ್ಶಿ ಸಬಿತಾ ಕೋಟ್ಯಾನ್ , ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷರುಗಳಾದ ಎನ್.ಪಿ.ಕೋಟ್ಯಾನ್ ಮತ್ತು ದಿನೇಶ್ ಎಸ್.ಸುವರ್ಣ, ಕೋಶಾಧಿಕಾರಿ ಶೋಭಾ ಎಚ್.ಪೂಜಾರಿ, ಜತೆ ಕಾರ್ಯದರ್ಶಿ ಜಯಲಕ್ಷ್ಮೀ ಎಸ್.ಸಾಲ್ಯಾನ್ ಉಪಸ್ಥಿತರಿದ್ದರು.ಗೌರವ ಕಾರ್ಯದರ್ಶಿ ಜಿ.ಕೆ.ಕೆಂಚನಕೆರೆ ಕಾರ್ಯಕ್ರಮವನ್ನು ನಿರೂಪಿಸಿದರು. ಪಿಲಾರು ಶಂಕರ್ ಪೂಜಾರಿ, ಗಣೇಶ್ ಎಚ್. ಬಂಗೇರ,ಭೂಮಿಕಾ ಜಿ.ಸಾಲ್ಯಾನ್ ಸಹಕರಿಸಿದರು.
ಸದಸ್ಯ ಸದಸ್ಯೆಯರಿಂದ ಸಂಗೀತ ರಸಮಂಜರಿ, ಪುಟಾಣಿ ಗಳಿಂದ ಜಾನಪದ ನೃತ್ಯ, ಮಹಿಳಾ ವಿಭಾಗದ ಸದಸ್ಯೆಯರಿಂದ ಆಟಿ ಕಡಂಜ ನೃತ್ಯ ಹಾಗೂ ಅಶೋಕ್ ವಳದೂರು ರಚಿಸಿ ನಿರ್ದೇಶಿಸಿರುವ ‘ಅಣ್ಣಪ್ಪನ ಮದಿಮೆ’ ಕಿರುನಾಟಕ ಪ್ರದರ್ಶನ ನಡೆಯಿತು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

Related posts

ಶ್ರೀ ಕ್ಷೇತ್ರ ಅಸಲ್ಫ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ  ದೇವಸ್ಥಾ ಜೀರ್ಣೋದ್ಧಾರದ ಕರ ಪತ್ರಿಕೆ ಬಿಡುಗಡೆ

Mumbai News Desk

ಮಾನನಷ್ಟ ಪ್ರಕರಣದಲ್ಲಿ ಸಂಜಯ್ ರಾವುತ್ ದೋಷಿ, ಜೈಲು ಶಿಕ್ಷೆ – ನ್ಯಾಯಾಲಯದ ಮಹತ್ತರ ನಿರ್ಧಾರ.

Mumbai News Desk

ಕುಲಾಲ ಸಂಘ ಮುಂಬಯಿ,ಥಾಣ, ಕಸರಾ , ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಹಳದಿ ಕುಂಕುಮ

Mumbai News Desk

ಕುಲಾಲ ಸಂಘ ಮುಂಬಯಿ ; 93ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀಮದ್ಭಾರತ ಮಂಡಳಿಯ ವಾರ್ಷಿಕ ಮಂಗಳೋತ್ಸವ : ಜಗನಾಥ ಆರ್ ಕಾಂಚನ್ ಗೆ ಅತ್ಯುತ್ತಮ ಕಾರ್ಯಕರ್ತ ಪುರಸ್ಕಾರ.

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ 32 ನೇ ವಾರ್ಷಿಕ ಸಾರ್ವಜನಿಕ ಶನಿಶ್ವರ ಪೂಜೆ ಸಂಪನ್ನ

Mumbai News Desk